ಜಾನುವಾರು ಕಳ್ಳತನ ಶಂಕೆ; ವ್ಯಕ್ತಿಯನ್ನು ಥಳಿಸಿ ಕೊಂದ ಜನ

ಬಿಹಾರ, ಡಿಸೆಂಬರ್ 18: ಜಾನುವಾರು ಕಳ್ಳತನ ಶಂಕೆ ಮೇಲೆ ಜನರ ಗುಂಪು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಆತನ ಸಾವಿಗೆ ಕಾರಣವಾಗಿರುವ ಘಟನೆ
ಬಿಹಾರದ ಪಾಟ್ನಾದಲ್ಲಿ ನಡೆದಿದೆ.

32 ವರ್ಷದ ಮೊಹಮದ್ ಎಂಬಾತ ಘಟನೆಯಲ್ಲಿ ಮೃತಪಟ್ಟಿದ್ದಾನೆ. ಈತ ಪಾಟ್ನಾದ ಪುಲ್ವಾರಿಷರಿಫ್ ಎಂಬಲ್ಲಿ ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎಮ್ಮೆಯ ಕಟ್ಟನ್ನು ಬಿಚ್ಚುತ್ತಿರುವಾಗ ಆ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಆ ಮನೆಯವರು ಹಳ್ಳಿಯವರಿಗೂ ವಿಷಯ ತಿಳಿಸಿದ್ದು, ಗ್ರಾಮದವರು ಸೇರಿ ಈತನಿಗೆ ಥಳಿಸಲು ಆರಂಭಿಸಿದ್ದಾರೆ.

ಮೊಹಮದ್ ಜೊತೆ ಬಂದಿದ್ದ ಮತ್ತೊಬ್ಬ ವ್ಯಕ್ತಿಯು ಪರಾರಿಯಾಗಿದ್ದಾನೆ. ಸುಮಾರು ಗಂಟೆಗಳವರೆಗೂ ಜನರು ನಿರಂತರವಾಗಿ ಈತನಿಗೆ ಥಳಿಸಿದ್ದು, ಆತ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಥಳಿತಕ್ಕೊಳಗಾದವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ.

Man Beaten To Death Over Cattle Theft Suspicion In Patna

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿ ವಿಚಾರಣೆಯನ್ನು ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+