ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹಿತರ ಜೊತೆ ಚಾಟಿಂಗ್: ಊಟಕ್ಕೆ ಬಾ ಎಂದು ಒತ್ತಾಯಿಸಿದ್ದಕ್ಕೆ ಅಮ್ಮನಿಗೆ ಗುಂಡಿಕ್ಕಿದ ಮಗ

|
Google Oneindia Kannada News

ಪಾಟ್ನಾ, ಜುಲೈ 23: ಊಟ ಮಾಡಲು ಬಾ ಎಂದು ಪದೇ ಪದೇ ಒತ್ತಾಯಿಸಿದ ಕಾರಣಕ್ಕಾಗಿ ಅಮ್ಮನಿಗೆ ಮಗನೇ ಗುಂಡಿಕ್ಕಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಮರಾಂಚಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುಮಾರು 10.30ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, 20 ವರ್ಷದ ಯುವಕ ಹಾಗೂ ಆತನ ಬಳಿಯಿದ್ದ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Recommended Video

Corona Vaccine ತಯಾರಿಸುವಲ್ಲಿ ಯಾವ ದೇಶ ಯಾವ ಹಂತದಲ್ಲಿದೆ ? | Oneindia Kannada

ಹಲ್ಲೆಗೊಳಗಾದ ಮಹಿಳೆಯನ್ನು 55 ವರ್ಷದ ಮಂಜು ದೇವಿ ಎಂದು ಗುರುತಿಸಲಾಗಿದ್ದು ಆಕೆಯನ್ನು ಮೊದಲು ಬೆಗುಸರೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಅವರನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಹೆಚ್) ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರುಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

ಅಂಗದ್ (20 ವರ್ಷ) ಮಂಗಳವಾರ ರಾತ್ರಿ ಮನೆ ಹೊರಗೆ ಕೆಲವು ಸ್ನೇಹಿತರ ಜೊತೆ ಸತತವಾಗಿ ಮಾತನಾಡಿಕೊಂಡು ನಿಂತಿದ್ದ. ಹೆಚ್ಚು ಸಮಯ ಆಗಿದ್ದರಿಂದ ಅವರ ತಾಯಿ ಪದೇ ಪದೇ ಊಟ ಮಾಡು ಬಾ ಎಂದು ಕೂಗುತ್ತಿದ್ದರು. ಎಷ್ಟೇ ಕರೆದರು ಮನೆಗೆ ಬರದಿದ್ದರಿಂದ ಮನೆ ಹೊರಗೆ ಬಂದು ಮಂಜು ದೇವಿ ಜೋರಾಗಿ ಕೂಗಲು ಶುರು ಮಾಡಿದರು. ಹಿಂದೆಯಿಂದ ಬಂದ ಮಗ ಆಕೆಗೆ ಶೂಟ್ ಮಾಡಿದ್ದಾನೆ. ಮಂಜು ದೇವಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Son Shoots His Mother for Disturbing his Conversation with friends

ಮನೆಯ ಹಿಂದೆ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಗುಂಡಿನ ದಾಳಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಅಂಗದ್ ಅವರ ತಂದೆ ಹಾಗು ಇಬ್ಬರು ಸಹೋದರರು ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಕಳೆದ ಆರು ತಿಂಗಳ ಹಿಂದೆ 7500 ರೂಪಾಯಿಗೆ ಪಿಸ್ತೂಲ್ ಖರೀದಿಸಿದ್ದರು ಎಂದು ಪೊಲೀಸರಿಗೆ ಅಂಗದ್ ಹೇಳಿದ್ದಾನೆ. ಕೊರೊನಾ ಪರೀಕ್ಷೆ ನಡೆಸಿದ ನಂತರ ಆತನನ್ನು ಜೈಲಿಗೆ ಕಳುಹಿಸಲಾಗಿದೆ.

English summary
20 year old son shoots mother for disrupting his conversation with friends at patna. police filed case and arrested accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X