ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ತೃತೀಯ ಲಿಂಗಿ ಪೂಜಾ

|
Google Oneindia Kannada News

ತಮ್ಮದಲ್ಲದ ತಪ್ಪಿಗೆ ತೃತೀಯ ಲಿಂಗಿಗಳು ಸಮಾಜದಲ್ಲಿ ನಿರಂತರ ಶೋಷಣೆ, ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಅವರಿಗೂ ಎಲ್ಲರಂತೆ ಬದುಕುವ ಅವಕಾಶ ಕಲ್ಪಿಸುವುದು ಅಗತ್ಯ. ಮಂಗಳಮುಖಿಯರು, ಹಿಜ್ಡಾಗಳು, ಖೋಜಾಗಳು, ನಪುಂಸಕರು, ಜೋಗಪ್ಪ ಅಥವಾ ಶಿವ-ಶಕ್ತಿ ಎಂದೆಲ್ಲ ಸಮಾಜದಿಂದ ಒರಟಾಗಿ ಕರೆಸಿಕೊಳ್ಳುವ ವರ್ಗದ ಪೂಜಾ ಸರ್ಕಾರಿ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.1ರಷ್ಟು ಮೀಸಲಾತಿಯನ್ನು ನೀಡಲಾಗಿದ್ದು ಇದರಡಿ ಮಾನ್ವಿ ತಾಲೂಕಿನ ಪೂಜಾ ಎಂಬುವವರು ಆಯ್ಕೆಯಾಗಿದ್ದಾರೆ. ತೃತೀಯ ಲಿಂಗ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡ ಪೂಜಾ ಇತರ ತೃತೀಯ ಲಿಂಗಿಗಳಿಗೆ ಮಾದರಿಯಾಗಿದ್ದಾರೆ.

ರಾಯಚೂರು: ಕಾಂಗ್ರೆಸ್‌ನ ಹಾಲಿ ಶಾಸಕರಿಗೂ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ ರಾಯಚೂರು: ಕಾಂಗ್ರೆಸ್‌ನ ಹಾಲಿ ಶಾಸಕರಿಗೂ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ

ತೃತೀಯ ಲಿಂಗಿ ಪೂಜಾ

ತೃತೀಯ ಲಿಂಗಿ ಪೂಜಾ

ಮೇ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತಿಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆಯನ್ನು ಬರೆದ ಪೂಜಾ ಸಾಮಾಜ ವಿಜ್ಞಾನ ವಿಷಯದ ಶಿಕ್ಷಕರರಾಗಿ ಆಯ್ಕೆಯಾಗಿದ್ದಾರೆ. ಪೂಜಾ 1ರಿಂದ 10ನೇ ತರಗತಿಯವರೆಗೆ ಹುಟ್ಟೂರು ನೀರಮಾನ್ವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮಾನ್ವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿಯನ್ನು ಪೂರ್ಣಗೊಳಿಸಿದರು. ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿಇಡಿ ಪೂರ್ಣಗೊಳಿಸಿದರು. ಈಗ ತೃತೀಯ ಲಿಂಗಿಯ ಮೀಸಲಾತಿಯನ್ನು ರಾಜ್ಯದ ಮೂವರ ಪೈಕಿ ಇವರೊಬ್ಬರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮ್ಮ ಜೀವನದ ಗುರಿಯನ್ನು ತಲುಪಿ ಸಂತಸ ವ್ಯಕ್ತಪಡಿಸಿದ್ದಾರೆ.

ಇವರಿಗೆ 'ತೃತೀಯ ಲಿಂಗಿಗಳು' ಎಂಬ ಪ್ರತ್ಯೇಕ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ಈಗಾಲೇ ನೀಡಿದೆ. ಅಲ್ಲದೇ, ಈ ಜನರನ್ನು ಆರ್ಥಿಕವಾಗಿ ಹಿಂದುಳಿದವರೆಂದು ಪರಿಗಣಿಸಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಂತೆಯೂ ಕೇಂದ್ರ ಸರಕಾರಕ್ಕೆ ಸುಪ್ರೀಕೋರ್ಟ್ ಸೂಚಿಸಿದೆ.

ಶಿಕ್ಷಣದಲ್ಲಿ ಸೌಲಭ್ಯ

ಶಿಕ್ಷಣದಲ್ಲಿ ಸೌಲಭ್ಯ

''ತೃತೀಯ ಲಿಂಗಿಗಳನ್ನು ಒಬಿಸಿ(ಇತರ ಹಿಂದುಳಿದ ಜಾತಿ) ಎಂದು ಪರಿಗಣಿಸಿ, ಉದ್ಯೋಗ, ಶಿಕ್ಷಣದಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾಜ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು. ಇದೇ ವೇಳೆ ತೃತೀಯ ಲಿಂಗಿಗಳನ್ನು ಭೇದಭಾವದಿಂದ ಕಾಣದಂತೆ ಸಾಮಾಜಿಕ ಜಾಗೃತಿ ಮೂಡಿಸಬೇಕು,'' ಎಂದೂ ನ್ಯಾಯಾಲಯ ಹೇಳಿದೆ.

ತೃತೀಯ ಲಿಂಗಿಗಳ ವಿರುದ್ಧ ಸೆಕ್ಷನ್ ದುರ್ಬಳಕೆ

ತೃತೀಯ ಲಿಂಗಿಗಳ ವಿರುದ್ಧ ಸೆಕ್ಷನ್ ದುರ್ಬಳಕೆ

ತೃತೀಯ ಲಿಂಗಿಗಳ ಬಗ್ಗೆ ಕಾಳಜಿ ತೋರಿರುವ ಸುಪ್ರೀಂ ಕೋರ್ಟ್, ಈ ಜನರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸರಕಾರಗಳಿಗೆ ಸೂಚಿಸಿದೆ. ಅಲ್ಲದೇ, ತೃತೀಯ ಲಿಂಗಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 377 ಅನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟವಂತೆಯೂ ಹೇಳಿದೆ.

ಕೋರ್ಟ್ ಹೇಳಿದ್ದೇನು?

ಕೋರ್ಟ್ ಹೇಳಿದ್ದೇನು?

ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲೆ, ಕಚೇರಿ, ಮಾಲ್, ಚಿತ್ರಮಂದಿರ, ಆಸ್ಪತ್ರೆಗಳು ಸೇರಿದಂತೆ ಎಲ್ಲೆಡೆ ತೃತೀಯ ಲಿಂಗಿಗಳನ್ನು ಅಸ್ಪೃಷ್ಯರಂತೆ ಪರಿಗಣಿಸಲಾಗುತ್ತಿದೆ. ಭಯ, ನಾಚಿಕೆ, ಸಾಮಾಜಿಕ ಒತ್ತಡ, ಖಿನ್ನತೆ, ಅವಮಾನದಿಂದ ಬಳಲಿರುವ ಈ ಜನರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

English summary
In the state 1% reservation has been given to third gender in employment and education under which Pooja from Manvi taluk has been selected as teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X