ಪುತ್ರ ತೇಜಸ್ವಿಗೆ ಶುಭ ಹಾರೈಸಿ, ಬಿಹಾರ ಗಿಫ್ಟ್ ನೀಡಲಿದೆ ಎಂದ ಲಾಲೂ
ಪಾಟ್ನ, ನ. 10: ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರ ವಿಧಾನಸಭೆ ಚುನಾವಣೆಯಿಂದ ದೂರ ಉಳಿದಿದ್ದಾರೆ. ಮೇವು ಹಗರಣದಲ್ಲಿ ಸಿಲುಕಿ ಜೈಲುವಾಸಿಯಾಗಿರುವ ಲಾಲೂ ತಮ್ಮ ಪುತ್ರ, ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರಿಗೆ ಶುಭ ಹಾರೈಸಿ, ಹುಟ್ಟುಹಬ್ಬಕ್ಕೆ ಬಿಹಾರ ಗಿಫ್ಟ್ ನೀಡಲಿದೆ ಎಂದಿದ್ದಾರೆ.
Recommended Video
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈ ಸಂದರ್ಭದಲ್ಲಿ ಲಾಲೂ ಅವರು ತಮ್ಮ ಪುತ್ರ ತೇಜಸ್ವಿಗೆ 31ನೇ ಹುಟ್ಟುಹಬ್ಬಕ್ಕಾಗಿ ಶುಭ ಹಾರೈಸಿದ್ದಾರೆ. ತೇಜಸ್ವಿ ಅವರು ಲಾಲೂ ಅವರು ನವೆಂಬರ್ 10ರ ವೇಳೆಗೆ ಜೈಲಿನಿಂದ ಹೊರಬರಲಿದ್ದಾರೆ. ಚುನಾವಣೆ ಫಲಿತಾಂಶ ಅವರಿಗೆ ಉಡುಗೊರೆ ಎಂದಿದ್ದರು. ಯಾರು ಯಾರಿಗೆ ಉಡುಗೊರೆ ನೀಡಲಿದ್ದಾರೆ ಎಂಬುದನ್ನು ಜನತೆ ನಿರ್ಧರಿಸಲಾಗಿದ್ದು, ಇಂದು ಅಂತಿಮ ಫಲಿತಾಂಶ ಸಿಗಲಿದೆ.












Click it and Unblock the Notifications