ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನ ವಾರೆಂಟ್ ಉಲ್ಲಂಘಿಸಿ ಬಿಹಾರ ಸಚಿವನಾದ ಕಾರ್ತಿಕೇಯ ಸಿಂಗ್‌ಗೆ ಕಾನೂನು ಖಾತೆ

|
Google Oneindia Kannada News

ಪಟ್ನಾ, ಆಗಸ್ಟ್ 17: ಕಾನೂನು ಉಲ್ಲಂಘನೆ ಆರೋಪ ಎದುರಿಸುತ್ತಿರುವ ಬಿಹಾರ ಶಾಸಕ ಕಾರ್ತಿಕೇಯ ಸಿಂಗ್ ಬಿಹಾರದ ನೂತನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಹೊಸ ವಿವಾದ ಹುಟ್ಟುಹಾಕಿದೆ. ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.

2014ರಲ್ಲಿ ನಡೆದ ಅಪಹರಣ ಪ್ರಕರಣದಲ್ಲಿ ಕಾರ್ತಿಕೇಯ ಸಿಂಗ್ ವಿರುದ್ಧ ದಾನಪುರ ನ್ಯಾಯಾಲಯ ಜುಲೈ 16ರಂದು ಬಂಧನ ವಾರಂಟ್ ಜಾರಿ ಮಾಡಿತ್ತು. ಅವರು ಆಗಸ್ಟ್ 16ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು, ಆದರೆ ನ್ಯಾಯಾಲಕ್ಕೆ ಗೈರಾಗಿದ್ದ ಕಾರ್ತಿಕೇಯ ಸಿಂಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಪರ್ಯಾಸ ಏನೆಂದರೆ ಅವರಿಗೆ ಕಾನೂನು ಖಾತೆಯನ್ನು ಹಂಚಲಾಗಿದೆ.

Breaking: ನಿತೀಶ್ ಕುಮಾರ್ ಸಂಪುಟಕ್ಕೆ 31 ಸಚಿವರ ಸೇರ್ಪಡೆBreaking: ನಿತೀಶ್ ಕುಮಾರ್ ಸಂಪುಟಕ್ಕೆ 31 ಸಚಿವರ ಸೇರ್ಪಡೆ

ಮೊದಲ ಬಾರಿಗೆ ಆರ್‌ಜೆಡಿಯ ಎಂಎಲ್‌ಸಿ ಆಗಿರುವ ಕಾರ್ತಿಕೇಯ ಸಿಂಗ್, ಪಟ್ನಾ ಜಿಲ್ಲೆಯ ಬರ್ಹ್-ಮೊಕಾಮಾ ತಾಲ್ ಪ್ರದೇಶದವರಾಗಿದ್ದಾರೆ. ಕಾರ್ತಿಕೇಯ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ಇದುವರೆಗೆ ನ್ಯಾಯಾಲಯದಲ್ಲಿ ಯಾವುದೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿಲ್ಲ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

 ಕಾರ್ತಿಕೇಯ ಸಿಂಗ್ ವಿರುದ್ಧ ಅಪಹರಣ ಪ್ರಕರಣ

ಕಾರ್ತಿಕೇಯ ಸಿಂಗ್ ವಿರುದ್ಧ ಅಪಹರಣ ಪ್ರಕರಣ

2014 ರಲ್ಲಿ ಕಾರ್ತಿಕೇಯ ಸಿಂಗ್ ಮತ್ತು ಇತರ 17 ಜನರ ವಿರುದ್ಧ ಪಾಟ್ನಾದ ಬಿಹ್ತಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡುವ ಉದ್ದೇಶದಿಂದ ಬಿಲ್ಡರ್ ಅಪಹರಣಕ್ಕೆ ಸಂಚು ರೂಪಿಸಿದ ಆರೋಪ ಕಾರ್ತಿಕೇಯ ಸಿಂಗ್ ಮೇಲಿದೆ.

ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಅದರ ನಂತರ ಕಾರ್ತಿಕೇಯ ಸಿಂಗ್ ವಿರುದ್ಧ ಜುಲೈ 14, 2022 ರಂದು ವಾರಂಟ್ ಹೊರಡಿಸಲಾಯಿತು ಮತ್ತು ಆಗಸ್ಟ್ 16 ರಂದು ಶರಣಾಗಬೇಕಿತ್ತು ಆದರೆ ಅವರು ನ್ಯಾಯಾಲಯದಲ್ಲಿ ಶರಣಾಗುವ ಬದಲು ಪ್ರಮಾಣವಚನ ಸ್ವೀಕರಿಸಲು ರಾಜಭವನಕ್ಕೆ ತಲುಪಿದರು.

 ಸಿಎಂ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ

ಸಿಎಂ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವವರಿಗೆ ಸ್ಥಾನ ನೀಡಿದ್ದಕ್ಕಾಗಿ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರ ರಚನೆ ನಂತರ ರಾಜ್ಯದಲ್ಲಿ ಜಂಗಲ್ ರಾಜ್ ಮತ್ತೆ ಬರುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ, ಆರ್‌ಜೆಡಿಯ ಒತ್ತಡಕ್ಕೆ ನಿತೀಶ್‌ ಕುಮಾರ್‌ ಮಣಿಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದೆ.

ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, "ನಿತೀಶ್ ಕುಮಾರ್ ಸರ್ಕಾರದ ಸಚಿವ ಸಂಪುಟವು ಅತ್ಯಂತ ಭಯಾನಕ ಚಿತ್ರದಂತೆ ಕಾಣಿಸುತ್ತಿದೆ. ಬಿಹಾರದ ಜನರ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಎದುರಾಗಿದೆ. ಒಬ್ಬ ವ್ಯಕ್ತಿ ತಾನು ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದಾರೆ. ಅದೇ ವ್ಯಕ್ತಿ ಬಿಹಾರದ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ವಿಚಾರವನ್ನು ಮರೆ ಮಾಡಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.

 ಆರೋಪ ಸುಳ್ಳು ಎಂದ ಕಾರ್ತಿಕೇಯ

ಆರೋಪ ಸುಳ್ಳು ಎಂದ ಕಾರ್ತಿಕೇಯ

ಕಿಡ್ನಾಪ್ ಪ್ರಕರಣದಲ್ಲಿ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಕಾರ್ತಿಕೇಯ ಸಿಂಗ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿಯೂ ಎಲ್ಲಾ ವಿವರಗಳನ್ನು ನೀಡಿದ್ದೇನೆ ಮತ್ತು ಚುನಾವಣಾ ಆಯೋಗದಿಂದ ಯಾವ ವಿಚಾರವನ್ನು ಮುಚ್ಚಿಟ್ಟಿಲ್ಲ ಎಂದು ಅವರು ಹೇಳಿದರು.

"ನನ್ನನ್ನು ನಾನು ನಿರಪರಾಧಿ ಎಂದು ಪರಿಗಣಿಸುತ್ತೇನೆ. ಆರೋಪ ಮಾಡುವುದಕ್ಕೂ ಅದನ್ನು ಸಾಬೀತುಪಡಿಸುವುದಕ್ಕೂ ವ್ಯತ್ಯಾಸವಿದೆ. ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಮತ್ತು ಬಿಜೆಪಿಯ ಆರೋಪಕ್ಕೆ ಯಾವುದೇ ಆಧಾರವಿಲ್ಲ, ಪ್ರಕರಣ ದಾಖಲಿಸಿದ ಮಾತ್ರಕ್ಕೆ ನಾನು ಅಪರಾಧಿಯಾಗುವುದಿಲ್ಲ" ಎಂದು ಅವರು ಹೇಳಿದರು.

 ಕಾರ್ತಿಕೇಯ ಸಿಂಗ್ ವಿರುದ್ಧ ಇರುವ ಆರೋಪ

ಕಾರ್ತಿಕೇಯ ಸಿಂಗ್ ವಿರುದ್ಧ ಇರುವ ಆರೋಪ

ಕಾರ್ತಿಕೇಯ ವಿರುದ್ಧ ಐಪಿಸಿಯ 363 (ಅಪಹರಣ), 364 (ಕೊಲೆಯ ಉದ್ದೇಶದಿಂದ ಅಪಹರಣ), 365 (ರಹಸ್ಯ, ನ್ಯಾಯಸಮ್ಮತವಲ್ಲದ ಅಪಹರಣ, ಸೆರೆವಾಸ ಮಾಡುವ ಉದ್ದೇಶದಿಂದ), ಮತ್ತು 34 (ಘಟನೆಯನ್ನು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮಾಡಿದ್ದಾರೆ) ನಂತಹ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಹಿಂದೆ 16 ಫೆಬ್ರವರಿ 2017 ರಂದು ಪಾಟ್ನಾ
ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಕಾರ್ತಿಕೇಯ ಸಿಂಗ್ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಎಂಎಲ್‌ಸಿ ಆಗಿದ್ದು, ಆರ್‌ಜೆಡಿ ಕೋಟಾದ ಮೂಲಕ ಬಿಹಾರ್ ಸಿಎಂ ಸಂಪುಟದಲ್ಲಿ ಸ್ಥಾನ ಪಡೆದರು. ಕಾರ್ತಿಕೇಯ ಸಿಂಗ್, ವೃತ್ತಿಯಲ್ಲಿ ಶಿಕ್ಷಕರಾಗಿದ್ದವರು.

English summary
A controversy has erupted after RJD MLC Kartikeya Singh was inducted as the law minister of the Bihar. Kartikey Singh is facing an accusation of violating the law as a court has issued an arrest warrant against him for his alleged involvement in a kidnapping case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X