Raichur: ಮಾಂಸಕ್ಕೆ ಬೀಳಲಿಲ್ಲ, ಕಣ್ಣಿಗೂ ಕಾಣಿಸಲಿಲ್ಲ ಹನಿಟ್ರ್ಯಾಪ್‌ಗೆ ಸಿಕ್ಕಿಬಿತ್ತು ಗಂಡು ಚಿರತೆ
ರಾಯಚೂರು ಫೆಬ್ರವರಿ 27: ರಾಜಕಾರಣಿಗಳನ್ನು ಬೀಳಿಸಲು ಹನಿಟ್ರ್ಯಾಪ್ ಮಾಡುವುದು ಸಾಮಾನ್ಯ. ಆದರೆ ರಾಯಚೂರಿನಲ್ಲಿ ಗಂಡು ಚಿರತೆಯನ್ನು ಬೋನಿಗೆ ಬೀಳಿಸಲು ಹನಿಟ್ರ್ಯಾಪ್ ಮಾಡಲಾಗಿದೆ. ಅಲ್ಲದೆ ಇದು ಯಶಸ್ವಿ ಕೂಡ ಆಗಿದೆ. ಇದರಿಂದಾಗಿ ರಾಯಚೂರು ಅರಣ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು... ರಾಯಚೂರಿನ ಮಲಯಾಬಾದ್‌ನಲ್ಲಿ ಕಳೆದ ಆರು ತಿಂಗಳಿನಿಂದ ಗಂಡು ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ಮನೆಯ ಮುಂದೆ ಕಟ್ಟಿ ಹಾಕುವ ಕುರಿ, ಮೇಕೆ, ದನ, ಕೋಳಿ ಯಾವುದನ್ನೂ ಬಿಡದೆ ಚಿರತೆ ದಾಳಿ ಮಾಡಿ ಕೊಂದು ಹಾಕುತ್ತಿತ್ತು. ಸಂಜೆ ಆದರೆ ಸಾಕು ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಹೊಲ ಗದ್ದೆಗಳಲ್ಲಿ ಜಾನುವಾರಗಳನ್ನು ಮೇಯಿಸಲು ಕೂಡ ಕಷ್ಟವಾಗಿತ್ತು. ಹೀಗಾಗಿ ಸ್ಥಳೀಯ ಜನ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಚಿರತೆ ಪತ್ತೆಗೆ ಅರಣ್ಯ ಇಲಾಖೆ ಹರಸಾಹಸ
ಸ್ಥಳೀಯರ ದೂರಿನ ಮೇರೆಗೆ ಚಿರತೆ ಪತ್ತೆಗೆ ಮುಂದಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹುಡುಕಾಡದ ಸ್ಥಳವಿರಲಿಲ್ಲ. ಎಲ್ಲೇ ಹುಡುಕಿದರೂ ಕೂಡ ಚಿರತೆ ಪತ್ತೆ ಆಗಲೇ ಇಲ್ಲ. ಚಿರತೆ ಹುಡುಕಾಡಲು ಸ್ಥಳೀಯರು ಕೂಡ ಅಧಿಕಾರಿಗಳಿಗೆ ನೆರವಾದರು ಕೂಡ ಚಿರತೆ ಕಣ್ಣಿಗೆ ಕಾಣಿಸಲಿಲ್ಲ. ಆದರೆ ರಾತ್ರಿಯಾದರೆ ಸಾಕು ಚಿರತೆ ಸದ್ದಿಯಲ್ಲದೆ ದಾಳಿ ಮಾಡಿ ಕುರಿ, ಕೋಳಿ, ದನಗಳನ್ನು ಭೇಟೆಯಾಡುತ್ತಿತ್ತು.
