ಅರವಿಂದ್ ಕೇಜ್ರಿವಾಲ್ Talk To AK ಟ್ರೆಂಡಿಂಗ್

Posted By:
Subscribe to Oneindia Kannada

ನವದೆಹಲಿ, ಜುಲೈ 17: 'ಸಂಪೂರ್ಣ ಸ್ವರಾಜ್ಯ ನಮ್ಮ ಹಕ್ಕು, ನಾವು ಹೆದರಿ ಓಡಿ ಹೋಗುವುದಿಲ್ಲ, ಜೀವ ತೆಗೆದರೂ ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ, ಭ್ರಷ್ಟಾಚಾರದ ಜತೆ ರಾಜಿಯಾಗುವುದಿಲ್ಲ' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊದಲ ಸಂವಾದ 'Talk to AK' ಕಾರ್ಯಕ್ರಮದಲ್ಲಿ ಘೋಷಿಸಿದರು.

ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ(ಜುಲೈ 17)ದಂದು ಸಾರ್ವಜನಿಕರ ಜೊತೆ ನೇರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಸಂವಾದ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಆರಂಭಿಸಲಾಗಿದೆ. www.talktoak.com ಮೂಲಕ ಕೂಡಾ ಪ್ರಶ್ನೆ ಕೇಳಬಹುದು.

#TalkToAK: Delhi CM Arvind Kejriwal holds live interaction with public

ದೆಹಲಿ ಸರ್ಕಾರದ ವಿರುದ್ಧ ಮೋದಿ ಸರ್ಕಾರ ಷಡ್ಯಂತ್ರ ನಡೆಸಿದೆ. ದೇಶದ ಎಲ್ಲಾ ಮುಖ್ಯಮಂತ್ರಿಗಳನ್ನು ಬಿಟ್ಟು ನನ್ನ ಮೇಲೆ ಹದ್ದಿನ ಕಣ್ಣು ಇಟ್ಟು ಮೋದಿ ಸರ್ಕಾರ ಏನು ಸಾಧಿಸುತ್ತಿದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್ ಅವರ ಜತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಾಲಿವುಡ್ ಗಾಯಕ ವಿಶಾಲ್ ಡಡ್ಲಾನಿ ಅವರು ಸಂವಾದಲ್ಲಿ ಪಾಲ್ಗೊಂಡಿದ್ದಾರೆ.

ಕೇಜ್ರಿವಾಲ್ ಗೆ ಕರೆ ಮಾಡಲು 01123392999 ಅಥವಾ +91 8130344141 ಗೆ ಎಸ್ ಎಂ ಎಸ್ ಮಾಡಿ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ಲೈವ್ ವಿಡಿಯೋ ಇಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Moving ahead from the format of speeches, Delhi Chief Minister Arvind Kejriwal got into an interactive mode with the common man on Sunday, July 17, titled 'Talk to AK', where people from across the country will ask him queries via phone, text message and social media.
Please Wait while comments are loading...