ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಡಿಎಸ್, ಟಿಸಿಎಸ್ ಕಡಿತದ ದರದಲ್ಲಿ ಶೇಕಡಾ 25ರಷ್ಟು ಇಳಿಕೆ

|
Google Oneindia Kannada News

ನವ ದೆಹಲಿ, ಮೇ 13: ಪ್ರಸ್ತುತ ಟಿಡಿಎಸ್ (Tax deducted at source) ಹಾಗೂ ಟಿಸಿಎಸ್ (Tax collected at source) ಕಡಿತದ ದರದಲ್ಲಿ ಶೇಕಡ 25ರಷ್ಟು ಇಳಿಕೆ ಮಾಡಲಾಗಿದೆ. ಮುಂದಿನ ವರ್ಷದ ಮಾರ್ಚ್‌ವರೆಗೆ ಈ ನಿಯಮ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Recommended Video

20 ಲಕ್ಷ ಕೋಟಿಯಲ್ಲಿ ಯಾರಿಗೆ ಎಷ್ಟು ಎಂದು ವಿವರಿಸಿದ ನಿರ್ಮಲ ಸೀತಾರಾಮನ್ | Nirmala Sitharaman

ಪ್ರಧಾನಿ ನರೇಂದ್ರ ಮೋದಿ ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇಂದು ಅದರ ವಿವರಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದರು.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?

''ಟಿಡಿಎಸ್ ಮತ್ತು ಟಿಸಿಎಸ್ ಹೊಸ ಕ್ರಮದಿಂದ ಸರ್ಕಾರಕ್ಕೆ 50,000 ಕೋಟಿ ರೂಪಾಯಿಗಳ ಹೊರೆಯಾಗಲಿದೆ'' ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.

TDS On Non Salaried Income Reduced By 25%

ಕ್ಯಾಂಟ್ರಾಕ್ಟ್ ಪೇಮೆಂಟ್, ವೃತ್ತಿಪರ ಶುಲ್ಕಗಳು, ಬಡ್ಡಿ, ಬಾಡಿಗೆ, ಬ್ರೋಕರೇಜ್, ದಲ್ಲಾಳಿ ಆದಾಯ ಮತ್ತು ಡಿವಿಡೆಂಡ್ ಟಿಡಿಎಸ್ ಕಡಿತಕ್ಕೆ ಸೇರಿಕೊಳ್ಳಲಿದೆ. ಈ ಕಡಿತವು ನಾಳೆಯಿಂದ ಜಾರಿಗೆ ಬರಲಿದ್ದು, 2020-21ರ ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಅನ್ವಯಿಸುತ್ತದೆ.

ಹಣಕಾಸು ಪ್ಯಾಕೇಜ್ ಮೊದಲ ಭಾಗವನ್ನು ಅನಾವರಣಗೊಳಿಸಿದ ನಿರ್ಮಲಾ ಸೀತಾರಾಮನ್, ನೌಕರರ ಕಡ್ಡಾಯ ಭವಿಷ್ಯ ನಿಧಿ ಕಡಿತವನ್ನು ಸರ್ಕಾರವು ಶೇಕಡಾ 12 ರಿಂದ 10 ಕ್ಕೆ ಇಳಿಸಿದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಭವಿಷ್ಯ ನಿಧಿ ಕಡಿತವು ಶೇಕಡಾ 12 ರಷ್ಟು ಮುಂದುವರೆಯಲಿದೆ.

ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?

2019-20ನೇ ಸಾಲಿನ ಎಲ್ಲಾ ಐಟಿ ರಿಟನ್ಸ್‌ ದಿನಾಂಕವನ್ನು 2020 ಜುಲೈ 31 ಮತ್ತು 2020 ಅಕ್ಟೋಬರ್ 31 ರಿಂದ 2020 ನವೆಂಬರ್ 30 ರವರೆಗೆ ವಿಸ್ತರಿಸಿದೆ. ಟ್ಯಾಕ್ಸ್ ಆಡಿಟ್ಸ್ ದಿನಾಂಕವನ್ನು ಸೆಪ್ಟೆಂಬರ್ 30, 2020 ರಿಂದ 31 ಅಕ್ಟೋಬರ್ 2020ಕ್ಕೆ ಮುಂದೂಡಿದೆ.

English summary
TDS (Tax deducted at source) on non-salaried income reduced by 25%, last date for returns extended finance minister Nirmala Sitharaman announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X