ವ್ಯಕ್ತಿಯ ಜೀವವನ್ನೇ ಬಲಿತೆಗೆದುಕೊಂಡ ಪುಣೆಯ ಪಾರ್ಕಿಂಗ್ ಜಗಳ
ಪುಣೆ, ಜನವರಿ 22: ಪಾರ್ಕಿಂಗ್ ಜಾಗದ ಕುರಿತು ಎದ್ದ ಕ್ಷುಲ್ಲಕ ಜಗಳವೊಂದು ಒಬ್ಬ ವ್ಯಕ್ತಿಯ ಜೀವವನ್ನೇ ಬಲಿತೆಗೆದುಕೊಂಡ ದಾರುಣ ಘಟಣೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಜ.20 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನೆನಿಲ್ಲೆ ಬಟ್ಟಿವಾಲಾ ಎಂಬ 39 ವರ್ಷದ ಐಟಿ ಇಂಜಿನಿಯರ್ ಒಬ್ಬರು ತಮ್ಮ ಮನೆಯ ಎದುರಲ್ಲಿ ಟ್ಯಾಕ್ಸಿ ನಿಲ್ಲಿಸಿದ್ದಕ್ಕಾಕಿ ತಕರಾರು ತೆಗೆದಿದ್ದರು. ಮೂವರು ಟ್ಯಾಕ್ಸಿ ಚಾಲಕರು ಮತ್ತು ಬಟ್ಟಿವಾಲಾ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ಟೂರಿಸ್ಟ್ ಕಂಪೆನಿಯೊಂದರ ಟ್ಯಾನ್ಸಿ ಚಾಲಕರು ಕಬ್ಬಿಣ ರಾಡ್ ನಿಂದ ಬಟ್ಟಿವಾಲಾನನ್ನು ಥಳಿಸಿದ್ದಾರೆ. ಇದರಿಂದಾಗಿ ತೀವ್ರ ಗಾಯಗೊಂಡ ಬಟ್ಟಿವಾಲಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೂವರು ಆರೋಪಿಗಳಾದ ಶ್ರೀಗಣೇಶ್ ರಾಸ್ಕರ್, ಯೋಗೇಶ್ ಕಡ್ವೆ ಮತ್ತು ವಿಕ್ರಮ್ ಬಾಂಬೆ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಗಣೇಶ್ ರಾಸ್ಕರ್ ಒಂದು ಟೂರಿಸ್ಟ್ ಏಜಿನ್ಸಿ ನಡೆಸುತ್ತಿದ್ದು, ಆತನ ಏಜೆನ್ಸಿಯ ವಾಹನಗಳನ್ನು ಬಟ್ಟಿವಾಲಾ ಮನೆಯ ಮುಂದೆ ಪಾರ್ಕ್ ಮಾಡಲಾಗುತ್ತಿತ್ತು. ಈ ಕುರಿತು ಹಲವು ಬಾರಿ ಬಟ್ಟಿವಾಲಾ ವಿರೋಧ ವ್ಯಕ್ತಪಡಿಸಿದ್ದರೂ, ವಾಹನವನ್ನು ಬೇರೆಡೆ ನಿಲ್ಲಿಸುವ ವ್ಯವಸ್ಥೆಯನ್ನು ರಾಸ್ಕರ್ ಮಾಡಿಕೊಂಡಿರಲಿಲ್ಲ. ಇದರಿಂದ ಪದೇ ಪದೇ ನಡೆಯುತ್ತಿದ್ದ ಗಲಾಟೆ, ಮೊನ್ನೆ ವಿಕೋಪಕ್ಕೆ ತಿರುಗಿ, ಈ ದುರಂತ ಸಂಭವಿಸಿದೆ.











Click it and Unblock the Notifications