ಚನ್ನಪಟ್ಟಣದ ಶ್ರೀನಿವಾಸ್ ನಾಟಿ ವೈದ್ಯ ಪದ್ದತಿ ಕಾಶ್ಮೀರದವರೆಗೂ ಪ್ರಸಿದ್ದಿ, ಇಲ್ಲಿದೆ ಮಾಹಿತಿ
ಚನ್ನಪಟ್ಟಣ, ನವೆಂಬರ್, 02; ನಾಟಿ ವೈದ್ಯ ಅರಳಾಳುಸಂದ್ರದ ಶ್ರೀನಿವಾಸ್ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನರ ಹಾಗೂ ಜಾನುವಾರುಗಳ ಮುರಿದ ಮೂಳೆಗಳನ್ನು ಸರಿಪಡಿಸಿದ್ದಾರೆ. ಈ ಮೂಲಕ ಶ್ರೀನಿವಾಸ್ ಜನ, ಜಾನುವಾರುಗಳ ಮೂಳೆ ತಜ್ಞ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಅದರಲ್ಲೂ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯಿರುವ ಆಸ್ಪತ್ರೆಗಳ ನಡುವೆಯೂ ಇಂದಿಗೂ ಪ್ರತಿದಿನ 20ಕ್ಕೂ ಹೆಚ್ಚು ಜನರು ಇವರ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಶ್ರೀನಿವಾಸ್ ಕಳೆದ 40 ವರ್ಷಗಳಿಂದಲೂ ನಾಟಿ ವೈದ್ಯದಲ್ಲಿ ಪರಿಣತಿ ಹೊಂದಿದ್ದಾರೆ. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಹಾಗೂ ಅಸಂಖ್ಯಾತ ಜಾನುವಾರುಗಳಿಗೆ ಶ್ರೀನಿವಾಸ್ ಚಿಕಿತ್ಸೆ ನೀಡಿದ್ದಾರೆ. ಕೆಲ ಪ್ರಖ್ಯಾತ ವೈದ್ಯರು ಬಗೆಹರಿಸದ ಮೂಳೆ ಮುರಿದ ಪ್ರಕರಣಗಳನ್ನು ಸಹ ಶ್ರೀನಿವಾಸ್ ಚಿಕಿತ್ಸೆ ನೀಡಿ ಗುಣಮಾಡಿರುವ ಹಲವು ನಿದರ್ಶನಗಳಿವೆ.
ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರು ಶ್ರೀನಿವಾಸ್ ಅವರಿಂದ ಚಿಕಿತ್ಸೆ ಪಡೆದಿದ್ದಾರೆ. ಮೂಳೆ ಮುರಿದಿರಲಿ, ತುಂಡಾಗಿರಲಿ ಇವರು ನಾಟಿವಿದ್ಯೆಯ ಮೂಲಕ ಅದನ್ನು ಜೋಡಿಸಿ ಗುಣವಾಗುವಂತೆ ಮಾಡುತ್ತಾರೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳು, ಗದ್ದೆ ಜಮೀನುಗಳ ಬಳಿ ಬೆಳೆದ ಕೆಲ ಸಸ್ಯಗಳು ಹಾಗೂ ಅಂಗಡಿಯ ಕೆಲ ವಸ್ತುಗಳಿಂದ ತೈಲ ತಯಾರಿಸಿ ಚಿಕಿತ್ಸೆ ಕೊಡುತ್ತಾರೆ.

ಶ್ರೀನಿವಾಸ್ ನಾಟಿ ವೈದ್ಯ ವಿದ್ಯೆ ಕಲಿತಿದ್ದು ಹೇಗೆ?
