ವಿಜಯ್ ಮಲ್ಯಗೆ ಆ. 27ರ ಗಡುವು: ಆಸ್ತಿ ಮುಟ್ಟುಗೋಲು ಎಚ್ಚರಿಕೆ

ನವದೆಹಲಿ, ಜೂನ್ 30: ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ ಅಡಿಯಲ್ಲಿ ರಚನೆಯಾದ ವಿಶೇಷ ನ್ಯಾಯಾಲಯವು ತನ್ನ ಮುಂದೆ ಆಗಸ್ಟ್ 27ರಂದು ಹಾಜರಾಗುವಂತೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಬ್ಯಾಂಕ್‌ಗಳಿಗೆ ವಂಚನೆ ಮಾಡಿ ಪರಾರಿಯಾದ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಹಾಗೂ ಇತರರಿಗೆ ಈ ನೋಟಿಸ್ ಕಳುಹಿಸಲಾಗಿದೆ.

ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಹಾಗೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಜೂನ್ 22ರಂದು ಜಾರಿ ನಿರ್ದೇಶನಾಲಯವು ಅರ್ಜಿ ಸಲ್ಲಿಸಿತ್ತು.

special court summons mallya on august 27

ಒಂದು ವೇಲೆ ಮಲ್ಯ ಅವರು ನೀಡಿದ ಅವಧಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದರೆ ಅವರನ್ನು ದೇಶಭ್ರಷ್ಟ ಎಂದು ಘೋಷಿಸಲಾಗುತ್ತದೆ ಮತ್ತು ಅವರ 12,500 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂಬುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ.

ಚೌಕಾಸಿ ನಿರಾಕರಣೆ
ಲಂಡನ್‌ನಲ್ಲಿರುವ ವಿಜಯ್ ಮಲ್ಯ, ಇ.ಡಿ. ಅಧಿಕಾರಿಗಳು ಆರೋಪಿಸಿರುವಂತೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಾವು ಚೌಕಾಸಿ ವ್ಯವಹಾರಕ್ಕೆ ಇಳಿದಿಲ್ಲ ಎಂದು ಹೇಳಿದ್ದಾರೆ.

ನಾನು ಚೌಕಾಸಿ ಪ್ರಯತ್ನ ಮಾಡಿದ್ದೇನೆ ಎಂದು ಅಧಿಕಾರಿ ಹೇಳಿರುವ ವರದಿಯನ್ನು ಓದಿದ್ದೇನೆ. ಅಧಿಕಾರಿಗಳು ದಯಮಾಡಿ ಇ.ಡಿ. ದೋಷಾರೋಪವನ್ನು ಮೊದಲು ಓದಲಿ ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+