Get Updates
Get notified of breaking news, exclusive insights, and must-see stories!

Bengaluru-Mysuru expressway: ಒನ್ ವೇನಲ್ಲಿ ಶಾಲಾವಾಹನ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಚಾಲಕನ ಬಂಧನ

ರಾಮನಗರ, ಸೆಪ್ಟೆಂಬರ್​ 15: ಒನ್ ವೇಯಲ್ಲಿ ಶಾಲಾ ವಾಹನ ಚಲಾಯಿಸುವ ಮೂಲಕ ಗುರುವಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದುಸ್ಸಾಹಸ ಮೆರೆದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಒನ್ ವೇಯಲ್ಲಿ ಶಾಲಾ ವಾಹನ ಚಾಲಕ ದುಸ್ಸಾಹಸ ಮೆರೆದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಇದನ್ನು ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಅವರು ಚಾಲಕನ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಈ ಬೆನ್ನೆಲ್ಲೇ ಕುಂಬಳಗೋಡು ಪೊಲೀಸರು ಶೋಧಕಾರ್ಯ ಕೈಗೊಂಡು ಕೊನೆಗೂ ಶಾಲಾ ವಾಹನ‌ ಚಾಲಕ ಮತ್ತು ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

12ಕ್ಕೂ ಹೆಚ್ಚು ಮಕ್ಕಳ‌ ಪ್ರಾಣದ ಜೊತೆ ಚೆಲ್ಲಾಟವಾಡಿದ ಚಾಲಕನ ದುಸ್ಸಾಹಸದ ವಿಡಿಯೋ ಮುಂದೆ ಚಲಿಸುತ್ತಿದ್ದ ಕಾರಿನ ಮುಂಭಾಗದ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ಭಯಾನಕ ವಿಡಿಯೋ ವೈರಲ್​ ಆಗಿತ್ತು. ಘಟನೆ ನಡೆದ ತಕ್ಷಣ ಶಾಲಾ ಮಂಡಳಿ ಕ್ರಮ ಕೈಗೊಂಡಿದ್ದು, ಎರಡು ತಿಂಗಳ ಹಿಂದೆಯೇ ಚಾಲಕನನ್ನು ಕೆಲಸದಿಂದ ತೆಗೆಯಲಾಗಿತ್ತು.

Blr-Mys expressway: Driver was arrested for school bus driving on one way in Ramanagara

ಆದರೆ ವಿಡಿಯೋ ವೈರಲ್ ಆದ ಬಳಿಕ ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಕುಂಬಳಗೋಡು ಪೊಲೀಸರ ಕಾರ್ಯಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಾಗಿ ಎಡಿಜಿಪಿ ಅಲೋಕ್ ಕುಮಾರ್​ ಟ್ವೀಟ್​ ಮಾಡಿದ್ದು, ವೈರಲ್​ ಆದ ವಿಡಿಯೋ ಹಳೆಯದು. ಘಟನೆ ನಡೆದ ತಕ್ಷಣ ಶಾಲಾ ಮಂಡಳಿ ಚಾಲಕನ ವಿರುದ್ದ ಕ್ರಮಕೈಗೊಂಡಿದ್ದು, ಎರಡು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಲಾಗಿದೆ. ಆದರೂ ಗುರುವಾರ ಎಫ್ಐಆರ್ ದಾಖಲಾಗಿದ್ದು, ಇಂದು ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಚಾಲಕನನ್ನು ಬಂಧಿಸಲಾಗಿದೆ. ಎಸ್‌ಪಿ ನೇತೃತ್ವದಲ್ಲಿ ರಾಮನಗರ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+