'ಡಿ' ಗ್ರೂಪ್ ಹುದ್ದೆಗೆ ಎಂಬಿಎ, ಎಂಸಿಎ ಪದವೀಧರರ ಅರ್ಜಿ!

ಪಾಟ್ನಾ, ನವೆಂಬರ್ 22 : ಬಿಹಾರ ವಿಧಾನಸಭೆಯಲ್ಲಿ ಖಾಲಿ ಇರುವ ಗ್ರೂಪ್ 'ಡಿ' ಹುದ್ದೆಗೆ ಎಂಬಿಎ, ಎಂಸಿಎ ಪದವೀಧರರು ಅರ್ಜಿ ಹಾಕಿದ್ದಾರೆ. ಒಟ್ಟು 166 ಹುದ್ದೆಗಳಿಗೆ 5 ಲಕ್ಷ ಅರ್ಜಿಗಳು ಬಂದಿದ್ದು, ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜವಾನ, ತೋಟದ ಮಾಲಿ, ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದಕ್ಕೆ 5 ಲಕ್ಷ ಅರ್ಜಿಗಳು ಬಂದಿದ್ದು, ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿದಂತಿದೆ.

ಬಿಹಾರ ವಿಧಾನಸಭೆ ಭದ್ರಾತಾ ಸಿಬ್ಬಂದಿ, ಜವಾನ ಹುದ್ದೆಗೆ ಎಂಬಿಎ, ಎಂಸಿಎ ಪದವಿ ಪಡೆದ ನೂರಕ್ಕೂ ಅಧಿಕ ಅಭ್ಯರ್ಥಿಗಳ ಅರ್ಜಿಗಳು ಬಂದಿವೆ. ಪದವಿ, ಸ್ನಾತಕೋತ್ತರ ಪದವಿ ಪಡೆದವರು ಸಹ ಉದ್ಯೋಗ ಬಯಸಿ ಅರ್ಜಿ ಹಾಕಿದ್ದಾರೆ.

MBA MCA Graduates Application For Group D Post

ರಾಜ್ಯದ ಶಿಕ್ಷಣ ಸಚಿವ ಕೃಷ್ಣ ಪ್ರಸಾದ್ ಶರ್ಮಾ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. "166 ಗ್ರೂಪ್ ಡಿ ಹುದ್ದೆಗಳಿಗೆ 5 ಲಕ್ಷ ಜನರು ಅರ್ಜಿ ಹಾಕಿದ್ದಾರೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಪ್ರೇಮಚಂದ್ರ ಮಿಶ್ರಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಪರಿಸ್ಥಿತಿಯ ಒತ್ತಡ ಕಾರಣ ಜವಾನ ಹುದ್ದೆಗೆ ಅರ್ಜಿ ಹಾಕುವಂತೆ ಆಗಿದೆ. ಒಂದು ಹುದ್ದೆಗೆ ಸುಮಾರು 3 ಸಾವಿರ ಅರ್ಜಿಗಳು ಬಂದಂತೆ ಆಗಿದೆ" ಎಂದು ಹೇಳಿದ್ದಾರೆ.

"ಇಂತಹ ಪರಿಸ್ಥಿತಿ ನೋಡಿ ಅಚ್ಚರಿಯಾಗುತ್ತಿದೆ. ಚುನಾವಣಾ ಸಮಾವೇಶಗಳಲ್ಲಿ ಕೋಟ್ಯಾಂತರ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದವರು ಎಲ್ಲಿ ಹೋದರು?" ಎಂದು ಪ್ರೇಮಚಂದ್ರ ಮಿಶ್ರಾ ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+