ಪದವಿ ವಿವಾದ, ಅಧಿಕಾರಿ ಅಮಾನತಿಗೆ ಸ್ಮೃತಿ ತೆರೆ

ನವದೆಹಲಿ,ಜೂ.1: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ಪದವಿ ಕುರಿತ ಮಾಹಿತಿ ಸೋರಿಕೆ ಮಾಡಿ ಅಮಾನತಿಗೊಳಗಾಗಿರುವ ಐವರು ದೆಹಲಿ ವಿವಿ ಅಧಿಕಾರಿಗಳಿಗೆ ಸಚಿವೆ ಸ್ಮೃತಿ ಅವರು ರಿಲೀಫ್ ನೀಡಿದ್ದಾರೆ. ಅಮಾನತಿಗೊಳಗಾಗಿರುವ ಐವರನ್ನು ಪುನಃ ಸೇವೆಗೆ ತೆಗೆದುಕೊಳ್ಳಲು ಸ್ಮೃತಿ ವಿವಿ ಆಡಳಿತ ಮಂಡಳಿಯನ್ನು ಕೋರಿದ್ದಾರೆ.

ಸ್ಮೃತಿ ಇರಾನಿ ಅವರ ಸ್ನಾತಕ ಪದವಿಯನ್ನೂ ಪೂರೈಸಿಲ್ಲ ಎಂಬ ಕುರಿತಾಗಿ ವಿವಾದ ಎದ್ದಿದ್ದರಿಂದ, ದೆಹಲಿ ವಿವಿ ಆಡಳಿತ, ಸ್ಮೃತಿ ಅವರ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆಂಬ ಆರೋಪದ ಮೇರೆಗೆ ತನ್ನ ದೂರ ಶಿಕ್ಷಣ ಇಲಾಖೆಯ ಐವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿತ್ತು.

ವಿವಿಯ ಈ ನಡೆ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಪದವಿ ಕುರಿತಾದ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ, ಸ್ಮೃತಿ ಇರಾನಿಯವರೇ ವಿವಿ ಆಡಳಿತದ ಮೇಲೆ ಪ್ರಭಾವ ಬೀರಿ, ಐವರು ಸಿಬ್ಬಂದಿಯನ್ನು ಅಮಾನತು ಮಾಡಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ತಕ್ಕಂತೆ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಅವರು ಟ್ವಿಟ್ಟರ್ ನಲ್ಲಿ ತರಾಟೆ ತೆಗೆದುಕೊಂಡಿದ್ದರು.[ಸ್ಮೃತಿ ವಿದ್ಯಾರ್ಹತೆ ಪ್ರಶ್ನೆ, ಕಾಂಗ್ರೆಸ್ಸಿಗೆ ಬಿಜೆಪಿ ತಿರುಗೇಟು]

ಆದರೆ, ಈ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 'ದೆಹಲಿ ವಿಶ್ವವಿದ್ಯಾಲಯ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ತನ್ನ ಸಿಬ್ಬಂದಿಯ ಮೇಲೆ ಅಲ್ಲಿನ ಆಡಳಿತ ಸ್ವಯಂ ವಿವೇಚನೆಯಿಂದ ಕ್ರಮಕೈಗೊಳ್ಳುತ್ತದೆ. ನನ್ನ ಪದವಿ ಕುರಿತಂತೆ ಎದ್ದ ವಿವಾದದ ಬೆನ್ನಲ್ಲಿ ಅಮಾನತುಗೊಂಡಿರುವ ಐವರು ಸಿಬ್ಬಂದಿಯನ್ನು ಪುನಃ ಸೇವೆಗೆ ನಿಯೋಜಿಸುವಂತೆ ಕೋರುತ್ತೇನೆ' ಎಂದಿದ್ದಾರೆ.

ಐವರು ಬೋಧಕೇತರ ಸಿಬ್ಬಂದಿ ಕೈ ಚಳಕ

ಐವರು ಬೋಧಕೇತರ ಸಿಬ್ಬಂದಿ ಕೈ ಚಳಕ

ಸ್ಮತಿ ಇರಾನಿ ಅವರ ಕಾಲೇಜು ಪ್ರವೇಶಪತ್ರ ಸೇರಿದಂತೆ ಕೆಲವೊಂದು ಶೈಕ್ಷಣಿಕ ಮಾಹಿತಿಗಳನ್ನು ವಿವಿಯ ಮುಕ್ತ ಶಿಕ್ಷಣ ವಿಭಾಗದ ಐವರು ಬೋಧಕೇತರ ಸಿಬ್ಬಂದಿ ಹಿಂದಿ ದಿನಪತ್ರಿಕೆಯೊಂದಕ್ಕೆ ಒದಗಿಸಿದ್ದರು. ಈ ಶೈಕ್ಷಣಿಕ ದಾಖಲೆಗಳ ಪ್ರಕಾರ ಸ್ಮತಿ ಅವರು 2013ರಲ್ಲಿ ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿ ತರಗತಿಗೆ ಪ್ರವೇಶ ಪಡೆದುಕೊಂಡಿದ್ದರು. ಆದರೆ ಮೊದಲ ವರ್ಷದ ಪರೀಕ್ಷೆಯನ್ನು ಅವರು ಬರೆದಿರಲಿಲ್ಲ.

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್

ದಿಲ್ಲಿ ವಿವಿಯಿಂದ ಅಮಾನತುಗೊಂಡಿರುವ ಸಿಬ್ಬಂದಿಯ ಪರವಾಗಿ ಯಾರಾದರೂ ಮಾತನಾಡುವರೇ' ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್

ಇರಾನಿ ಅವರ ಶೈಕ್ಷಣಿಕ ಆರ್ಹತೆಯ ವಿಚಾರ

ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಅವರ ಶೈಕ್ಷಣಿಕ ಆರ್ಹತೆಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿ ನಡೆದು ಅವರು ವಿವಾದದ ಕೇಂದ್ರಬಿಂದು ಆಗಿದ್ದರು. ಸಚಿವೆ ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಸ್ಮತಿ ಇರಾನಿ ಮನವಿ ಮಾಡಿಕೊಂಡಿದ್ದಾರೆ

ಕೇಂದ್ರ ಮಾನವ ಸಂಪನ್ಮೂಲ ಸಚಿವೆಯ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಬಹಿರಂಗಗೊಳಿಸಿ ಅಮಾನತುಗೊಂಡಿರುವ ಐವರು ಸಿಬ್ಬಂದಿ ಮೇಲಿನ ಕ್ರಮವನ್ನು ರದ್ದುಗೊಳಿಸುವಂತೆ ಸಚಿವೆ ಸ್ಮತಿ ಇರಾನಿ ಮನವಿ ಮಾಡಿಕೊಂಡಿದ್ದಾರೆ.

ಸ್ಮತಿ ಇರಾನಿ ವೈಯಕ್ತಿಕವಾಗಿ ಮನವಿ

ದಿಲ್ಲಿ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಈ ಸಿಬ್ಬಂದಿಯನ್ನು ಮರುನಿಯೋಜನೆ ಮಾಡುವಂತೆ ಉಪಕುಲಪತಿಯವರಲ್ಲಿ ವೈಯಕ್ತಿಕವಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ಸ್ಮತಿ ಇರಾನಿ ಹೇಳಿದ್ದಾರೆ

ಮತ್ತೆ ಪ್ರತಿಕ್ರಿಯಿಸಿದ್ದ ದಿಗ್ವಿಜಯ್ ಸಿಂಗ್

ಧನ್ಯವಾದಗಳು ಸ್ಮತಿ, ಈಗ ದೇಶದ ಜನರು ನಿಮ್ಮ ನೈಜ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+