ಎಚ್.ಡಿ.ಕೆ ಸಿಎಂ ಆಗಲಿ ಎಂದು ಚನ್ನಪಟ್ಟಣದ ದರ್ಗಾದಲ್ಲಿ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ
ರಾಮನಗರ, ಮೇ, 12: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 10ಕ್ಕೆ ಮುಗಿದಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಲಿ ಎಂದು ಮುಸ್ಲಿಮರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದರು.
ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಮುಸ್ಲಿಂ ಸಮುದಾಯದವರು ಚನ್ನಪಟ್ಟಣದ ದೊಡ್ಡದರ್ಗಾದಲ್ಲಿ ಪ್ರಾರ್ಥನೆ ಸಲ್ಲಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರು ಎಚ್.ಡಿ.ಕೆ. ಜಯಗಳಿಸಿ ಸಿಎಂ ಆಗಲಿ ಎಂದು ಬೇಡಿಕೊಂಡರು.

ಅಲ್ಲದೆ ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿಯೂ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮೀಸಲಾತಿ ತೆಗೆದುಹಾಕಿರುವ ಬಿಜೆಪಿ ವಿರುದ್ಧ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಬಾರದು ಎಂದು ದರ್ಗಾದಲ್ಲಿ ಪ್ರಾರ್ಥನೆ ಮಾಡಿದರು.
ಸಿಎಂ ಆದ ಬಳಿಕ ಮತ್ತೆ ಮುಸ್ಲಿಂ ಮೀಸಲಾತಿ ಕೊಡುವ ಬಗ್ಗೆ ಎ.ಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದು, ಈ ಹಿನ್ನೆಲೆ ಅವರ ಪರವಾಗಿ ಚನ್ನಪಟ್ಟಣ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಸೈಯದ್ ಫಾಜಿಲ್ ನೇತೃತ್ವದಲ್ಲಿ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು.
ಎಲ್ಲರ ಚಿತ್ತ ಮತ ಎಣಿಕೆಯತ್ತ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಆರ್.ಆಶೋಕ್ ಸೇರಿದಂತೆ ಘಟಾನುಘಟಿ ಆಭ್ಯರ್ಥಿಗಳ ಸ್ಪರ್ದೆಯಿಂದಾಗಿ ರಾಜ್ಯದ ಗಮನ ಸೆಳೆದಿರುವ ರೇಷ್ಮೆನಾಡು ರಾಮನಗರ ಜಿಲ್ಲೆಯ ಚುನಾವಣಾ ಫಲಿತಾಂಶದತ್ತ ಜನರು ತಮ್ಮ ಚಿತ್ತವನ್ನು ನೆಟ್ಟಿದ್ದಾರೆ.
ಈಗಾಗಲೇ ಜಿಲ್ಲೆಯ ನಾಲ್ಕು ತಾಲ್ಲೂಕಿನ ಆಭ್ಯರ್ಥಗಳ ಹಣೆ ಬರಹವನ್ನು ಮೇ 10ರಂದು ಮತದಾರ ಪ್ರಭು ತಮ್ಮ ಮತದಾನದ ಮೂಲಕ ಇವಿಎಂ ಮತ ಯಂತ್ರದಲ್ಲಿ ಭದ್ರಪಡಿಸಿದ್ದಾನೆ. ಅಭ್ಯರ್ಥಿಗಳ ಹಣೆಬರಹ ಹೊತ್ತ ಇವಿಎಂ ಮತ ಯಂತ್ರಗಳು ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿಗಳ ಸರ್ಪಗಾವಲಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.
ಹಳೆ ಬೆಂಗಳೂರು ಮೈಸೂರು ಹೆದ್ದಾರಿಗೆ ಪಕ್ಕದ ಜಾನಪದಲೋಕದ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಸೇರಿದಂತೆ ಮತ ಎಣಿಕೆ ನಡೆಯುವ ಕಟ್ಟಡಕ್ಕೆ ಬಿಗಿ ಭದ್ರತೆ ಎರ್ಪಡಿಸಲಾಗಿದೆ. ಭದ್ರತೆಗಾಗಿ 2 ಪ್ಯಾರಾ ಮಿಲಿಟರಿ ಪೋರ್ಸ್, 2 ಕೆಎಸ್ಆರ್ಪಿ ತುಕಡಿ, ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್ಸ್‌ಪೆಕ್ಟರ್, 4 ಜನ ಸಬ್ ಇನ್ಸ್‌ಪೆಕ್ಟರ್ ಹಾಗೂ 30 ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯ ಒಟ್ಟು 9,04,702 ಮತದಾರಲ್ಲಿ ಶೇಕಡಾ 85.04 ಅಂದರೆ 7,69,338 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಾಳೆ ಮೇ 13ರಂದು ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಮತ ಕ್ಷೇತ್ರದ ಒಂದು ಕೊಠಡಿಗೆ 7 ಟೇಬಲ್‍ನಂತೆ ಒಟ್ಟು 14 ಮತ ಏಣಿಕೆ ಟೇಬಲ್‍ಗಳು ಹಾಗೂ ಅಂಚೆ ಮತದಾನಕ್ಕೆ 1 ಕೊಠಡಿಯಲ್ಲಿ 3 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಮತ ಏಣಿಕೆ ಸಂದರ್ಭದಲ್ಲಿ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಸಹಾಯಕರು, ಒಬ್ಬರು ಮೇಲ್ವಿಚಾರಕರು ಹಾಗೂ 400 ಸಿಬ್ಬಂದಿಗಳನ್ನು ಮತ ಏಣಿಕೆಗೆ ಕಾರ್ಯಕ್ಕೆ ಜಿಲ್ಲಾಢಳಿತ ನಿಯೋಜನೆ ಮಾಡಿದೆ.
ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುವ ಮತ ಎಣಿಕೆ ಕಾರ್ಯ ಬಹುತೇಕ ಸುಮಾರು 11 ಗಂಟೆಯ ಸಮಯಕ್ಕೆ ಅಭ್ಯರ್ಥಿಗಳ ಸೋಲು ಗೆಲುವಿನ ಸಂಪೂರ್ಣ ಚಿತ್ರಣ ಬಯಲಾಗುವ ನಿರೀಕ್ಷೆಯಿದೆ.

Click it and Unblock the Notifications