ರಾಜ್ಯದಲ್ಲಿ ಶೇ.75 ರಷ್ಟು ಕಾರ್ಖಾನೆಗಳು ಆರಂಭ: ಜಗದೀಶ್ ಶೆಟ್ಟರ್

ರಾಮನಗರ, ಮೇ 22: ಕರ್ನಾಟಕ ರಾಜ್ಯದಲ್ಲಿ ಕೋವಿಡ್ -19 ಭೀತಿಗೆ ಬೀಗ ಹಾಕಿದ್ದ ಕಾರ್ಖಾನೆಗಳಲ್ಲಿ ಈಗಾಗಲೇ ಸುಮಾರು ಶೇ.75 ರಷ್ಟು ಕಂಪನಿಗಳು ಕೆಲಸ ಪ್ರಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾಗಳಿಗೆ ಭೇಟಿ ನೀಡಿ ಸಮಸ್ಯೆಗಳ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

Recommended Video

      ರಾಜ್ಯದಲ್ಲಿ ಕೈಗಾರಿಕೆಗಳ ಪುನರ್ ಆರಂಭಕ್ಕೆ ಸೂಚನೆ | Industries to reopen soon | Oneindia Kannada

      ಕೊರೊನಾ ವೈರಸ್ ಹಾವಳಿ ನಂತರ ಕಾರ್ಖಾನೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ, ಹಾರೋಹಳ್ಳಿ ಕೈಗಾರಿಕಾ ವಲಯದ ಸ್ಟೌವ್ ಕ್ರಾಫ್ಟ್ ಹಾಗೂ ಬಿಡದಿ ಕೈಗಾರಿಕಾ ವಲಯದ ಟೊಯೊಟಾ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿದರು.

      ಕೊರೊನಾ ಭೀತಿಯಲ್ಲಿ ಚೀನಾ ದೇಶದಿಂದ ಸಾವಿರಾರು ಕಾರ್ಖಾನೆಗಳು ಹೊರಬಂದು ಬೇರೆಡೆ ಉದ್ಯಮ ಸ್ಥಾಪಿಸಲು ಮುಂದಾಗಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಚೀಪ್ ಸೆಕ್ರೆಟರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ ಅನುಷ್ಠಾನಗೊಳಿಸಿದ್ದು, ಅದು ಈಗಾಗಲೇ ತನ್ನ ಕೆಲಸ ಕಾರ್ಯಾರಂಭಿಸಿದೆ ಎಂದರು.

      75% Of Factories Opened In Karnataka State: Minister Jagdish Shetter

      ಬೇರೆ ಬೇರೆ ದೇಶಗಳೊಂದಿಗೆ ಸಂಪರ್ಕ ಸಾಧಿಸಿ ಕಂಪನಿಗಳೊಂದಿಗೆ ಮಾತುಕತೆ ನಡೆಸಿವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

      ಈಗಾಗಲೇ ಕೆಲಸ ಪ್ರಾರಂಭಿಸಿರುವ ಕಾರ್ಖಾನೆಗಳಿಗೆ ಕೋವಿಡ್-19 ತಡೆಗಟ್ಟವ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಹಾಗೂ ಹ್ಯಾಂಡ್ ಸ್ಯಾನಿಟರೈಸ್ ಮಾಡಬೇಕು ಎಂದು ಸೂಚಿಸಿದರು.

      75% Of Factories Opened In Karnataka State: Minister Jagdish Shetter

      ಈ ಬಗ್ಗೆ ಅಧಿಕಾರಿಗಳು ಕಂಪನಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+