ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಕ್ಕೆ ಸಲಿಂಗಿ ಸಂಗಾತಿಗೆ ಚಾಕು ಇರಿತ
ಪುಣೆ, ಸೆಪ್ಟೆಂಬರ್ 21: 23 ವರ್ಷದ ಸಲಿಂಗಿಯೊಬ್ಬ ತನ್ನ ಗೆಳೆಯನಿಗೆ ಚಾಕುವಿನಿಂದ ಇರಿದ ಆರೋಪ ಎದುರಿಸುತ್ತಿದ್ದಾನೆ. ಈ ಬಗ್ಗೆ ಪುಣೆ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆಯತ್ನದ ಪ್ರಕರಣ ದಾಖಲಾಗಿದೆ ಎಂದು ಖಡಕ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರರೂ ಆಗಿರುವ ನಲವತ್ತಾರು ವರ್ಷದ ವ್ಯಕ್ತಿಯ ಮನೆಯಲ್ಲಿ ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. "ಇಬ್ಬರೂ ಕಳೆದ ಹಲವು ವರ್ಷಗಳಿಂದ ಸಂಗಾತಿಗಳಾಗಿದ್ದರು. ಮಂಗಳವಾರ ರಾತ್ರಿ ಆರೋಪಿಯು ದೂರುದಾರನನ್ನು ಭೇಟಿಯಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ದೂರುದಾರ ಬುಧವಾರ ಬೆಳಗ್ಗೆ ಆರೋಪಿಯನ್ನು ಮತ್ತೊಮ್ಮೆ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸಿದಾಗ ಜಗಳವಾಗಿ, ಹೊಡೆದಾಟವಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೊಡೆದಾಟದ ವೇಳೆ ಆರೋಪಿಯು ಚೂಪಾದ ಆಯುಧದಿಂದ ದೂರುದಾರನಿಗೆ ಇರಿದಿದ್ದಾನೆ. ಸದ್ಯಕ್ಕೆ ದೂರುದಾರನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದು, ಆರೋಪಿ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಈಚೆಗೆ ಐಪಿಸಿ ಸೆಕ್ಷನ್ 377ರಲ್ಲಿನ ಕೆಲ ಅಂಶ ಬದಲಾವಣೆಗೆ ಒಪ್ಪಿಗೆ ಸೂಚಿಸಿ, ವಯಸ್ಕರರ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ್ದನ್ನು ಸ್ಮರಿಸಬಹುದು.












Click it and Unblock the Notifications