ಮಂತ್ರವಾದಿಯ ಮಾತು ಕೇಳಿ ಮಗನನ್ನೇ ಕೊಂದ ತಾಯಿ!
ನವದೆಹಲಿ, ಏಪ್ರಿಲ್ 21: ಮಹಿಳೆಯೊಬ್ಬರು ತಮ್ಮ ಎಂಟು ವರ್ಷದ ಮಗುವನ್ನು ಕೊಂದು, ತಾವು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನವದೆಹಲಿಯ ಅಮನ್ ವಿಹಾರ್ ನಲ್ಲಿ ನಡೆದಿದೆ.
ಕೆಲವು ಮೂಲಗಳ ಪ್ರಕಾರ ಮಹಿಳೆ ಒಬ್ಬ ಮಂತ್ರವಾದಿಯನ್ನು ಪದೇ ಪದೇ ಭೇಟಿಯಾಗುತ್ತಿದ್ದರು. ಅವರ ಸಲಹೆಯ ಮೇರೆಗೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಗುವಿನ ಕತ್ತನ್ನು ಚಾಕುವಿನಿಂದ ಸೀಳಿ ಸಾಯಿಸಿದ ಮಹಿಳೆ, ತಾನೂ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಅದೇ ಸಮಯಕ್ಕೆ ಮನೆಗೆ ಬಂದ ಪತಿಗೆ ಪತ್ನಿ ಮತ್ತು ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಗು ಅಷ್ಟರಲ್ಲಾಗಲೇ ಅಸುನೀಗಿದೆ ಎಂದು ವೈದ್ಯರು ಘೋಷಿಸಿದ್ದರು.

ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆಗೆ ಚಿಕಿತಸೆ ನೀಡಲಾಗುತ್ತಿದೆ. ಆಕೆಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications