ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮೇಲೆ ಮಹಿಳೆಯಿಂದಲೇ ಅನೈಸರ್ಗಿಕ ಅತ್ಯಾಚಾರ, ಬಂಧನ

By Yashodhar Patkut
|
Google Oneindia Kannada News

ನವದೆಹಲಿ, ಫೆಬ್ರವರಿ 5 : ಸಲಿಂಗಕಾಮಕ್ಕೆ ಮಾನ್ಯತೆ ನೀಡಿ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಬಳಿಕ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅನ್ನು ದುರ್ಬಳಸಿಕೊಂಡು 'ಅತ್ಯಾಚಾರ' ಎಸಗಿದ 19 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೆ ಕಾರಣವೇನೆಂದರೆ, ಬಂಧಿತ ಮಹಿಳೆ ಪುರುಷರ ಕೃತಕ ಶಿಶ್ನವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಸಂತ್ರಸ್ತ ಮಹಿಳೆಯ ಮೇಲೆ ಬಲವಂತವಾಗಿ ಗುದ ಲೈಂಗಿಕ ಕ್ರಿಯೆ ನಡೆಸಿದ್ದಳು. ಸೆಕ್ಷನ್ 377ರ ಪ್ರಕಾರ, ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಆರೋಪಿತೆಯನ್ನು ಕರ್ಕರ್ಡೋಮಾ ಕೋರ್ಟಿಗೆ ಹಾಜರು ಪಡಿಸಿ, ವಿಚಾರಣೆಗಾಗಿ ಒಂದು ದಿನದ ಪೊಲೀಸ್ ಕಸ್ಟಡಿ ನೀಡಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಯನ್ನು ಈಗ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

Unnatural intercourse with woman, another woman arrested

ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ, ವಿಚಾರಣೆಯ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿತ ಮಹಿಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಮೇಲೆ ಈ ರೀತಿಯ ಅತ್ಯಾಚಾರ ನಡೆಸಲು ಸಾಧ್ಯವೇ ಎಂಬ ಕಾರಣ ನೀಡಿ, ಸಂತ್ರಸ್ತ ಮಹಿಳೆಯ ದೂರನ್ನು ಪೊಲೀಸರು ದಾಖಲಿಸಿಕೊಂಡಿರಲಿಲ್ಲ. ಸಹಮತದ ಸಲಿಂಗಕಾಮಕ್ಕೆ ಕಾನೂನಿನ ಅಡೆತಡೆ ಇಲ್ಲದಿದ್ದರೂ, ಸಹಮತವಿಲ್ಲದ ಅನೈಸರ್ಗಿಕ ಲೈಂಗಿಕ ಕ್ರಿಯೆ ಅಪರಾಧವಾಗುತ್ತದೆ.

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು? ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಈಶಾನ್ಯ ಭಾರತದಿಂದ ಕೆಲಸಕ್ಕೆಂದು ದೆಹಲಿಗೆ ಬಂದಿದ್ದ ಯುವತಿಯನ್ನು ಆರೋಪಿತ ಮಹಿಳೆ ಎರಡು ತಿಂಗಳುಗಳ ಕಾಲ ತನ್ನ ಬಳಿಯೇ ಬಲವಂತವಾಗಿ ಇರಿಸಿಕೊಂಡಿದ್ದಳು ಮತ್ತು ದೈಹಿಕವಾಗಿ ಹಾಗು ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಳು. ಆದರೆ, ಈ ಬಗ್ಗೆ ದೂರು ನೀಡಿದ್ದರೂ ಸೀಮಾಪುರಿ ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದ್ದರು.

ಗುರುಗ್ರಾಮದಲ್ಲಿ ತಾನಿದ್ದ ಕೆಲಸ ಬಿಟ್ಟು ವ್ಯಾಪಾರದಲ್ಲಿ ತೊಡಗಲು ಸಂತ್ರಸ್ತ ಮಹಿಳೆ ನಿರ್ಧರಿಸಿದ್ದಳು. ಅದಕ್ಕೆ ಉದ್ಯೋಗ ಸಂಗಾತಿಗಳನ್ನು ಹುಡುಕಬೇಕಾಗಿತ್ತು. ಆಗ ಭೇಟಿಯಾದವರೇ ಎಚ್ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಮತ್ತು ಮತ್ತೊಬ್ಬ ರಾಹುಲ್. ಇಬ್ಬರೂ ಮಹಿಳೆಯನ್ನು ಪುಸಲಾಯಿಸಿ ಅಪಾರ್ಟ್ಮೆಂಟಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು ಮತ್ತು ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದರು. ಅದೇ ಅಪಾರ್ಟ್ಮೆಂಟ್ ನಲ್ಲಿ ಆರೋಪಿತ ಮಹಿಳೆಯೂ ಇದ್ದಳು.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

ಮೂವರೂ ಸೇರಿ ಆಕೆಯ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ, ಮಹಿಳೆಯ ಮೂಲಕ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ಇತರ ವಿಟಪುರುಷರಿಗೂ ಅನುಕೂಲವಾಗುವಂತೆ ಸಂತ್ರಸ್ತ ಮಹಿಳೆಯನ್ನು ಅಣಿಗೊಳಿಸಲಾಗುತ್ತಿತ್ತು. ಇದನ್ನು ಮಾಡಲು ಆರೋಪಿ ಮಹಿಳೆಗೆ ಅತೀವ ಆನಂದವಾಗುತ್ತಿತ್ತು. ಈ ದೌರ್ಜನ್ಯ ಎಸಗಿದ್ದಕ್ಕಾಗಿ ಆಕೆಗೆ ಶಿಕ್ಷೆ ಆಗಲೇಬೇಕು ಎಂದು ಸಂತ್ರಸ್ತೆ ಕೇಳಿಕೊಂಡಿದ್ದಾಳೆ. ಕಡೆಗೆ, ಹೇಮಂತ್ ಶರ್ಮಾ ಎಂಬ ಸಾಮಾಜಿಕ ಕಾರ್ಯಕರ್ತನ ಮೂಲಕ ಆಕೆ ಪಾರಾಗಿದ್ದಾಳೆ.

English summary
A 19-year-old woman has been arrested for 'raping' anther woman unnaturally for several months in captive. The accused woman has been arrested under section 377 of Indian Penal Code. This is the first such case in this year after Supreme Court decriminalised crime under 377.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X