ಗಿಡ ಮೂಲಿಕೆ ಸಸ್ಯಗಳನ್ನು ಸಂಗ್ರಹಿಸಲು ಕೆಲ ನಿಯಮಗಳನ್ನು ಪಾಲಿಸುವ ಶ್ರೀನಿವಾಸ್ ಭಾನುವಾರ, ಗುರುವಾರ ಹಾಗೂ ಅಮವಾಸ್ಯೆ ದಿನಗಳಂದು ಮಾತ್ರ ದೇವರ ಸ್ಮರಣೆ ಮಾಡುತ್ತಾರೆ. ನಂತರ ಗಿಡ ಮೂಲಿಕೆಗಳನ್ನು ಕೀತ್ತು ಇನ್ನುಳಿದ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಔಷಧಿ ತಯಾರಿಸುತ್ತಾರೆ. ತನ್ನ 26ನೇ ವಯಸ್ಸಿನಲ್ಲಿ ಮೂಳೆ ಚಿಕಿತ್ಸೆ ಕೊಡಲು ಪ್ರಾರಂಭ ಮಾಡಿದ ಶ್ರೀನಿವಾಸ್, ನಾಟಿ ವಿದ್ಯೆ ನಮ್ಮ ತಂದೆಯಿಂದ ಬಂದ ಬಳುವಳಿ ಎನ್ನುತ್ತಿದ್ದಾರೆ. ಮಂಡ್ಯ ಜಿಲ್ಲೆ, ಬೆಸಗರಹಳ್ಳಿಯ ಖ್ಯಾತ ಮೂಳೆ ವೈದ್ಯ ಮುತ್ತಯ್ಯರಿಂದ ನಮ್ಮ ತಂದೆ ನಾಟಿ ವಿದ್ಯ ಕಲಿತ್ತಿದ್ದರು. ಹಾಗೆಯೇ ತಂದೆಯಿಂದ ನಾನು ವಿದ್ಯೆಯನ್ನು ಕಲಿತುಕೊಂಡಿದ್ದೇನೆ. ನಮ್ಮ ತಂದೆ ಸಿದ್ದಲಿಂಗೇಗೌಡ ಅವರ ಹೆಸರು ಉಳಿಸಲು ನಾಟಿ ವೈದ್ಯನಾಗಿದ್ದೇನೆ ಎಂದರು.
ಇದೀಗ ನನ್ನ ಇಬ್ಬರು ಮಕ್ಕಳಗೆ ವ್ಯವಸಾಯದ ಜೊತೆಗೆ ನಾಟಿ ಚಿಕಿತ್ಸಾ ಪದ್ಧತಿಯನ್ನು ಕಲಿಸುತ್ತಿದ್ದೇನೆ. ಒಬ್ಬ ಎಸ್‌ಎಸ್‌ಎಲ್‌ಸಿ ಮತ್ತೊಬ್ಬ ಐಟಿಐ ವಿಧ್ಯಾಭ್ಯಾಸ ಮಾಡಿದ್ದಾರೆ. ಕಸುಬನ್ನು ಮುಂದುವರೆಯಬೇಕು ಎನ್ನುವುದರ ಜೊತೆಗೆ ನಮ್ಮ ಗ್ರಾಮದ ಘನತೆ ಹೆಚ್ಚಿಸಬೇಕು ಎನ್ನುವುದು ನನ್ನ ಆಸೆಯಾಗಿದೆ. ಮೂಳೆ ಕಟ್ಟುವ ಶ್ರೀನಿವಾಸ್ ಅನ್ನುವುದಕ್ಕಿಂತಲೂ ಅರಳಾಳುಸಂದ್ರ ಶ್ರೀನಿವಾಸ್ ಎಂದರೆ ಮನಸ್ಸಿಗೆ ತೃಪ್ತಿ ಆಗುತ್ತದೆ ಎಂದರು.

