ದೆಹಲಿ ಝೂನಲ್ಲಿ ಶಾಲಾಬಾಲಕನನ್ನು ಕೊಂದ ಬಿಳಿಹುಲಿ

ನವದೆಹಲಿ, ಸೆ. 23 : ಮೃಗಾಲಯಕ್ಕೆ ಬಂದಿದ್ದ 17 ವರ್ಷದ ಹನ್ನೆರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಬಿಳಿ ಹುಲಿ ಕೊಂದು ಹಾಕಿದ ದುರ್ಘಟನೆ ಮಂಗಳವಾರ ಮಧ್ಯಾಹ್ನ ನವದೆಹಲಿ ಮೃಗಾಲಯದಲ್ಲಿ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಲಿ ಘರ್ಜನೆ ಕೇಳುತ್ತಿದ್ದಂತೆ ವಿದ್ಯಾರ್ಥಿ ಹುಲಿಯೆಡೆಗೆ ಓಡೋಡಿ ಬಂದಿದ್ದಾನೆ. ಅದೇ ಧಾವಂತದಲ್ಲಿ ವಿದ್ಯಾರ್ಥಿ ಆಯತಪ್ಪಿ ಹುಲಿಯಿದ್ದ ಜಾಗಕ್ಕೆ ಬಿದ್ದಿದ್ದಾನೆ. ಆತನ ಮೇಲೆ ದಾಳಿ ನಡೆಸಿದ ಹುಲಿ ಆತನನ್ನು ಕೊಂದುಹಾಕಿದೆ. ಸುತ್ತಲಿದ್ದವರು ಕಲ್ಲು ಎಸೆದು ಹುಲಿಯನ್ನು ಓಡಿಸಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.

White Tiger kills school boy in Delhi zoo

ಇನ್ನೊಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆ ಪ್ರಕಾರ, ಕಬ್ಬಿಣದ ಅಡ್ಡತಡೆ ತೀರ ಕೆಳಮಟ್ಟದಲ್ಲಿದ್ದರಿಂದ ಹುಲಿಯೇ ವಿದ್ಯಾರ್ಥಿಯನ್ನು ಎಳೆದು ಕೊಂದುಹಾಕಿತು. ಹತ್ತು ಹದಿನೈದು ನಿಮಿಷ ಆತನನ್ನು ಎಳೆದಾಡಿ ಕೊಂದಿತು. ಈ ಸಂದರ್ಭದಲ್ಲಿ ಮೃಗಾಲಯದ ಯಾವ ಸಿಬ್ಬಂದಿಯೂ ಅಲ್ಲಿರಲಿಲ್ಲ ಎಂದು ತಿಳಿದುಬಂದಿದೆ. [ಮೈಸೂರು ಮೃಗಾಲಯದಲ್ಲಿ ಅಮೃತ, ಶಿವ]

ವಿದ್ಯಾರ್ಥಿಗಳು ಹುಲಿಯೆಡೆಗೆ ಕಲ್ಲು, ಕಟ್ಟಿಗೆ ತೂರುತ್ತಿದ್ದರಿಂದ ಕೆರಳಿದ ಹುಲಿ ವಿದ್ಯಾರ್ಥಿ ಮೇಲೆ ದಾಳಿ ನಡೆಸಿತು. ಅಲ್ಲಿದ್ದವರು ಗದ್ದಲ ಎಬ್ಬಿಸಿದ್ದರಿಂದ ಸ್ವಲ್ಪ ದೂರ ಸರಿದಂತೆ ಮಾಡಿದರೂ, ಮತ್ತೆ ತಿರುಗಿ ಆತನ ಮೇಲೆರಗಿ ಕತ್ತಿಗೆ ಬಾಯಿಹಾಕಿ ಕಚ್ಚಿ ಎಳೆದೊಯ್ದಿತು. ಆತ ವಿಲವಿಲ ಒದ್ದಾಡುತ್ತಿದ್ದುದನ್ನು ನೋಡಲಾಗುತ್ತಿರಲಿಲ್ಲ ಎಂದು ಮತ್ತೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಂಗಾಳ ಹುಲಿ ಎಂದೂ ಕರೆಯಲಾಗುವ ಬಿಳಿ ಹುಲಿಗಳು ಇಂದು ಝೂನಲ್ಲಿ ಮಾತ್ರ ಕಾಣಸಿಗುತ್ತಿವೆ. ಕಳೆದ 100 ವರ್ಷಗಳಲ್ಲಿ ಕೇವಲ 12 ಬಿಳಿ ಹುಲಿಗಳು ಮಾತ್ರ ಕಾಡಿನಲ್ಲಿ ಕಾಣಿಸಿಕೊಂಡಿವೆ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿಯೂ ಒಂದು ಬಿಳಿ ಹುಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+