ಗಾಲಿ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅನುಮತಿ!

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 01: ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿ ತವರೂರಿಗೂ ಹೋಗಲು ಆಗದಂಥ ಪರಿಸ್ಥಿತಿ ಎದುರಿಸುತ್ತಿರುವ ಗಾಲಿ ಜನಾರ್ಧನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಮಗಳ ಮದುವೆಗಾಗಿ ಬಳ್ಳಾರಿಗೆ ಹೋಗಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ನವೆಂಬರ್ 22ರ ತನಕ ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೆಲೆಸಬಹುದಾಗಿದೆ. ನವೆಂಬರ್ 16ರಂದು ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆ ನಿಗದಿಯಾಗಿದೆ. [ಜನಾರ್ದನ ರೆಡ್ಡಿಗೆ 2 BHK ಮನೆ]

SC allows Reddy to visit Ballari for daughter's wedding

ಮಗಳ ಮದುವೆಗಾಗಿ ಬಳ್ಳಾರಿಗೆ ತೆರಳಲು ಅನುಮತಿ ಕೋರಿ ಗಾಲಿ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಎಕೆ ಸಿಕ್ರಿ ಹಾಗೂ ಎನ್ ವಿ ರಮಣ ಅವರಿದ್ದ ನ್ಯಾಯಪೀಠ, ರೆಡ್ಡಿ ಅವರಿಗೆ ತಾತ್ಕಾಲಿಕ ಅನುಮತಿ ನೀಡಿದೆ. ಜನವರಿ 21ರಂದು ಗಾಲಿ ರೆಡ್ಡಿಗೆ ನೀಡಿದ್ದ ಷರತ್ತುಬದ್ಧ ಜಾಮೀನು ಆದೇಶವನ್ನು ತಿದ್ದುಪಡಿ ಮಾಡಿ ಆದೇಶ ನೀಡಿದೆ. [ಚಿತ್ರಸುದ್ದಿ: ಅಗ್ರಹಾರದಿಂದ ಜರ್ಮನಿ ಕಾರಿನಲ್ಲಿ ಹೊರಬಂದ ರೆಡ್ಡಿ]

ಕೇವಲ 15 ದಿನ ಅಲ್ಲಿಗೆ ತೆರಳಲು ಅವಕಾಶ ನೀಡಬಹುದು ಎಂದು ಸಿಬಿಐ ಪರ ಭಾಗವಹಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣಿಂದರ್‌ ಸಿಂಗ್‌ ವಾದಿಸಿದ್ದರು. ಆದರೆ, ನವೆಂಬರ್‌ 1ರಿಂದ 21ರವರೆಗೆ ಮಾತ್ರ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಜಾಮೀನು ನೀಡಿದ ವೇಳೆ ವಿಧಿಸಿದ್ದ ಷರತ್ತುಗಳನ್ನು ಮಗಳ ಮದುವೆ ಇರುವುದರಿಂದ ಸಡಿಲಿಸಬೇಕು ಎಂದು ಕೋರಿ ಅವರ ಪರ ವಕೀಲ ದುಷ್ಯಂತ ದವೆ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Friday allowed mining baron and former Karnataka minister G Janardhana Reddy to visit Ballari to attend his daughter’s wedding scheduled for November 16.
Please Wait while comments are loading...