Get Updates
Get notified of breaking news, exclusive insights, and must-see stories!

Karnataka elections 2023: ರಾಯಚೂರು ಕ್ಷೇತ್ರದಲ್ಲಿ ಶಿವರಾಜ್‌ ಪಾಟೀಲ್‌ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು "ಕೈ" ರಣತಂತ್ರ

ರಾಯಚೂರು, ಏಪ್ರಿಲ್‌, 16: ಜಿಲ್ಲೆಯ ಶಕ್ತಿ ಕೇಂದ್ರ ಎನಿಸಿಕೊಂಡಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಆಗಿತ್ತು. ಆದರೆ ಕಳೆದ ಎರಡೂ ಅವಧಿಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ ಪ್ರಸಕ್ತ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಹಠದಲ್ಲಿದೆ. ಕ್ಷೇತ್ರದ ಇತಿಹಾಸದಲ್ಲಿ ಎರಡು ಬಾರಿ ಗೆಲುವು ಕಂಡಿರುವ ಬಿಜೆಪಿ ಮೂರನೇ ಬಾರಿ ಗೆಲ್ಲಲೇಬೇಕು ಎನ್ನುವ ಛಲದಲ್ಲಿದೆ.

ಅದೇ ರೀತಿ ಹಾಲಿ ಶಾಸಕ ಡಾ.ಶಿವರಾಜ್‌ ಪಾಟೀಲ್ ಕೂಡ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಪಕ್ಷದ ಟಿಕೆಟ್ ಪಡೆದಿರುವ ಡಾ.ಶಿವರಾಜ್‌ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಲು ರಣತಂತ್ರವನ್ನು ರೂಪಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಕೂಡ ತೀವ್ರ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್‌ನಿಂದ 17 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಮಾಜಿ ಶಾಸಕರಾದ ಸೈಯ್ಯದ್ ಯಾಸೀನ್, ಎನ್.ಎಸ್.ಬೋಸರಾಜು ಹೆಸರುಗಳು ಮುಂಚೂಣಿಯಲ್ಲಿವೆ.

Karnataka elections 2023: Congress plan to defeat Shivaraj Patil in Raichur constituency

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡುವಂತೆ ಪಟ್ಟು

ಹಿಂದಿನಿಂದಲೂ ಕಾಂಗ್ರೆಸ್ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿಯು ಮುಸ್ಲಿಂ ಸಮಾಜಕ್ಕೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕ್ಷೇತ್ರದಲ್ಲಿ ಬಲವಾಗಿ ಕೇಳಿಬರುತ್ತಿದೆ. ಕಳೆದೆರಡು ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಶಾಸಕ ಸೈಯ್ಯದ್ ಯಾಸೀನ್‌ಗೆ ಟಿಕೆಟ್ ತಪ್ಪಿದರೆ ಅದೇ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಡವನ್ನು ಹೈಕಮಾಂಡ್ ಮೇಲೆ ಹೇರಲಾಗಿದೆ.

ಇನ್ನು ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಜೆಡಿಎಸ್‌ನಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗದೆ ಇದ್ದರೂ, ವಿನಯ್‌ ಕುಮಾರ್‌ ಅವರು ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತದೆಯೋ, ಇಲ್ಲವೋ ಅನ್ನುವುದನ್ನು ಆಧರಿಸಿ ಜೆಡಿಎಸ್ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿರುವ ಡಾ.ಶಿವರಾಜ್‌ ಪಾಟೀಲ್ ಅವರು ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿದು ಮೂರನೇ ಬಾರಿ ಜಯಬಾರಿ ಸಾಧಿಸುವ ಕಾತರದಲ್ಲಿದ್ದಾರೆ.

ಶಿವರಾಜ್‌ ಪಾಟೀಲ್ ತಾವು ಎದುರಿಸಿದ ಎರಡೂ ಚುನಾವಣೆಗಳಲ್ಲೂ ಕಾಂಗ್ರೆಸ್‌ನ ಸೈಯ್ಯದ್ ಯಾಸೀನ್ ಅವರನ್ನೇ ಸೋಲಿಸಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ 14 ವಿಧಾನಸಭಾ ಚುನಾವಣೆಗಳು ನಡೆದಿವೆ. ಆ ಪೈಕಿ ಕೇವಲ 2 ಬಾರಿ (2004ರಲ್ಲಿ ಎ.ಪಾಪಾರೆಡ್ಡಿ , 2018ರಲ್ಲಿ ಡಾ.ಶಿವರಾಜ್‌ ಪಾಟೀಲ್) ಮಾತ್ರ ಬಿಜೆಪಿ ಗೆದ್ದಿದ್ದು, ಈ ಬಾರಿ ಹ್ಯಾಟ್ರಿಕ್ ಬಾರಿಸುವ ಮೂಲಕ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಸೋಲು, ಗೆಲುವಿನ ಲೆಕ್ಕಾಚಾರ

ಕಾಂಗ್ರೆಸ್‌ನಿಂದ 5 ಬಾರಿ ನಿರಂತರವಾಗಿ ಸ್ಪರ್ಧಿಸಿದ್ದ ಯಾಸೀನ್ 1999, 2008ರಲ್ಲಿ ಗೆಲುವು ಸಾಧಿಸಿದ್ದು, 2004, 2013 ಮತ್ತು 2018ರಲ್ಲಿ ಸೋಲನುಭವಿಸಿದ್ದರು. ಕ್ಷೇತ್ರದಲ್ಲಿ ಒಟ್ಟು 2,29,475 ಜನ ಮತದಾರರಿದ್ದಾರೆ. ಇವರಲ್ಲಿ ಮುಸ್ಲಿಂ ಮತ್ತು ಎಸ್‌ಸಿ, ಎಸ್‌ಟಿ ವರ್ಗದವರೇ ನಿರ್ಣಯಕರು. ಕ್ಷೇತ್ರದಲ್ಲಿ 63 ಸಾವಿರ ಮುಸ್ಲಿಮರು, 55 ಸಾವಿರ ಪರಿಶಿಷ್ಟ ಜಾತಿ -ಪರಿಶಿಷ್ಟ ಪಂಗಡದವರು, 30 ಸಾವಿರ ಓಬಿಸಿ ಹಾಗೂ 25 ಸಾವಿರ ಲಿಂಗಾಯತ ಮತದಾರರಿದ್ದಾರೆ.

ಇಲ್ಲಿಯವರೆಗೂ ನಡೆದ 14 ವಿಧಾನಸಭಾ ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್, ತಲಾ ಎರಡು ಬಾರಿ ಬಿಜೆಪಿ - ಜನತಾದಳ, ತಲಾ ಒಂದು ಬಾರಿ ಎಸ್‌ಎಸ್‌ಪಿ, ಜನತಾ ಪಕ್ಷ ಹಾಗೂ ಜೆಡಿಎಸ್‌ ಗೆದ್ದಿವೆ. ಪ್ರಸ್ತುತ ಶಾಸಕರಾಗಿರುವ ಡಾ.ಶಿವರಾಜ್‌ ಪಾಟೀಲ್ ಅವರು ಸತತ ಎರಡು ಬಾರು ಗೆಲುವು ಕಂಡಿದ್ದು, ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+