ಲಾರಿ ಅಪಘಾತ: ಸುಟ್ಟು ಕರಕಲಾದ ಇಬ್ಬರು ಚಾಲಕರು

ರಾಯಚೂರು, ಜುಲೈ.01: ಲಾರಿ-ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಚಾಲಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕಿನ ಒಣಕೇರಿ ಕ್ಯಾಂಪ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಲಾರಿಯೊಳಗಿದ್ದ ಚಾಲಕರು ಸುಟ್ಟು ಕರಕಲಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಟ್ಟುಹಬ್ಬದಂದೆ ಯುವಕ ಸಾವು: ಮತ್ತೊಂದು ಬೈಕ್ ಅಪಘಾತದ ಪ್ರಕರಣದಲ್ಲಿ ಹುಟ್ಟುಹಬ್ಬದಂದೆ ಯುವಕ ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ತಾಲೂಕಿನ ಬೈಕೆರೆ-ಜನ್ನಾಪುರ ಗೇಟ್‌ ಬಳಿ ನಡೆದಿದೆ.

Two drivers died on the spot in a lorry accident.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಮತ್ತಾವರ ಗ್ರಾಮದ ಚಂದನ್ (23) ಮೃತ ಯುವಕ. ಸಕಲೇಶಪುರ ಪಟ್ಟಣದಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ತನ್ನ ಸ್ವಗ್ರಾಮಕ್ಕೆ ಬೈಕ್ ನಲ್ಲಿ ತೆರಳುವ ವೇಳೆ ಘಟನೆ ನಡೆದಿದೆ.

ರಸ್ತೆ ಬದಿ ಸೂಚನಾ ಫಲಕವಿದ್ದ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಸಕಲೇಶಪುರದಲ್ಲಿ ಕೊರಿಯರ್ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+