ರಾಮನಗರದಲ್ಲಿ ವೃದ್ಧೆ ಮೇಲೆ ಕರಡಿ ದಾಳಿ

ರಾಮನಗರ, ಫೆಬ್ರವರಿ 20: ಮುಂಜಾನೆ ಮನೆಯಿಂದ ಹೊರ ಬರುತ್ತಿದ್ದಂತೆಯೇ ವೃದ್ಧೆಯ ಮೇಲೆ ಕರಡಿ ದಾಳಿ ಮಾಡಿದ್ದು, ವೃದ್ಧೆಯು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೌರಮ್ಮ (60) ಎಂಬುವವರೇ ಕರಡಿ ದಾಳಿಗೊಳಗಾದ ವೃದ್ಧೆಯಾಗಿದ್ದಾರೆ. ರಾಮನಗರ ಜಿಲ್ಲೆಯ ಚುಂಚಕ ಗ್ರಾಮದಲ್ಲಿ ಕರಡಿ ದಾಳಿ ಪ್ರಕರಣ ನಡೆದಿದೆ. ಇದ್ದಕ್ಕಿಂದ್ದಂತೆ ಕರಡಿ ದಾಳಿ ಮಾಡಿದ್ದರಿಂದ ವೃದ್ಧೆ ಗೌರಮ್ಮರ ಕೈಗೆ ಗಂಭೀರ ಗಾಯವಾಗಿದೆ.

ರಾಮನಗರ ತಾಲ್ಲೂಕಿನ ಹಂದಿಗುಂದಿ ಅರಣ್ಯಕ್ಕೆ ಹೊಂದಿಕೊಂಡಿರುವ ಚುಂಚಕ ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿ ಇತ್ತೀಚಿಗೆ ಸಾಮಾನ್ಯವಾಗಿದೆ. ಗ್ರಾಮದ ಜನರು ಭಯ ಭೀತರಾಗಿದ್ದಾರೆ.

Bear Attack On old Woman In Ramanagara

ಕರಡಿ ದಾಳಿಯಿಂದ ವೃದ್ಧೆಯ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಗೌರಮ್ಮಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+