ಚನ್ನಪಟ್ಟಣದಿಂದಲೇ ಗೆದ್ದು ಮತ್ತೆ ಸಿಎಂ ಆಗುತ್ತೇನೆ: ಎಚ್ಡಿಕೆ

ರಾಮನಗರ, ಮಾರ್ಚ್ 05: ಶಾಸಕ ಮುರಗೇಶ್ ನಿರಾಣಿ ಜೊತೆ ನಾನು ಯಾವುದೇ ‌ರೀತಿಯಲ್ಲಿ ಚರ್ಚೆ ಮಾಡಿಲ್ಲ, ಅವರು ನಿನ್ನೆ ಆದಿಚುಂಚನಗಿರಿ ಪೂಜೆಗೆ ಬಂದಿದ್ದರು ಅಷ್ಟೇ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಲ್ಲ, ಅದರ ಅವಶ್ಯಕತೆಯೂ ನನಗೆ ಇಲ್ಲ ಎಂದರು.

ಬಹಳ ಶ್ರಮಪಟ್ಟು ಯಡಿಯೂರಪ್ಪನವರು ‌ಮುಖ್ಯಮಂತ್ರಿ ಆಗಿದ್ದಾರೆ. ಜನರು ನಾನು ಅಧಿಕಾರವಧಿಯಲ್ಲಿ ಇದ್ದಾಗ ಮಾಡಿರುವ ಕೆಲಸವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಅವರೇ ವಿಶ್ವಾಸಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

 HD Kumaraswamy Said I Will Win From Channapatna And Become CM Again

ನಾನು ಇನ್ನು ಸ್ವಲ್ಪ ಆರೋಗ್ಯ ಇಟ್ಟುಕೊಂಡಿದ್ದೇನೆ, ಜನರು ಅಧಿಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರಲ್ಲದೇ, ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಗುಂಪುಗಳ ಜೊತೆಯಲ್ಲಿ ನಾನು ಭಾಗಿಯಾಗಲ್ಲ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರವನ್ನು ನಾನು ಬದಲಾವಣೆ ಮಾಡುವ ಪ್ರಶ್ನೆಯಿಲ್ಲ, ರಾಮನಗರ-ಚನ್ನಪಟ್ಟಣ ನನಗೆ ಎರಡು ಕಣ್ಣುಗಳು ಇದ್ದಂತೆ.
ಮುಂದಿನ‌ ಬಾರಿಯೂ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗುವ ಅವಕಾಶ ಬರುತ್ತದೆ ಎಂಬ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+