• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈವರೆಗೂ 67 ಬಿಎಸ್‌ಎಫ್ ಯೋಧರಿಗೆ ಕೊರೊನಾ ಸೋಂಕು

|

ದೆಹಲಿ, ಮೇ 5: ಗಡಿಕಾಯೋ ಯೋಧರಿಗೂ ಕೊರೊನಾ ಸೋಂಕು ತಗುಲಿದ್ದು, ಈವರೆಗೂ 67 ಜನ ಬಿ ಎಸ್ ಎಫ್ ಯೋಧರಿಗೆ ಮಹಾಮಾರಿ ವಕ್ಕರಿಸಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಾಹಿತಿ ನೀಡಿದೆ.

   ಕೊರೊನಾ,ಮದ್ಯ ಎರಡೂ ನರಕ ಬೆಡ್ವೇ ಬೇಡ ಮದ್ಯ ಮಾರಾಟ ಅಂದ್ರು ವಾಟಾಳ್ ನಾಗರಾಜ್ | Oneindia Kannada

   ಮೇ 4 ರಂದು ತ್ರಿಪುರದಲ್ಲಿ 13 ಜನ ಬಿ ಎಸ್ ಎಫ್ ಯೋಧರಿಗೆ ಕೊವಿಡ್ ಸೋಂಕು ದಢೃವಾಗಿದೆ. ಇದರಲ್ಲಿ 10 ಜನರು ಯೋಧರು ಮತ್ತು ಓರ್ವನ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.

   ಯೂರೋಪ್‌ನಲ್ಲಿ ಕೊರೊನಾ ರಣಕೇಕೆ, ಯುಕೆಯಲ್ಲಿ ಅತಿ ಹೆಚ್ಚು ಸಾವು

   ದೆಹಲಿಯಲ್ಲಿ ಹೆಚ್ಚು ಬಿ ಎಸ್ ಎಫ್ ಯೋಧರಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಇದೆ. ದೆಹಲಿಯ ಜಾಮಾ ಮಸೀದಿ ಮತ್ತು ಚಾಂದಿನಿ ಮಹಲ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ 126ನೇ ಬಟಾಲಿಯನ್ ಗೆ ಸೇರಿದ 25 ಯೋಧರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ದೆಹಲಿಯಲ್ಲಿ ಒಟ್ಟು 41 ಜನ ಬಿಎಸ್‌ಎಫ್ ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

   ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 46,433ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಟ್ಟು ದೇಶದಲ್ಲಿ 1568 ಜನರು ಇದುವರೆಗೂ ಮೃತಪಟ್ಟಿದ್ದಾರೆ. 29,685 ಕೇಸ್‌ಗಳು ಈಗ ಸಕ್ರಿಯವಾಗಿದೆ.

   English summary
   Till 4th May, a total of 67 BSF jawans have tested #COVID19 positive.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X