Raibag Elections : ಬಿಜೆಪಿ ವಿರುದ್ಧ ಗೆದ್ದು ಬೀಗಲು ಕಾಂಗ್ರೆಸ್ ಸಜ್ಜು, ವಿಶ್ಲೇಷಣೆ
ಬೆಳಗಾವಿ, ಮಾರ್ಚ್ 25: ಬಿಜೆಪಿಗೆ ಈ ಹಿಂದಿನ ಚುನಾವಣೆಯಲ್ಲಿ ಅಧಿಕಾರ ಧಕ್ಕಿರುವ ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆ ಕಾವು ಹೆಚ್ಚುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳು ಭಾರೀ ಪ್ರಚಾರ ನಡೆಸಿವೆ.
ಪ್ರಾಚೀನ ಕಾಲದಲ್ಲಿ ಈಗಿನ ರಾಯಭಾಗ ಅನ್ನು ಪೂಬಾಗಿ ಎಂದು (ಹೂವಿನ ಬಾಗಿ/ಹೂವಿನ ಸ್ಥಳ) ಎಂದು ಕರೆಯುತ್ತಿದ್ದರು> ಅಂದು ರಟ್ಟ ಸಾಮ್ರಾಜ್ಯವು ರಾಯಭಾಗವನ್ನು ಹಲವು ಶತಮಾನಗಳ ಕಾಲ ಆಳಿದ್ದರು. ಸೋಮನಾಥ ದೇವಾಲಯ, ನರಸಿಂಹ ದೇವಾಲಯ ಮತ್ತು ಜೈನ ಬಸದಿ ಐತಿಹಾಸಿಕ ಸ್ಥಳಗಳಾಗಿವೆ.

ಬಿಜೆಪಿಯಿಂದ ದುರ್ಯೋಧನ ಐಹೊಳೆ ಕಳೆದ ಚುನಾವಣೆಯಲ್ಲಿ ಚುನಾಯಿತರಾಗಿದ್ದೇವೆ. ಅವರ ವಿರುದ್ಧ ಕಾಂಗ್ರೆಸ್‌ನಿಂದ ಪ್ರದೀಪ್ ಕುಮಾರ್ ಮಳಗಿ ಅವರು ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದಾರೆ. ಇಲ್ಲಿ ಬಿಜೆಪಿ ಭದ್ರಕೋಟೆ ರೂಪಿಸಿಕೊಂಡಿದೆ ಎಂದು ಹೇಳಲು ಆಗದು. ಕಾರಣ ಕಾಂಗ್ರೆಸ್ ಸಹ ಬಹಳಷ್ಟು ಅಂತರದಿಂದ ಸೋತಿಲ್ಲ. ಪ್ರಬಲ ಪ್ರತಿ ಸ್ಪರ್ಧೆ ಒಡ್ಡಿತ್ತು. ಜಾತಿ ರಾಜಕಾರಣ ಇಲ್ಲಿ ಕೆಲಸ ಮಾಡುತ್ತದೆ ಆದರೂ ಜನ ಅಭಿವೃದ್ಧಿಯನ್ನೇ ಹೆಚ್ಚು ಬಯಸುತ್ತಾರೆ ಎನ್ನಲಾಗಿದೆ.
ಅಭಿವೃದ್ಧಿ ಆಗಿಲ್ಲ: ಆದರೂ ಬಿಜೆಪಿಗೆ ಜಯ
ರಾಯಭಾಗ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಗಳು ಆಗಿಲ್ಲ ಎಂಬ ಅರೋಪ ಕೇಳಿ ಬಂದಿವೆ. ಸಣ್ಣ ಸಣ್ಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ. ಆರೋಗ್ಯ ತುರ್ತು ಸಂದರ್ಭದಲ್ಲಿ ಜನರು ಜಲ್ಲಾ ಕೇಂದ್ರಗಳತ್ತ ಮುಖ ಮಾಡಬೇಕಿದೆ. ಇನ್ನು ರಸ್ತೆ, ನೀರು ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಲ್ಲಿ ಸಹ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ.

