ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 22: ವಿವಾದಿತ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಇಂದು(ಆಗಸ್ಟ್ 22) ನೀಡಿದ ಐತಿಹಾಸಿಕ ತೀರ್ಪಿಗೆ ಹಲವು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ಜೆ.ಎಸ್.ಖೇಹರ್ ನೇತ್ರತ್ವದ ಪಂಚ ಸದಸ್ಯ ಪೀಠ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದಿದೆ. ಆರು ತಿಂಗಳ ಕಾಲ ತ್ರಿವಳಿ ತಲಾಖ್ ಪದ್ಧತಿಗೆ ತಡೆ ನೀಡಲಾಗಿದ್ದು, ಆರು ತಿಂಗಳೊಳಗೆಈ ಸಂಬಂಧ ಕಾನೂನನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ತಿಳಿಸಿದೆ.

ತ್ರಿವಳಿ ತಲಾಖ್ ರದ್ದುಗೊಳಿಸಿ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

ಎಷ್ಟೋ ಇಸ್ಲಾಂ ದೇಶಗಳಲ್ಲೇ ತಲಾಖ್ ನಿಷೇಧಿಸಲಾಗಿದ್ದರೂ, ಭಾರತದಲ್ಲಿ ಅದರ ಆಚರಣೆ ಏಕೆ ಎಂದು ಸುಪ್ರೀಂ ಪ್ರಶ್ನಿಸಿದೆ. ಈ ಮೂಲಕ ತ್ರಿವಳಿ ತಲಾಖ್ ಎಂಬ ಅಸಂಬದ್ಧ ಪದ್ಧತಿಗೆ ಬ್ರೇಕ್ ಬಿದ್ದಂತಾಗಿದೆ.

ಹೊಸ ಯುಗದ ಆರಂಭ

ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಮುಸ್ಲಿಂ ಮಹಿಳೆಯರ ಸ್ವಾಭಿಮಾನ ಮತ್ತು ಸಮಾನತೆಯ ಬದುಕಿನ ಹೊಸ ಯುಗಕ್ಕೆ ನಾಂದಿಹಾಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ತಸ್ಲಿಮಾ ನಸ್ರಿನ್

ಕುರಾನ್ (2:229) ತ್ರಿವಳಿ ತಲಾಖ್ ಬಗ್ಗೆ ಹೇಳುತ್ತದೆ. ಕುರಾನ್(4:34) ಪತ್ನಿಗೆ ಹೊಡೆಯುವುದರ ಬಗ್ಗೆಯೂ ಹೇಳುತ್ತದೆ. ಈ 1400 ವರ್ಷ ಹಳೆಯ ಕುರಾನ್ ಕಾನೂನನ್ನು ನಿಷೇಧಿಸಿ. ಸಮಾನತೆಯ ಆಧಾರದ ಮೇಲೆ ಹೊಸ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಪ್ರಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

ತೀರ್ಪಿಗೆ ಸ್ವಾಗತ!

ಸರ್ವೋಚ್ಚ ನ್ಯಾಯಾಲಯ ಇಂದು ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ತ್ರಿವಳಿ ತಲಾಖ್ ನಂಥ ಕ್ರೂರ ಪದ್ಧತಿಗೆ ನಾಗರಿಕ ಸಮಾಜದಲ್ಲಿ ಯಾವತ್ತಿಗೂ ಜಾಗವಿರಬಾರದು ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಸತ್ಯಮೇವ ಜಯತೆ!

ಸತ್ಯಮೇವ ಜಯತೆ! ಮುಸ್ಲಿಂ ಮಹಿಳೆಯರ ಧೈರ್ಯ, ನರೇಂದ್ರ ಮೋದಿ ಸರ್ಕಾರದ ಕಳಕಳಿ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಯುತ ತೀರ್ಪು ಇಂದು ತ್ರಿವಳಿ ತಲಾಖ್ ನಿಂದ ಮುಕ್ತಿ ನೀಡಿದೆ ಎಂದು ಯೋಗ ಗುರು ಬಾಬಾ ರಾಮದೇವ ಟ್ವೀಟ್ ಮಾಡಿದ್ದಾರೆ.

ಐತಿಹಾಸಿಕ ಮೈಲಿಗಲ್ಲು

ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಭಾರತೀಯ ಮಹಿಳಾ ಹಕ್ಕು ಹೋರಾಟದ ಐತಿಹಾಸಿಕ ಮೈಲಿಗಲ್ಲು ಎಂದು ತುಫೈಲ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Triple talaq is unconstitutional,' supreme court gives a historic verdict today. Here are the twitter statements who happily welcomed supreme courts verdict.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