ಬಿಹಾರ: 5000 ಮತ ವ್ಯತ್ಯಾಸವಾದರೆ 123 ಅಭ್ಯರ್ಥಿಗಳ ಭವಿಷ್ಯ ಬದಲು!

ಪಾಟ್ನಾ, ನವೆಂಬರ್.10: ಬಿಹಾರದ 243 ವಿಧಾನಸಭಾ ಚುನಾವಣಾ ಫಲಿತಾಂಶ ಸಾಕಷ್ಟು ರಣರೋಚಕವಾಗಿದೆ. ಒಂದು ಕಡೆಯಲ್ಲಿ ಮತಎಣಿಕೆ ಕಾರ್ಯವು ವಿಳಂಬವಾಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಅಭ್ಯರ್ಥಿಗಳ ನಡುವೆ ಮತಗಳ ಅಂತರ ಸಾಕಷ್ಟು ಕದನ ಕುತೂಹಲವನ್ನು ಕೆರಳಿಸುವಂತಿದೆ.

Recommended Video

      ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

      ಮಧ್ಯಾಹ್ನ 2 ಗಂಟೆಗೆ ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ, ಮಹಾಘಟಬಂಧನ್ ಮೈತ್ರಿಕೂಟದ ಎದುರಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮುನ್ನಡೆ ಸಾಧಿಸಿದೆ. ಬಿಹಾರದ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಮತಗಳ ಅಂತರ ತೀರಾ ಕಡಿಮೆಯಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಹಾಗೂ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಅದಲು ಬದಲು ಆಗುವಂತಿದೆ.

      ಬಿಹಾರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಕೇವಲ 200 ಮತಗಳ ಅಂತರವಿದೆ. 49 ಕ್ಷೇತ್ರಗಳಲ್ಲಿ ಪರಸ್ಪರ ಅಭ್ಯರ್ಥಿಗಳ ನಡುವೆ ಕೇವಲ 1000 ಮತಗಳ ಅಂತರವಿದೆ. 23 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ 500ಕ್ಕೂ ಕಡಿಮೆ ಮತಗಳ ಅಂತರ ಕಂಡು ಬಂದಿದೆ. 80 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಕೇವಲ 2000 ಮತಗಳ ಅಂತರವಿದೆ. 123 ಕಡೆಗಳಲ್ಲಿ ಅಭ್ಯರ್ಥಿಗಳ ನಡುವೆ 3000 ಹಾಗೂ 166 ಕ್ಷೇತ್ರಗಳಲ್ಲಿ ಮತಗಳ ಅಂತರ ಕೇವಲ 5000 ಇದೆ ಎಂದು ಬಿಹಾರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

      Bihar Election Results 2020: 3000 Vote Difference In Between 123 constituency Candidates

      ಬಿಹಾರ ಚುನಾವಣಾ ಫಲಿತಾಂಶ ವಿಳಂಬ:

      ಕೊವಿಡ್-19 ಶಿಷ್ಟಾಚಾರ ಪಾಲನೆ ಮಾಡುವ ಉದ್ದೇಶದಿಂದ ಒಂದು ಮತಗಟ್ಟೆಯಲ್ಲಿ ಕೇವಲ 1000 ದಿಂದ 1600 ಮತದಾರರಿಗೆ ಮಾತ್ರ ಹಕ್ಕು ಚಲಾಯಿಸುವುದಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆ ಮತಗಟ್ಟೆ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಮತಗಳ ಕ್ರೂಢೀಕರಿಸುವ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಬಿಹಾರದಲ್ಲಿ 4.10 ಕೋಟಿ ಮತಗಳ ಪೈಕಿ ಈವರೆಗೂ 92 ಲಕ್ಷ ಮತಗಳನ್ನು ಮಾತ್ರ ಎಣಿಕೆ ಮಾಡಲಾಗಿದೆ. ಈ ಬಾರಿ 35 ಸುತ್ತುಗಳಲ್ಲಿ ಮತಎಣಿಕೆ ನಡೆಸಲಾಗುತ್ತಿದ್ದು, ಇನ್ನೂ 20 ರಿಂದ 25 ಸುತ್ತುಗಳ ಮತಎಣಿಕೆ ಕಾರ್ಯ ನಡೆಯಬೇಕಿದೆ ಎಂದು ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ಹೆಚ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+