ಅನುಮಾನ ಹುಟ್ಟಿಸಿದ ಇರಾನ್‌ಮೂಲದ ಹಡಗು
ನವದೆಹಲಿ, ಜು, 06 : ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಮೀನುಗಾರರು ಹಾಗೂ ಹಡಗನ್ನು ಭಾನುವಾರ ಕೇರಳದ ಅಲೆಪ್ಪಿ ಎಂಬಲ್ಲಿ ಕರಾವಳಿ ಕಾವಲುಪಡೆ ಮತ್ತು ಪೊಲೀಸರು ಸೆರೆಹಿಡಿದಿದ್ದಾರೆ.
ಮೀನುಗಾರರು ಹಡಗಿನಲ್ಲಿ ಇರಾನ್‌ನ ಕಲಾತ್‌ನಿಂದ ಮೇ 25ರಂದು ತನ್ನ ಪ್ರಯಾಣವನ್ನು ಆರಂಭಿಸಿದ್ದರು ಇವರನ್ನು ಸೆರೆ ಹಿಡಿದು ತನಿಖೆಗೆ ಒಳಪಡಿಸಿದಾಗ ಗುರುತಿನ ಚೀಟಿ ಮತ್ತು ಸ್ಯಾಟಲೈಟ್ ಫೋನ್ ದೊರೆತಿದ್ದು, ಹಡಗು ಇರಾನ್ ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ[ಪಾಕ್ ಬಲೆಯಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರು ಮನೆಗೆ]

ಗುಪ್ತಚಾರ ಇಲಾಖೆಯಿಂದ ದೊರೆತ ಮಾಹಿತಿಗಳಿಗೂ ಹಾಗೂ ಹಡಗಿನಲ್ಲಿದ್ದವರ ವಿವರಗಳು ತಾಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರಿಗೆ ಕೆಲವು ಅನುಮಾನಗಳು ಮೂಡುತ್ತಿವೆ. ಹಾಗೆಯೇ ಹಡಗಿನ ಮೂಲಕ ಭಾರಿ ಪ್ರಮಾಣದ ಯಾವುದೋ ವಸ್ತುವನ್ನು ಕಳ್ಳಸಾಗಾಣಿಕೆ ನಡೆಸಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.
ತನಿಖೆ ಕೈಗೊಳ್ಳಬಹುದೆಂದು ಗೊತ್ತಾದ ಇಬ್ಬರು ಪಾಕಿಸ್ತಾನಿ ಮೂಲದ ಮೀನುಗಾರರು ಪ್ರಯಾಣದ ನಡುವೆಯೇ ಪರಾರಿಯಾಗಿದ್ದಾರೆ. ಆದರೆ ಇವರು ನಾಪತ್ತೆಯಾಗಿರುವುದರ ಕುರಿತಾಗಿನ ನಿಖರವಾದ ಮಾಹಿತಿ ಇಲ್ಲ ಹಾಗೂ ಹಡಗಿನಲ್ಲಿ ಮಾರಕ ಶಸ್ತ್ರಾಸ್ತ್ರ, ಮಾದಕ ವಸ್ತು ಹಾಗೂ ಸ್ಪೋಟಕಗಳಿರಲಿಲ್ಲ ಎಂಬುದಾಗಿ ತಿಳಿದು ಬಂದಿದೆ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications