Get Updates
Get notified of breaking news, exclusive insights, and must-see stories!

ಮುಂಗಾರು ಅಧಿವೇಶನ; ಮೋದಿ ಸರ್ಕಾರದ ಮುಂದೆ ಟಿಎಂಸಿ ಇಟ್ಟ 7 ಪ್ರಶ್ನೆಗಳು

ನವದೆಹಲಿ, ಆಗಸ್ಟ್‌ 12: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಉದ್ದೇಶಪೂರ್ವಕವಾಗಿ ಕಲಾಪವನ್ನು ತಪ್ಪಿಸಲಾಗಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಗುರುವಾರ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಸಂಸತ್ತನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದೆ ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದೊಂದಿಗೆ ಹೋಲಿಕೆ ಮಾಡಿ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್‌ಗೆ ಕೂಡ ಸಂಸತ್ತಿನ ವ್ಯವಸ್ಥೆಗೆ ಒಪ್ಪಿತವಾಗಿ ನಡೆದುಕೊಳ್ಳುತ್ತಿರಲಿಲ್ಲ. ಆದರೆ ಅವರು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಎಂದು ಹೇಳಿದ್ದಾರೆ.

ವಿಪಕ್ಷಗಳ ಪ್ರಶ್ನೆಗಳಿಂದ ತಪ್ಪಿಸಿಕೊಂಡು ಮೋದಿ ಸರ್ಕಾರ ಓಡಿಹೋಗುತ್ತಿದೆ. ಪೆಗಾಸಸ್, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

TMC Targets Modi Govt Over Parliament Ruckus

ಸದನದಲ್ಲಿ ಗದ್ದಲ ಉಂಟು ಮಾಡಿದ ಕಾರಣವಾಗಿ ಎರಡೂ ಸದನಗಳಲ್ಲಿ ಮುಂಗಾರು ಅಧಿವೇಶನವನ್ನು ಅವಧಿಗೆ ಮುನ್ನವೇ ಮೊಟಕುಗೊಳಿಸಿದ್ದು, ಕೇಂದ್ರದ ಈ ನಡೆಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಇದಕ್ಕೂ ಮುನ್ನ ಸಂಸತ್ತಿನಲ್ಲಿ ನಡೆದ ಗದ್ದಲದ ಸಂಬಂಧ ಕಾಂಗ್ರೆಸ್, ಶಿವಸೇನೆ ಹಾಗೂ ಟಿಎಂಸಿ ಉಪಾಧ್ಯಕ್ಷ, ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದರು.

ಕೇಂದ್ರ ಸರ್ಕಾರ ದೇಶದ ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಪ್ರತಿಪಕ್ಷಗಳು ದೂರಿವೆ. ಬಹುಬಾರಿ ಬೇಡಿಕೆ ಇಟ್ಟರೂ ಕೇಂದ್ರ ಈ ಚರ್ಚೆಗಳನ್ನು ತಪ್ಪಿಸಿದೆ ಎಂದು ಆರೋಪಿಸಿವೆ. ಜೊತೆಗೆ ಟಿಎಂಸಿ ಮೋದಿ ಸರ್ಕಾರಕ್ಕೆ ಈ ಪ್ರಶ್ನೆಗಳನ್ನು ಮುಂದಿಟ್ಟಿವೆ.

1. ಮನಮೋಹನ್ ಸಿಂಗ್ ಹಾಗೂ ಎಚ್‌ಡಿ ದೇವೇಗೌಡ ಇಬ್ಬರು ಮಾಜಿ ಪ್ರಧಾನಿಗಳು ಸಂಸತ್ತಿನಲ್ಲಿ ಹಾಜರಿದ್ದಾರೆ. ಪ್ರಧಾನಿ ಹಾಗೂ ಗೃಹಮಂತ್ರಿ ಎಲ್ಲಿದ್ದಾರೆ? ಸಂಸತ್ತಿನಲ್ಲಿ ಅವರು ಬಂದು ಏಕೆ ನಮ್ಮ ಮಾತುಗಳನ್ನು ಕೇಳಿಲ್ಲ?

TMC Targets Modi Govt Over Parliament Ruckus

2. ದೇಶದ ಆಂತರಿಕ ಭದ್ರತೆ ಕುರಿತು ಪ್ರತಿಪಕ್ಷಗಳು ಚರ್ಚೆಗೆ ಮುಂದಾಗಿದ್ದವು. ಆದರೆ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ರೈತರ ಪ್ರತಿಭಟನೆ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟಿಲ್ಲ. ಏಕೆ?

3. ಯಾವುದೇ ಚರ್ಚೆ ಇಲ್ಲದೇ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ 39 ಮಸೂದೆಗಳನ್ನು ಮಂಡನೆ ಮಾಡಲಾಗಿದೆ. ಪ್ರಜಾಪ್ರಭುತ್ವ ನಡೆಯಬೇಕಾದ ರೀತಿ ಇದಲ್ಲ. ಯಾವ ಆಧಾರದ ಮೇಲೆ ವಿಪಕ್ಷಗಳು ಸಂಸತ್ತಿನಲ್ಲಿ ಗದ್ದಲ ನಡೆಸುತ್ತಿವೆ ಎಂದು ಹೇಳುತ್ತಿದ್ದೀರಿ?

4. 2014ರಲ್ಲಿ 60-70% ಮಸೂದೆಗಳನ್ನು ಸಂಸತ್ತಿನ ಸಮಿತಿಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಈಗ ಕೇವಲ 11% ಮಸೂದೆಗಳನ್ನು ಕಳುಹಿಸಲಾಗಿದೆ.

5. ಅತ್ಯಂತ ಮಹತ್ವದ ಮಸೂದೆಗಳನ್ನು ತುರ್ತು ಆಧಾರದ ಮೇಲೆ ಮಂಡನೆ ಮಾಡಲು ಸುಗ್ರೀವಾಜ್ಞೆಯನ್ನು ಬಳಸಲಾಗುತ್ತದೆ. ಸ್ವಾತಂತ್ರ್ಯಾನಂತರ ಮೊದಲ 30 ವರ್ಷಗಳಲ್ಲಿ ಪ್ರತಿ 10 ಮಸೂದೆಗಳಿಗೆ ಕೇವಲ ಒಂದು ಸುಗ್ರೀವಾಜ್ಞೆ ಬಳಸಲಾಗುತ್ತಿತ್ತು. ಈಗ ಪ್ರತಿ 10 ಮಸೂದೆಗಳಿಗೆ ನಾಲ್ಕು ಸುಗ್ರೀವಾಜ್ಞೆ ಬಳಸಲಾಗುತ್ತಿದೆ. ಬಿಜೆಪಿ ತುರ್ತು ಶಾಸನವನ್ನು ಸಾಮಾನ್ಯ ಕಾನೂನು ಎಂಬಂತೆ ಪರಿಗಣಿಸುತ್ತಿದೆ.
6. ಪ್ರಧಾನಿ ಸಂಸತ್ತಿನ ಕಲಾಪಗಳನ್ನು ತಪ್ಪಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇದು ಗೂಂಡಾಗಿರಿಯಾಗಿದೆ.
7. ರಾಜ್ಯಸಭೆಯಲ್ಲಿ ತಮಗೆ ಭಾರೀ ಬಹುಮತವಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಎರಡು ವರ್ಷಗಳು ಕಳೆದಿವೆ. ರಾಜ್ಯಸಭೆಯ ಉಪ ಸಭಾಪತಿ ಎಲ್ಲಿದ್ದಾರೆ? ಯಾಕೆ ಇನ್ನೂ ಯಾರನ್ನೂ ನೇಮಿಸಿಲ್ಲ?

ಇವಿಷ್ಟು ಪ್ರಶ್ನೆಗಳನ್ನು ಬಿಜೆಪಿ ಸರ್ಕಾರದ ಮುಂದೆ ಟಿಎಂಸಿ ಇಟ್ಟಿದೆ.

ಈ ಮುನ್ನ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಮೊಟಕುಗೊಳಿಸಿರುವುದಕ್ಕೆ ಕಾಂಗ್ರೆಸ್ ಟೀಕಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ದನಿ ಎತ್ತಲು ವಿರೋಧ ಪಕ್ಷದ ಸದಸ್ಯರಿಗೆ ಅವಕಾಶವನ್ನೇ ಕೊಡದಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿತ್ತು.

ಬೆಲೆ ಏರಿಕೆ, ಇಂಧನ ದರ, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ವಿಷಯಗಳ ಕುರಿತು ಮಾತನಾಡಲು ಅಧಿವೇಶನ ಆರಂಭವಾದ ದಿನಗಿಂದಲೂ ವಿರೋಧ ಪಕ್ಷಗಳ ಸದಸ್ಯರು ಸಜ್ಜಾಗಿದ್ದರು. ಆದರೆ ಕೇಂದ್ರ ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಕಾಂಗ್ರೆಸ್ ದೂರಿತ್ತು. ಆಗಸ್ಟ್‌ 13ರವರೆಗೆ ಅಧಿವೇಶನ ನಡೆಸುವುದಾಗಿ ತಿಳಿಸಿ ಏಕಾಏಕಿ ಸದನ ನಡೆಸುವ ಅವಶ್ಯಕತೆ ಇಲ್ಲ ಎಂದರೆ ಏನೆಂದು ಪ್ರಶ್ನಿಸಿತ್ತು.

ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯಲು ಒಂದು ವಾರ ಬಾಕಿ ಇರುವಾಗ, ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರೆಕ್‌ ಒಬ್ರಿಯಾನ್‌, ಪ್ರಧಾನಿ ನರೇಂದ್ರ ಮೋದಿ ವಿಚಾರಣೆಗೆ ಅಧಿವೇಶನಕ್ಕೆ ಹಾಜರಾಗಬೇಕು ಮತ್ತು ಪೆಗಾಸಸ್ ಬೇಹುಗಾರಿಕೆ, ರೈತರ ಸಮಸ್ಯೆ ಮೊದಲಾದ ಪ್ರತಿಪಕ್ಷಗಳ ಬೇಡಿಕೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+