ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಬಂಧಿಸಿದ ರಾಮನಗರ ಪೊಲೀಸ್

ರಾಮನಗರ, ಆಗಸ್ಟ್ 14: ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಪೊಲೀಸ್ ವ್ಯಾಪ್ತಿಯಲ್ಲಿ ಜುಲೈ 28 ರಂದು 11 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ, ಬಾಲಕಿಯ ಕಿವಿಯಲ್ಲಿದ್ದ ಓಲೆಗಳನ್ನು ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ.

Recommended Video

      CT Ravi ಪ್ರಕಾರ ನಡೆದ ಗೋಲಿಬಾರ್‌ಗೆ Zameer Ahmed ಡೈರೆಕ್ಟರ್ ಹಾಗು ಪ್ರೊಡ್ಯೂಸರ್ | Oneindia Kannada

      ಆರೋಪಿಯು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ ಸುಮಾರು 14 ಬೈಕ್ ಕಳವು ಪ್ರಕರಣಗಳನ್ನು ಅಕ್ಕೂರು ಠಾಣೆಯ ಪೊಲೀಸರು ಭೇದಿಸಿದ್ದಾರೆ.

      ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರ ಗ್ರಾಮದ ಪುನೀತ್ (30) ಎಂಬಾತನನ್ನು ಬಂಧಿಸಿದ್ದು, ರಾಜ್ಯದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಪುನೀತ್ ಕಳವು ಮಾಡಿದ್ದ 14 ಬೈಕ್ ಹಾಗೂ ಬಾಲಕಿಯ ಚಿನ್ನದ ಓಲೆ ಸೇರಿದಂತೆ ಸುಮಾರು 6 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

      Ramanagara: Police Have Arrested A Man Accused Of Sexually Abusing On Minor Girl

      ಇನ್ನು ಆರೋಪಿ ಪುನೀತ್ ಬಂಧನದಿಂದ ರಾಮನಗರ ಜಿಲ್ಲೆಯ 4 ಪ್ರಕರಣ, ಮಂಡ್ಯ ಜಿಲ್ಲೆಯ 3 ಪ್ರಕರಣ, ಬೆಂಗಳೂರು ನಗರದಲ್ಲಿ 2 ಪ್ರಕರಣ ಹಾಗೂ ಹಾವೇರಿ ಜಿಲ್ಲೆ, ತುಮಕೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ 1 ಬೈಕ್ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.

      Ramanagara: Police Have Arrested A Man Accused Of Sexually Abusing On Minor Girl

      ಇನ್ನು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಪುನೀತ್ ವಿರುದ್ಧ ಐಪಿಸಿ ಕಲಂ 363, 376, 392 ಹಾಗೂ 4, 6, 8 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+