ಕಾಶ್ಮೀರದವರೆಗೂ ಪ್ರಸಿದ್ಧಿ ಪಡೆದ ನಾಟಿ ವೈದ್ಯ
ಶ್ರೀನಿವಾಸ್ ತಯಾರು ಮಾಡಿರುವ ನೋವು ನಿವಾರಕ ತೈಲವನ್ನು ಜಮ್ಮ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರು ಸೈನಿಕ ಸಹೋದ್ಯೋಗಿಗಳಿಗೆ ತಲುಪಿಸಿದ್ದಾರಂತೆ. ಅಲ್ಲದೇ ದೂರದ ಪ್ರದೇಶಗಳಿಂದ ಬರುವ ಜನರು ಇವರಿಂದ ಚಿಕಿತ್ಸೆ ಪಡೆದು ನಂತರ ತಮ್ಮವರಿಗಾಗಿ ಔಷದಿಯನ್ನು ಖರೀದಿಸುತ್ತಾರೆ. ಹಾಗಾಗಿ ಇವರ ಔಷದಿ ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯಗಳಿಗೂ ಸರಬರಾಜಾಗಿದೆ. ತಮ್ಮಲ್ಲಿ ಚಿಕಿತ್ಸೆಗೆ ಬಂದವರ ಹೆಸರು, ವಿಳಾಸ ಹಾಗೂ ಅವರ ದೂರವಾಣಿ ಸಂಖ್ಯೆ ಪಡೆದು ಆರೋಗ್ಯ ವಿಚಾರಿಸುವ ಪರಿಪಾಠವನ್ನು ಶ್ರೀನಿವಾಸ್ ಬೆಳಸಿಕೊಂಡಿದ್ದಾರೆ. ಈಗಿನ ಕಾಲದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರೂ ಸಹ ಮೂಳೆ ಮುರಿದುಕೊಂಡವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿರುವುದಿಲ್ಲ. ಆದರೆ ಶ್ರೀನಿವಾಸ್ ಬಳಿ ಬಂದು ಚಿಕಿತ್ಸೆ ಪಡೆದಿರುವ ಅನೇಕರು, ಇವರ ಚಿಕಿತ್ಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಕುಟುಂಬಸ್ಥರಿಗೂ ಸಹ ಇವರ ಬಳಿ ಚಿಕಿತ್ಸೆ ಕೊಡಿಸಿದ್ದೇವೆ. ಎಲ್ಲರಿಗೂ ಯಶಸ್ವಿ ಆಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಜನರ ಬಳಿ ಬೇಡಿಕೆಯಿಡದ ಶ್ರೀನಿವಾಸ್
ನಾಟಿವೈದ್ಯ ಶ್ರೀನಿವಾಸ್ ಬರೀ ಮನುಷ್ಯರಲ್ಲದೇ ದನಕರುಗಳಿಗೂ ಚಿಕಿತ್ಸೆ ಕೊಡುತ್ತಾರೆ. ಅದರಲ್ಲೂ ನಾಟಿ ದನಕರುಗಳ ಕಾಲು ಮುರಿದರೆ ಅದನ್ನು ಸರಿಪಡಿಸುವಲ್ಲಿ ಶ್ರೀನಿವಾಸ್ ಹೆಸರುವಾಸಿಯಾಗಿದ್ದಾರೆ. ಅದರಲ್ಲಿಯೂ ಜಾನುವಾರುಗಳ ಮೂಳೆಗಳನ್ನು ಯಶಸ್ವಿಯಾಗಿ ಜೋಡಿಸಿ ಚಿಕಿತ್ಸೆ ನೀಡಿದ್ದೇವೆ. ಅದರೆ ಇತ್ತೀಚಿನ ದಿನಗಳಲ್ಲಿ ನಾಟಿ ಹಸುಗಳ ಸಂಖ್ಯೆ ತೀರ ವಿರಳವಾಗಿವೆ. ಅಲ್ಲದೇ ಸೀಮೆ ಹಸುಗಳು ಗ್ರಾತದಲ್ಲಿ ದೊಡ್ಡದಾಗಿರುವುದರಿಂದ ಅವುಗಳಿಗೆ ನಾಟಿ ಚಿಕಿತ್ಸೆ ಮಾಡುವುದಿಲ್ಲ ಎಂದರು. ಶ್ರೀನಿವಾಸ್ ತಮ್ಮ ಬಳಿ ಚಿಕಿತ್ಸೆ ಪಡೆಯಲು ಬರುವ ಜನರಿಂದ ಯಾವುದೇ ಬೇಡಿಕೆಯನ್ನು ಇಡುವುದಿಲ್ಲ. ಔಷಧಿಗೆ ಆಗುವ ಹಣವನ್ನು ಮಾತ್ರ ಪಡೆಯುತ್ತಾರೆ. ಇಲ್ಲವಾದರೆ ಅದನ್ನೂ ಪಡೆಯುವುದಿಲ್ಲ. ಜನರು ನೀಡುವ ಬಹುತೇಕ ಹಣ ತಯಾರು ಮಾಡುವ ತೈಲಕ್ಕೆ ಖರ್ಚಾಗುತ್ತದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಚಿಕಿತ್ಸೆ ಪಡೆದವರು ಹೇಳಿದ್ದೇನು?