ಈ ಕ್ಷೇತ್ರ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಅಷ್ಟಾಗಿ ಸುಧಾರಣೆ ಆಗಿಲ್ಲವಾದರೂ ಬಿಜೆಪಿ ಮುಂದೆ. ಯಾವುದೇ ರಾಜಕೀಯ ಪಕ್ಷಗಳು ಇಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತವೆ ಹೊರತು, ಅಭಿವೃದ್ಧಿಗಲ್ಲ ಎನ್ನುತ್ತಾರೆ ಕ್ಷೇತ್ರದ ಜನರು. ಕ್ಷೇತ್ರದಲ್ಲಿ ಅಲ್ಲಲ್ಲಿ ನೀರಾವರಿ ಯೋಜನೆ ಕುರಿತ ಕೆಲಸಗಳು, ರಸ್ತೆ ಅಭಿವೃದ್ಧಿಯಂತ ಆಗೊಮ್ಮೆ ಈಗೊಮ್ಮೆ ಕೆಲಸ ಮಾಡಲಾಗಿದೆ. ಈ ಕಾರಣದಿಂದ ಬಿಜೆಪಿ ಕಡಿಮೆ ಅಂತರದಲ್ಲಿ ಗೆದ್ದಿದೆ.
ಬಿಜೆಪಿಗೆ ಈ ಬಾರಿ ಆತಂಕ
ರಾಯಭಾಗನಲ್ಲಿ ಕಾಂಗ್ರೆಸ್ ಗೆಲುವಿನ ಸನಿಹಕ್ಕೆ ಬಂದು ಸೋತಿದೆ. ಈ ಸಲ ಪ್ರಬಲ ಸೂತ್ರಗಳ ಮೂಲಕ ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಕಳೆದ ಬಾರಿ ಪ್ರದೀಪ್ ಮಾಳಗಿ ಸೋತಿದ್ದಾರೆ. ಈ ಬಾರಿ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಜನರು ಅಭಿವೃದ್ಧಿ ಮಾಡಿದ್ದ ಪಕ್ಷವನ್ನು ಆರಿಸಿ ತರುವುದಾದರೆ, ಅಧಿಕಾರ ಇದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡದ ಬಿಜೆಪಿಗೆ ಪಾಠ ಕಲಿಸುವ ಸಾಧ್ಯತೆ ಇದೆ ಎಂಬುದು ಕ್ಷೇತ್ರ ಸಮೀಕ್ಷೆಯಿಂದ ತಿಳಿದು ಬಂದಿದೆ.

Raibag Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ದುರ್ಯೋಧನ ಐಹೊಳೆ | 67,502 | ಪ್ರದೀಪ್ ಕುಮಾರ್ ಮಳಗಿ | 50,954 |
| 2013 | ದುರ್ಯೋಧನ ಐಹೊಳೆ | 37535 | ಪ್ರದೀಪ್ ಕುಮಾರ್ ಮಳಗಿ | 36,706 |
| 2008 | ದುರ್ಯೋಧನ ಐಹೊಳೆ | 39,378 | ಓಂಪ್ರಕಾಶ್ ಕಂಗೊಳ್ಳಿ | 39748 |
ಲಿಂಗಾಯತರು ನಿರ್ಣಯಕರಾದರೂ ಅಭಿವೃದ್ಧಿಗೆ ಆದ್ಯತೆ
ಕ್ಷೇತ್ರದಲ್ಲಿ ಲಿಂಗಾಯತರು ನಿರ್ಣಾಯಕರಾದರೂ ಅಭಿವೃದ್ಧಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಲಿಂಗಾಯತರು ಇಲ್ಲಿ ಹೆಚ್ಚಿದ್ದು, ಅವರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಅಧಿಕವಾಗಿದ್ದಾರೆ. ಕುರುಬ ಸಮುದಾಯದವರು 35,000 ನಷ್ಟಿದ್ದಾರೆ. ಹೀಗಾಗಿ ಇಲ್ಲಿ ಜಾತಿ ರಾಜಕಾರಣ, ಅಭ್ಯರ್ಥಿ ಮುಖ ನೋಡಿ ಮತದಾನ ಹಾಕುವ ಚಾಳಿ ಇಲ್ಲಿದೆ. ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ಪಕ್ಷಗಳಿಂದಲೂ ಭಾರಿ ಪ್ರಚಾರ ನಡೆಸುತ್ತಿದ್ದಾರೆ. ಹೆಚ್ಚೆಚ್ಚು ಭರವಸೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಪೈಪೋಟಿಗೆ ಬೀಳಲಿವೆ.












Click it and Unblock the Notifications