ಮುಂದಿನ ಚುನಾವಣೆಯಲ್ಲಿಯೂ ಚನ್ನಪಟ್ಟಣದಿಂದಲೇ ಸ್ಪರ್ಧೆ: ಎಚ್ಡಿಕೆ
ರಾಮನಗರ, ಜೂನ್ 2: ನಾನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ, ರಾಜ್ಯಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಂಗಳವಾರ ಚನ್ನಪಟ್ಟಣ ವಿಧಾನ ಸಭಾ ವ್ಯಾಪ್ತಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕೆಲ ಮಾಧ್ಯಮಗಳಲ್ಲಿ ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡಿ ಚನ್ನಪಟ್ಟಣ ಕ್ಷೇತ್ರವನ್ನು ಮಗ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಡುತ್ತಾರೆ ಎಂಬ ಗಾಳಿಸುದ್ದಿಗೆ ಪೂರ್ಣವಿರಾಮ ಹಾಕಿದರು.

ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುವುದಿಲ್ಲ, ಚನ್ನಪಟ್ಟಣ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ. ಯಾರು ನಿರಾಶೆಯಾಗುವುದು ಬೇಡ ಎಂದರು.
ನಾನು ಎರಡು ದಿನ ಕಾರ್ಯಕ್ರಮಗಳಿಗೆ ನನ್ನ ಮಗ ನಿಖಿಲ್ ನನ್ನು ಜೊತೆಯಲ್ಲಿ ಕರೆ ತಂದದ್ದು ನನ್ನ ಜನರ ಕಷ್ಟ ಸುಖಗಳನ್ನು ತಿಳಿದುಕೊಳ್ಳಲು ಎಂದು ತಿಳಿಸಿದರು.

ಸ್ಥಳೀಯ ಜನರ ಬಗ್ಗೆ ತಿಳಿದುಕೊಂಡಾಗ ಮುಂದಿನ ದಿನಗಳಲ್ಲಿ ಜನರೊಂದಿಗೆ ಯಾವ ರೀತಿ ಬೆರೆಯಬೇಕು ಎಂದು ಅವರಿಗೆ ಅನುಭವ ಆಗಲಿ ಎಂದು ಕರೆದುಕೊಂಡು ಬಂದಿದ್ದೇನೆ ವಿನಃ ಕ್ಷೇತ್ರ ಬಿಟ್ಟುಕೊಡಲು ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಗಾಳಿ ಸುದ್ದಿಗಳಿಗೆ ತೆರೆ ಎಳೆದರು.












Click it and Unblock the Notifications