ಶ್ರೀನಿವಾಸ್ ಬಳಿ ಚಿಕಿತ್ಸೆಗಾಗಿ ಬಂದಿದ್ದ ಕನಕಪುರದ ರಾಜಣ್ಣ ಮಾತನಾಡಿದ್ದು, ನಮಗೆ ಕಾಲಿನ ಮೂಳೆ ಸಮಸ್ಯೆಯಿಂದ ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆಯಲ್ಲಿ ಎಕ್ಸರೇ ಮಾಡಿಸಿ ಆಪರೇಷನ್ ಮಾಡಿಸಬೇಕು ಎಂದಿದ್ದರು. ನಂತರ ನಾನು ಇಲ್ಲಿಗೆ ಬಂದಾಗ ಕಾಲಿಗೆ ಔಷಧದಿಂದ ಮಸಾಜ್ ಮಾಡಿ ಗಿಣ್ಣು ಸರಿಯಾಗಿ ಕೂರಿಸಿದರು. ಇದೀಗ ನಾನು ಸರಾಗವಾಗಿ ನಡೆದಾಡುತ್ತಿದ್ದೇನೆ. ಈ ಹಿಂದೆಯೂ ಹಲವಾರು ಕೂಲಿ ಕಾರ್ಮಿಕರು ಮೂಳೆ ಮುರಿತಕ್ಕೆ ಒಳಗಾದಾಗ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ ಎಂದರು.
ಇನ್ನು ಕೈ ಕೀಲು ಮುರಿತಕ್ಕ ಚಿಕಿತ್ಸೆ ಪಡೆಯುತ್ತಿದ್ದ ದೇವರಾಜ್ ಮಾತನಾಡಿ. ದೊಡ್ಡ ದೊಡ್ಡ ಅಸ್ಪತ್ರಗಳಲ್ಲಿ ಗುಣವಾಗದ ಎಷ್ಟೋ ಮೂಳೆ ಸಮಸ್ಯೆಗಳು ಶ್ರೀನಿವಾಸ್ ಬಳಿ ಗುಣಮುಖವಾಗಿವೆ. ಆಸ್ಪತ್ರೆಯಲ್ಲಿ ಯಾವುದೇ ಎಕ್ಸರೇ ಮಾಡಿಸಿದರೂ 400 ರೂಪಾಯಿಗೂ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ. ಶ್ರೀನಿವಾಸ್ ಬಳಿ ಕೇವಲ ಒಂದು ಎಕ್ಸರೇಗೆ ನೀಡುವ ಹಣದಲ್ಲಿ ಮೂಳೆ ಸಮಸ್ಯೆ ಪರಿಹಾರ ಆಗುತ್ತದೆ. ಶ್ರೀನಿವಾಸ್ ನೀಡುವ ಚಿಕಿತ್ಸೆಗೆ ನಾವು ನೀಡುವ ಹಣ ಏನು ಅಲ್ಲ ಎಂದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications