Get Updates
Get notified of breaking news, exclusive insights, and must-see stories!

ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್?

ಪಾಟ್ನಾ, ಮೇ 16: "ಕಾಂಗ್ರೆಸ್ಸಿಗೆ ಪ್ರಧಾನಿ ಪಟ್ಟ ಬೇಕಂತಿಲ್ಲ. ನಮಗೆ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಮುಖ್ಯ ಗುರಿ" ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ಈ ಹೇಳಿಕೆ ರಾಷ್ಟ್ರರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸುವ ನಿರೀಕ್ಷೆ ಇದೆ. ಲೋಕಸಸಭೆ ಚುನಾವಣೆಯನ್ನು ಪ್ರತಿಪಕ್ಷವೂ ಅದೊಂದು ಪ್ರಧಾನಿ ಹುದ್ದೆಯ ಕನಸಿನಲ್ಲೇ ಎದುರಿಸುತ್ತಿರುವಾಗ ಈ ರಾಷ್ಟ್ರದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಇಂಥ ತ್ಯಾಗಕ್ಕೆ ಸಿದ್ಧವಾಗುತ್ತದೆಂದರೆ ಅಚ್ಚರಿಯೇ ತಾನೆ?

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪ್ರತಿನಿಧಿಯಾಗಿ ಈ ಹೇಳಿಕೆ ನೀಡಿದ್ದಾರಾ ಅಥವಾ ಅದು ಅವರ ವೈಯಕ್ತಿಕ ಅಭಿಪ್ರಾಯವಾ ಎಂಬ ಪ್ರಶ್ನೆ ಎದ್ದಿದೆ. ಗುಲಾಂ ಅವರ ಹೇಳಿಕೆಗೆ ಕಾಂಗ್ರೆಸ್ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಎಲ್ಲ ತ್ಯಾಗಕ್ಕೂ ಸಿದ್ಧವಾಗಿದೆಯೆ ಎಂಬ ಪ್ರಶ್ನೆಯೂ ಎದ್ದಿದೆ.

ಕಾಂಗ್ರೆಸ್ ಹಲವು 2014 ರ ಲೋಕಸಭೆ ಚುನಾವಣೆಯಿಂದಲೂ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತ ಬಂದಿದೆ. ಆದರೆ ಫಲಿತಾಂಶ ಹತ್ತಿರವಾಗುತ್ತಿರುವಾಗ ಕಾಂಗ್ರೆಸ್ ನ ನಿಷ್ಠಾವಂತ ನಾಯಕರ ಬಾಯಲ್ಲಿ ಇಂಥ ಹೇಳಿಕೆ ಹೊರಬಂದಿದ್ದು, ಅಚ್ಚರಿ ಸೃಷ್ಟಿಸಿದೆ.

ಪ್ರಧಾನಿ ಹುದ್ದೆ ಬೇಕಂತಿಲ್ಲ!

ಪ್ರಧಾನಿ ಹುದ್ದೆ ಬೇಕಂತಿಲ್ಲ!

"ನಾವು ಈಗಾಗಲೇ ನಮ್ಮ ನಿರ್ಧಾರವನ್ನು ಹೇಳಿದ್ದೇವೆ. ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಆದ್ಯ ಉದ್ದೇಶ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಧಾನಿ ಹುದ್ದೆಯೂ ನಮಗೆ ಬೇಕೆಂದಿಲ್ಲ. ಈ ಬಗ್ಗೆ ನಾವು ನಂತರ ನಿರ್ಧರಿಸುತ್ತೇವೆ" ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ

ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ

ಗಲಾಂ ನಬಿ ಆಜಾದ್ ಅವರು ಈ ಹೇಳಿಕೆಯನ್ನು ನೀದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ. "ವಿಪಕ್ಷಗಳಿಗೆ ಧೈರ್ಯವಿದ್ದರೆ ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿ" ಎಂದು ರಾಜನಾಥ್ ಸಿಂಗ್ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಜಾದ್, ಈ ಹೇಳಿಕೆ ನೀಡಿದ್ದರು.

ಮಮತಾ ಓಲೈಕೆಯ ಯತ್ನ?

ಮಮತಾ ಓಲೈಕೆಯ ಯತ್ನ?

ಇಂಥ ಹೇಳಿಕೆಯನ್ನು ನೀಡುವ ಮೂಲಕ ಕಾಮಗ್ರೆಸ್ ಮಮತಾ ಬ್ಯಾನರ್ಜಿ ಅವರನ್ನು ಓಲೈಸುವ ಪ್ರಯತ್ನ ಮಾಡಿದೆಯೆ? ಈಗಾಗಲೇ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಬಿಎಸ್ಪಿಯ ಮಾಯಾವತಿ ಇಬ್ಬರು ಪ್ರಧಾನಿ ಹುದ್ದೆಯ ರೇಸ್ ನಲ್ಲಿದ್ದಾರೆ. ಅವರನ್ನು ಮಹಾಘಟಬಂಧನಕ್ಕೆ ಸೆಳೆಯುವ ಸಲುವಾಗಿ ಕಾಂಗ್ರೆಸ್ ಇಂಥ ಹೇಳಿಕೆ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ! ಆದರೆ ರಾಹುಲ್ ಗಾಂಧಿ ಅವರ ಕತೆ ಏನು?!

ಪ್ರಧಾನಿ ಹೆಸರು ಮೇ 21 ರಂದು ಘೋಷಣೆ?

ಪ್ರಧಾನಿ ಹೆಸರು ಮೇ 21 ರಂದು ಘೋಷಣೆ?

ಲೋಕಸಭೆ ಚುನಾವಣೆಯ ಎಲ್ಲಾ ಹಂತಗಳೂ ಮೇ 19 ರಂದು ಮುಕ್ತಾಯವಾಗಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಫಲಿತಾಂಶಕ್ಕೂ ಮುನ್ನ ಅಂದರೆ ಮೇ 21 ರಂದು ಎನ್ ಡಿಎಯೇತರ ವಿಪಕ್ಷಗಳೆಲ್ಲವೂ ಸೇರಿ ನವದೆಹಲಿಯಲ್ಲಿ ಸಭೆ ಸೇರಲಿವೆ. ಈ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಹೇಳಿದಗ್ದು, ಕೊನೆಯ ಕ್ಷಣದ ಬದಲಾವಣೆಯನ್ನು ಅಲ್ಲಗಳೆಯುವಂತಿಲ್ಲ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+