Anna bhagya scheme: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿರುವ "ಅನ್ನಭಾಗ್ಯ" ಫಲಾನುಭವಿಗಳ ವಿವರ
ರಾಮನಗರ, ಜುಲೈ, 25: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ. ಹಾಗಾದರೆ ರಾಮನಗರ ಜಿಲ್ಲೆಯಲ್ಲಿ ಈ ಯೋಜನೆಯ ಫಲಾನುಭವಿಗಳು ಎಷ್ಟು ಜನ ಇದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಅನ್ನಭಾಗ್ಯ ಸಮಗ್ರ ಜಾರಿಗೆ ಕ್ರಮ ಕೈಗೊಂಡಿದ್ದು, ಜಾರಿಗೂ ಮೊದಲೇ ನ್ಯಾಯ ಬೆಲೆ ಅಂಗಡಿ ಮಾಲೀಕರಿಂದ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ ಹಾಗೂ ಸೂಕ್ತ ತರಬೇತಿ ನೀಡಿಲಾಗಿದೆ ಎಂದು ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕಿ ರಮ್ಯ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 2 ಲಕ್ಷದ 97 ಸಾವಿರ ಪಡಿತರ ಕಾರ್ಡ್‌ಗಳು ಸಕ್ರಿಯವಾಗಿದ್ದು, ಇಡೀ ಜಿಲ್ಲೆಯಲ್ಲಿ ಸುಮಾರು 9 ಲಕ್ಷದ 63 ಸಾವಿರ ಪಡಿತರ ಫಲಾನುಭವಿಗಳಿದ್ದಾರೆ. ಎಲ್ಲಾ ಫಲಾನುಭವಿಗಳಿಗೆ ಪ್ರತಿ ತಿಂಗಳಿನಂತೆ 5 ಕೆ.ಜಿ. ಆಹಾರ ಧಾನ್ಯ ವಿತರಣೆ ಮಾಡಲಾಗುತ್ಗುತ್ತಿದೆ. ಜೊತೆಗೆ ಓರ್ವ ವ್ಯಕ್ತಿಗೆ 170 ರೂಪಾಯಿ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಅರ್ಹ ಫಲಾನುಭವಿಗೆ 3 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ರಾಗಿ ನೀಡಲಾಗುತಿದ್ದು, ಸರ್ಕಾರ ಇನ್ನುಳಿದ 5 ಕೆ.ಜಿ. ಅಕ್ಕಿ ಬದಲಿಗೆ ಹಣ ನೀಡುತ್ತೇವೆ ಎಂದು ತಿಳಿಸಿದೆ. ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಅಕೌಂಟ್‌ಗಳ ಮಾಹಿತಿಗಳನ್ನು ತೆಗೆದುಕೊಂಡುದ್ದೇವೆ. ಬಹುತೇಕ ಪಡಿತರ ಕಾರ್ಡ್‌ಗಳಲ್ಲಿ ಮಹಿಳೆಯರು ಯಜಮಾನಿ ಆಗಿರುತ್ತಾರೆ. ಹಾಗಾಗಿ ಅವರ ಅಕೌಂಟ್‌ಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕಿ ರಮ್ಯ ತಿಳಿಸಿದರು.
ಅರ್ಹ ಫಲಾನುಭವಿಗಳಿಗೆ ಪಡಿತರ ತಲುಪಿಸುವ ಉದ್ದೇಶದಿಂದ ಆಹಾರ ಧಾನ್ಯ ನೀಡಲಾಗುವುದು. ಅದನ್ನು ಕೇಲವರು ಕಾಳಸಂತೆಯಲ್ಲಿ ಮಾರಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಹಾಗೂ ಕೊಂಡುಕೊಳ್ಳುವವರ ವಿರುದ್ಧ ಕ್ರಮ ಕೈಗೊಂಡು ಅತಂಹ ಘಟನೆ ಕಂಡುಬಂದರೆ ಫಲಾನುಭವಿಗಳ ಮೇಲೆ ಕೇಸ್ ದಾಖಲು ಮಾಡಲಾಗುತ್ತದೆ. ಹಾಗೆಯೇ ಅಂತವಹರ ಪಡಿತರ ಕಾರ್ಡ್ ಅನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು. ಈಗಾಗಲೇ ಈ ಸಂಬಂಧ ಹಲವು ಕೇಸ್‌ಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಅನ್ನ ಭಾಗ್ಯಕ್ಕೂ ಕಾಡುತ್ತಿರುವ ಸರ್ವರ್ ಸಮಸ್ಯೆ
ನಗರ ವ್ಯಾಪ್ತಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಆಹಾರ ವಿತರಣಾ ಅಂಗಡಿಗಳಲ್ಲಿ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಆಹಾರ ಧಾನ್ಯಗಳನ್ನು ನೀಡುತ್ತಿಲ್ಲ. ಸರ್ವರ್ ಇಲ್ಲ ಎಂದು ಕಾರಣ ಹೇಳಿ ವಿನಾಕರಣ ಆಲೆದಾಡಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಲ್ಲ, ಪಡಿತರ ಚೀಟಿಗಳನ್ನು ತಿದ್ದುಪಡಿ ಮಾಡಿಸಿ ಎಂದು ಕಾರಣಗಳನ್ನು ನೀಡಿ ಪಡಿತರ ಅಂಗಡಿ ಮಾಲೀಕರು ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಹಾಗೂ ಬಡ ಜನರನ್ನು ಅಲೆದಾಡಿಸುತ್ತಿದ್ದಾರೆ. ಅಲ್ಲದೇ ಪಡಿತರ ಆಹಾರ ಅಂಗಡಿಗಳ ಮಾಲೀಕರು ತಿಂಗಳ ಪೂರ್ತಿ ಪಡಿತರ ಅಂಗಡಿಗಳನ್ನು ತೆರೆಯದೆ ಬಡ ಜನರನ್ನು ದಿನನಿತ್ಯ ಅಲೆದಾಡಿಸುತ್ತಿದ್ದಾರೆ.
ಪಡಿತರ ಅಂಗಡಿಗಳನ್ನು ತಮಗೆ ಮನ ಬಂದಂತೆ ತಿಂಗಳಿಗೆ ಕೇವಲ 5 ರಿಂದ 7 ದಿನಗಳು ಮಾತ್ರ ತೆರೆದು ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ. ಹಾಗಾಗಿ ಪಡಿತರ ಅಂಗಡಿಗಳನ್ನು ತಿಂಗಳ ಪೂರ್ತಿ ತೆರೆದು ನಾಗರೀಕರಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರ ಪದಾರ್ಥಗಳು ವಿತರಣೆ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ಅವರಿಗೆ ಸಾಮಾಜಿಕ ಕಾರ್ಯಕರ್ತ ಅಸ್ಲಂ ಪಾಶ ಮನವಿ ಸಲ್ಲಿಸಿದ್ದಾರೆ.












Click it and Unblock the Notifications