ಸೋನಿಯಾ ಗಾಂಧಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್19: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮತ್ತೆ ಆಸ್ಪತ್ತ್ರ್ಗೆ ದಾಖಲಿಸಲಾಗಿದೆ. ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದೇ ಆಸ್ಪತ್ರೆಯಿಂದ ಎರಡು ದಿನಗಳ ಹಿಂದಷ್ಟೇ ಗುಣಮುಖರಾಗಿ ಹೊರ ಬಂದಿದ್ದರು. ವಾರಣಾಸಿಯಲ್ಲಿ ಸೋನಿಯಾರಿಗೆ ಆಗಿದ್ದ ಗಾಯಕ್ಕೆ ಸದ್ಯ ಫಿಸಿಯೋಥೆರಪಿ ನೀಡಲಾಗುತ್ತಿದೆ.

ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಪೂರ್ವ ನಿರ್ಧರಿತವಾಗಿತ್ತು. ಭುಜದ ನೋವಿಗೆ ಫಿಸಿಯೋಥೆರಪಿ ನಡೆಸಲಾಗುತ್ತಿದೆ,ಸ್ವಲ್ಪ ಜ್ವರ ಕೂಡಾ ಇದೆ ಎಂದು ಡಾ. ಎಸ್.ಪಿ ಬೈತೋರಾ ಹೇಳಿದ್ದಾರೆ.

Sonia Gandhi back in hospital

ಆಗಸ್ಟ್ 3ರಂದು ವಾರಾಣಸಿಯ ರೋಡ್ ಶೋ ವೇಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 69 ವರ್ಷದ ಸೋನಿಯಾ ಅವರಿಗೆ 11 ದಿನಗಳವರೆಗೆ ಚಿಕಿತ್ಸೆ ಪಡೆದಿದ್ದರು. ಜ್ವರ ಹಾಗೂ ಭುಜದ ನೋವು ಕಾಣಿಸಿಕೊಂಡಿತ್ತು. ಬುಧವಾರದಂದು ಗಂಗಾರಾಮ್ ಆಸ್ಪತ್ರೆಗೆ ಭೇಟಿ ನೀಡಿ, ಭುಜದ ಶಸ್ತ್ರಚಿಕಿತ್ಸೆ ವೇಳೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿಸಿಕೊಂಡಿದ್ದರು.

ಮುಂಬೈನ ಡಾಕ್ಟರ್ ಸಂಜಯ್ ದೇಸಾಯಿ, ಡಾ ಪ್ರತೀಕ್ ಗುಪ್ತಾ ಅವರು ಸರ್ಜರಿ ಯಶಸ್ವಿಯಾಗಿ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Congress president Sonia Gandhi was admitted to Sir Ganga Ram Hospital for a "routine" medical check-up, two days after she was discharged, following treatment for dehydration, fever and a shoulder injury.
Please Wait while comments are loading...