ಕುಮಾರಸ್ವಾಮಿ ಕಳೆದ ಬಾರಿ ನನ್ನನ್ನು ಮೋಸದಿಂದ ಸೋಲಿಸಿದ್ದಾರೆ- ಸಿ.ಪಿ.ಯೋಗೇಶ್ವರ್ ಆರೋಪ

ರಾಮನಗರ ಡಿಸೆಂಬರ್‌ 23: ನನಗೆ ಬಿಜೆಪಿ ಮಾತೃ ಪಕ್ಷ. 2023 ರ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಘೋಷಣೆ ಮಾಡಿದ್ದಾರೆ.

ಬಿಜೆಪಿಯಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ಪಕ್ಷಾಂತರ ಎಂಬ ವದಂತಿಯನ್ನು ಅಲ್ಲಗಳೆದಿದ್ದಾರೆ.

ರಾಮನಗರ ದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ಆಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ನಾನು ವೈಯಕ್ತಿಕವಾಗಿ ಬಿಜೆಪಿ ಪಕ್ಷದಿಂದ ಹೆಸರು ಗಳಿಸಿದ್ದೇನೆ. ಹಾಗಾಗಿ ನಾನು ಚನ್ನಪಟ್ಟಣ ದಿಂದ ಸ್ಪರ್ಧೆ ಮಾಡುತ್ತೇನೆ ಕ್ಷೇತ್ರದ ಜನರು ನನ್ನ ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಕಳೆದ ಬಾರಿ ನನ್ನನ್ನು ಮೋಸ ಮಾಡಿ ಸೋಲಿಸಿದ್ದಾರೆ

ಕುಮಾರಸ್ವಾಮಿ ಕಳೆದ ಬಾರಿ ನನ್ನನ್ನು ಮೋಸ ಮಾಡಿ ಸೋಲಿಸಿದ್ದಾರೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಬಿಜೆಪಿ ಅವರಿಗೆ ಧನ್ಯವಾದ ಹೇಳಬೇಕು. ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಲಿಲ್ಲ. ಜಿಲ್ಲೆಗೆ ಬಹಳಷ್ಟು ಅಭಿವೃದ್ಧಿಗಳು ಬಿಜೆಪಿ ಸರ್ಕಾರದಲ್ಲಿ ಆಗಿವೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಕುಮಾರಸ್ವಾಮಿ ಕಳೆದ ಬಾರಿ ನನ್ನನ್ನು ಮೋಸ ಮಾಡಿ ಸೋಲಿಸಿದ್ದಾರೆ. ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಮತ ಹಾಕಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನನ್ನನ್ನು ತೀರಿಸುವವರು, ಉಳಿಸುವವರು ನನ್ನ ಕ್ಷೇತ್ರದ ಮತದಾರರು ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.

2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಚಟುವಟಿಕೆ ಆರಂಭಿಸಿವೆ. ಮುಂದಿನ ದಿನಗಳಲ್ಲಿ‌ ಚನ್ನಪಟ್ಟಣ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ವತಿಯಿಂದ ಜನಸಂಕಲ್ಪಾ ಯಾತ್ರೆ ಮಾಡಲಾಗುತ್ತದೆ. ಜೆಡಿಎಸ್ ಪಕ್ಷದವರು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನನ್ನ ವಿರುದ್ದವಾಗಿ ಸ್ಪರ್ಧೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಬಯಸಿದ್ದಾರೆ. ನಾನು ಕೂಡ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಿಮ್ಮದೇ ಕುಟುಂಬದ ಅಧಿಕಾರ ನಡೆಸಬೇಕಾ..?

ಜಿಲ್ಲೆಯಲ್ಲಿ ನಿಮ್ಮದೇ ಕುಟುಂಬದ ಅಧಿಕಾರ ನಡೆಸಬೇಕಾ..?

ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ ನೋಡಿದ್ದೇನೆ. ಜೆಡಿಎಸ್‌ನ ಕಾರ್ಯಕರ್ತರೇ ಅವರ ಮುಖಂಡರುಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.‌ ಒಂದು ಕುಟುಂಬದಲ್ಲಿ ಎಷ್ಟು ಜನ ಸ್ಪರ್ಧೆ ಮಾಡುತ್ತಾರೆ. ಜನಸಾಮಾನ್ಯರ ಮನಸ್ಸಿನಲ್ಲಿ ಈ ರೀತಿ ಒಂದು ಪ್ರಶ್ನೆ ಮೂಡುತ್ತಿದೆ. ಜಿಲ್ಲೆಯಲ್ಲಿ ನಿಮ್ಮದೇ ಕುಟುಂಬದ ಅಧಿಕಾರ ನಡೆಸಬೇಕಾ..? ಎಂದು ಪ್ರಶ್ನೆ ಮಾಡಿದ ಯೋಗೇಶ್ವರ್‌, ನಮ್ಮ ಜಿಲ್ಲೆಯ ಜನರಿಗೆ ಸ್ವಾಭಿಮಾನ ಇದೆ ಎಂದರು.

ನಮ್ಮ ಪಕ್ಷದ ಒಂದು ಕಾರ್ಯಕ್ರಮದಲ್ಲಿ ಸಂತೋಷ್ ಜೀ ಅವರು ಒಂದು ಅಂಶವನ್ನು ಉಲ್ಲೇಖ ಮಾಡಿದ್ದಾರೆ. ಚುನಾವಣೆ ಬಂದ ಸಂದರ್ಭದಲ್ಲಿ ಜನರ ಮುಂದೆ ಹೋಗುತ್ತಾರೆ ಕಣ್ಣೀರು ಹಾಕುತ್ತಾರೆ. ರಾಜ ಮನೆತನದ ರೀತಿ ಒಂದೇ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ಸಂತೋಷ್ ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದವರು ಇಡೀ ದೇಶದಲ್ಲಿ ಅವರು ಪರಿಚಿತರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅವರ ಮೇಲೆ ಅಪಾರವಾದ ಗೌರವ ಇದೆ. ಸಂತೋಷ್ ಜೀ ಅವರ ಬಗ್ಗೆ ಕುಮಾರಸ್ವಾಮಿ ಅಗೌರವದಿಂದ ಮಾತನಾಡಿದ್ದಾರೆ ಎಂದು ಯೋಗೇಶ್ವರ್‌ ಆರೋಪಿಸಿದರು.

ನಿಮ್ಮ ಪಕ್ಷದ ಕಾರ್ಯಕ್ರಮ ಮಾಡಲು ನಿಮಗೆ ದುಡ್ಡು ಎಲ್ಲಿಂದ ಬರುತ್ತದೆ

ನಿಮ್ಮ ಪಕ್ಷದ ಕಾರ್ಯಕ್ರಮ ಮಾಡಲು ನಿಮಗೆ ದುಡ್ಡು ಎಲ್ಲಿಂದ ಬರುತ್ತದೆ

ರಾಮನಗರ - ಚನ್ನಪಟ್ಟಣದಲ್ಲಿ ಪ್ಲೆಕ್ಸ್ ಹಾಕುವವರು ರಿಯಲ್ ಎಸ್ಟೇಟ್ ಮಾಡುವವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾವು ಏನೇ ಮಾಡಿದರೂ ತಪ್ಪು, ಅದೇ ನೀವು ಮಾಡಿದರೆ ಏನು ತಪ್ಪಿಲ್ಲ. ನಿಮ್ಮ ದಬ್ಬಾಳಿಕೆ ದೌರ್ಜನ್ಯನಾ ಎಷ್ಟು ಅಂತಾ ಸಹಿಸುವುದು. ನೀವು ಸತ್ಯ ಹರಿಶ್ಚಂದ್ರ ಎನ್ನುತ್ತೀರಲ್ಲ. ನಿಮ್ಮ ಪಕ್ಷದ ಕಾರ್ಯಕ್ರಮ ಮಾಡಲು ನಿಮಗೆ ದುಡ್ಡು ಎಲ್ಲಿಂದ ಬರುತ್ತದೆ. ಪಂಚರತ್ನ ರಥಯಾತ್ರೆಯಲ್ಲಿ ಹೆಲಿಕಾಪ್ಟರ್‌ನಿಂದ ಹಾಕಿಸಿಕೊಂಡಿರೋದು ಹೂ ಅಲ್ಲ, ಜನರ ಪಾಪದ ಹಣ ನಿಮ್ಮ ಮೇಲೆ ಹಾಕಿಸಿಕೊಂಡಿದ್ದೀರಿ. ಕಳೆದ ಬಾರಿ ಚುನಾವಣೆ ವೇಳೆ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೀರಿ, ಈಗ ಹೇಳಿ ಸಾಲ ಎಲ್ಲಿ ಮನ್ನಾ ಮಾಡಿದ್ದೀರಿ..? ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಶ್ರಮ ಏನಿಲ್ಲ

ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಶ್ರಮ ಏನಿಲ್ಲ

ಚುನಾವಣೆ ವೇಳೆ ನೀವು ಜನರಿಗೆ ಮಂಕುಬೂದಿ ಎರೆಚುತ್ತೀದ್ದೀರಿ. ನಿಮ್ಮ ಮಾತು ನಂಬಿದ ಬಹಳಷ್ಟು ಜನರು ತುಂಬಾ ಸಂಕಟ ಅನುಭವಿಸಿದ್ದಾರೆ. ರಾಮನಗರ ಜಿಲ್ಲೆಯ ಜನರು ಕುಮಾರಸ್ವಾಮಿಯ ಮಾತುಗಳನ್ನು ನಂಬಬೇಡಿ. ಕುಮಾರಸ್ವಾಮಿ ಶಾಸಕರಾದ ಮೇಲೆ ಚನ್ನಪಟ್ಟಣದಲ್ಲಿ ಒಂದೇ ಒಂದು ನಿವೇಶನ, ಮನೆ ಹಂಚಿಕೆ ಮಾಡಿಲ್ಲ, ಬಿಜೆಪಿ ಸರ್ಕಾರದ ವತಿಯಿಂದ ಮೂರು ಸಾವಿರ ಮನೆ ತಂದು ಗ್ರಾಮ ಪಂಚಾಯತಿಗಳ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಶ್ರಮ ಏನಿಲ್ಲ. ಕುಮಾರಸ್ವಾಮಿ ಉಡಾಫೆ ಮಾತುಗಳನ್ನು ಆಡುವುದು ಬಿಡಬೇಕು. ತಮ್ಮ ಅವಧಿಯಲ್ಲಿ ಅಭಿವೃದ್ಧಿ ಮಾಡಿರುವ ಬಗ್ಗೆ ದಾಖಲೆ ತಂದರೆ ಚರ್ಚೆಗೂ ನಾವು ಸಿದ್ಧ ಎಂದು ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+