ಹೀಗಾಗಿ ಚಿರತೆ ಹೆಚ್ಚಾಗಿ ದಾಳಿ ಮಾಡುವ ಸ್ಥಳದಲ್ಲಿ ಪಂಜರವನ್ನು ಇಟ್ಟು ಅದರಲ್ಲಿ ಕೋಳಿ ಹಾಗೂ ಕುರಿ ಮಾಂಸವನ್ನು ಹಾಕಲಾಗಿತ್ತು. ಇದರ ವಾಸನೆಗೂ ಕೂಡ ಚಿರತೆ ಕಾಣಿಸಿಕೊಳ್ಳಲಿಲ್ಲ. ಆದರೆ ಚಿರತೆ ದಾಳಿ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಕಣ್ಣಿಗೆ ಕಾಣದೆ, ಪಂಜರದ ಹತ್ತಿರವೂ ಬಾರದೆ ಚಿರತೆ ಸಿಕ್ಕಾಪಟ್ಟೆ ತೊಂದರೆಯನ್ನುಂಟು ಮಾಡಿತ್ತು. ಹೀಗಾಗಿ ಜನ ನಿದ್ದೆಗೆಟ್ಟು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿತ್ತು ಚಿರತೆ.

ಕೊನೆಗೂ ಬೋನಿಗೆ ಬಿದ್ದ ಚಿರತೆ
ಆದರೆ ಸತತ ಆರು ತಿಂಗಳ ಪ್ರಯತ್ನದ ಬಳಿಕ ಚಿರತೆ ಕೊನೆಗೆ ಬೋನಿಗೆ ಬಿದ್ದಿದೆ. ಅಷ್ಟಕ್ಕೂ ಚಿರತೆ ಬಿದ್ದಿದ್ದು ಹೇಗೆ ಅನ್ನೋದನ್ನು ನೀವು ತಿಳಿಯಲೇಬೇಕು. ಚಿರತೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದೆ. ಅಷ್ಟಕ್ಕೂ ಆ ಪ್ಲ್ಯಾನ್ ಏನು ಗೊತ್ತಾ?
ಹನಿಟ್ರ್ಯಾಪ್ ಮಾಡಿ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹೆಣ್ಣು ಚಿರತೆಯ ಆಕರ್ಷಣೆಗೆ ಒಳಗಾಗಿ ಗಂಡು ಚಿರತೆ ಬೋನಿಗೆ ಬಿದ್ದಿದೆ. ಎಷ್ಟೇ ಪ್ರಯತ್ನಪಟ್ಟರೂ ಕೂಡ ಬೋನಿಗೆ ಬೀಳದ ಗಂಡು ಚಿರತೆ ಹೆಣ್ಣು ಚಿರತೆಯ ಆಸೆಯಿಂದ ಬೋನಿಗೆ ಬಿದ್ದಿದೆ.
ಹನಿಟ್ರ್ಯಾಪ್‌ಗೆ ಸಿಕ್ಕಿಬಿದ್ದ ಗಂಡು ಚಿರತೆ
ರಾಯಚೂರಿನ ಮಲಯಾಬಾದ್‌ನಲ್ಲಿ ಕಳೆದ ಆರು ತಿಂಗಳಿನಿಂದ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್ ವರ್ಕೌಟ್ ಆಗಿದೆ. ಕಮಲಾಪುರ ಪ್ರಾಣಿ ಸಂಗ್ರಹಾಲಯದಿಂದ ಹೆಣ್ಣು ಚಿರತೆಯ ಮಲ ಹಾಗೂ ಮೂತ್ರವನ್ನು ಸಂಗ್ರಹಿಸಿ ಅದನ್ನು ರಾಯಚೂರಿನ ಮಲಯಾಬಾದ್‌ನ ಬೋನಿನಲ್ಲಿ ಇಡಲಾಗಿತ್ತು. ಮೂರು ದಿನಗಳ ನಂತರ ಈ ಗಂಡು ಚಿರತೆ ವಾಸನೆ ಹಿಡಿದು ಬೋನಿಗೆ ಬಂದಿದೆ. ಆಗ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಆರು ತಿಂಗಳಿನಿಂದ ಜನರಲ್ಲಿ ಆತಂಕ ಹೆಚ್ಚಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದು, ಅವರ ಪ್ಲ್ಯಾನ್‌ಗೆ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಸೆರೆ ಹಿಡಿದ ಬಳಿಕ ಜನ ನಿಟ್ಟುಸಿರು ಬಿಟ್ಟಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications