36 ದೇಶಗಳ ವಿಮಾನಗಳಿಗೆ ನಿರ್ಬಂಧ ವಿಧಿಸಿದ ರಷ್ಯಾ
ಮಾಸ್ಕೋ, ಫೆಬ್ರವರಿ 28: ರಷ್ಯಾ ಒಂದೆಡೆ ಉಕ್ರೇನ್ ಮೇಲೆ ಸಮರ ಸಾರುತ್ತಿದ್ದು, ಇನ್ನೊಂದೆಡೆ 36 ದೇಶಗಳ ವಿಮಾನಗಳಿಗೆ ನಿರ್ಬಂಧ ವಿಧಿಸಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿ ಖಂಡಿಸಿ ಜಗತ್ತಿನ ಹಲವಾರು ರಾಷ್ಟ್ರಗಳು ರಷ್ಯಾಗೆ ವಾಯು ಮಾರ್ಗ ನಿರ್ಬಂಧಿಸಿದ್ದು, ಇದಕ್ಕೆ ಪ್ರತಿಯಾಗಿ ರಷ್ಯಾ ಸರ್ಕಾರ ಕೂಡ ಜಗತ್ತಿನ ಸುಮಾರು 36 ರಾಷ್ಟ್ರಗಳಿಗೆ ತನ್ನ ವಾಯು ಮಾರ್ಗ ಬಳಕೆ ಮಾಡದಂತೆ ನಿರ್ಬಂಧ ಹೇರಿದೆ.
ಮತ್ತೊಂದೆಡೆ ಉಕ್ರೇನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ರಷ್ಯಾ ಮೇಲೆ ಆರ್ಥಿಕ ಮತ್ತು ವ್ಯಾವಹಾರಿಕ ನಿರ್ಬಂಧಗಳನ್ನುಹೇರುತ್ತಿದ್ದು, ಇದಕ್ಕೆ ಪ್ರತಿಯಾಗಿ ರಷ್ಯಾದಲ್ಲಿರುವ ಅಮೆರಿಕನ್ನರು ಸ್ಥಳೀಯರ ವಿರೋಧ ಎದುರಿಸುವಂತಾಗಿದೆ. ರಷ್ಯಾದಲ್ಲಿರುವ ಅಮೆರಿಕನ್ನರಿಗೆ ಸ್ಥಳೀಯರು ಕೂಡಲೇ ದೇಶ ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಯುರೋಪಿಯನ್ ರಾಷ್ಟ್ರಗಳು, ಕೆನಡಾದ ನೆರೆಯ ಪುಟ್ಟರಾಷ್ಟ್ರ ಬೆಲ್ಜಿಯಂ ಸೇರಿದಂತೆ ಸುಮಾರು 36 ರಾಷ್ಟ್ರಗಳಿಗೆ ತನ್ನ ವಾಯುಮಾರ್ಗ ಬಳಕೆ ಮಾಡದಂತೆ ರಷ್ಯಾ ನಿರ್ಬಂಧ ಹೇರಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆಯಾ ದೇಶಗಳ ವಿಮಾನಗಳು ವಿಶೇಷ ಅನುಮತಿಯೊಂದಿಗೆ ಮಾತ್ರ ರಷ್ಯಾದ ವಾಯುಪ್ರದೇಶವನ್ನು ಪ್ರವೇಶಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಉಕ್ರೇನ್ ಮೇಲಿನ ಆಕ್ರಮಣ ಮುಂದುವರಿಸಿದ್ದು, ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಹಲವು ನಿರ್ಬಂಧ ವಿಧಿಸಿವೆ. ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಕ್ರಮ ಕೈಗೊಂಡಿದ್ದು,36 ರಾಷ್ಟ್ರಗಳ ವಿಮಾನ ಸಂಚಾರಕ್ಕೆ ತನ್ನ ವಾಯುಪ್ರದೇಶದಿಂದ ನಿಷೇಧಿಸಲು ನಿರ್ಧರಿಸಿದೆ. ಯುರೋಪ್ ಒಕ್ಕೂಟ, ಬ್ರಿಟನ್, ಕೆನಡಾ ಮತ್ತು ಜರ್ಮನಿಯಂತಹ ಪ್ರಮುಖ ರಾಷ್ಟ್ರಗಳ ವಿಮಾನ ಸಂಚಾರಕ್ಕೂ ನಿಷೇಧ ಅನ್ವಯಿಸುತ್ತದೆ.
ಸ್ಥಳೀಯ ಆಡಳಿತಗಳೂ ಕೂಡ ಅಮೆರಿಕನ್ನರ ಮೇಲೆ ಪರೋಕ್ಷ ಒತ್ತಡ ಹೇರುತ್ತಿದ್ದು, ಇದೇ ಕಾರಣಕ್ಕೆ ಅಮೆರಿಕ ಸರ್ಕಾರ ರಷ್ಯಾದಲ್ಲಿರುವ ತನ್ನ ಪ್ರಜೆಗಳಿಗೆ ಕೂಡಲೇ ರಷ್ಯಾ ತೊರೆಯುವಂತೆ ಸೂಚನೆ ನೀಡಿದೆ.
ಯುರೋಪಿಯನ್ ಒಕ್ಕೂಟದಿಂದ ಉನೈಟೆಡ್ ಗಿಂಗ್‌ಡಮ್, ಅಲ್ಬೇನಿಯಾ, ಕೆನಡಾ, ನಾರ್ವೆ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಜಿಬ್ರಾಲ್ಟರ್ ಮತ್ತು ಜರ್ಸಿ ಸೇರಿದಂತೆ ಹಲವಾರು ಬ್ರಿಟನ್ ಪ್ರಾಂತ್ಯಗಳಿಂದ ವಿಮಾನಗಳನ್ನು ನಿರ್ಬಂಧಿಸಲಾಗಿದೆ.
ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಅಂತ್ಯಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಉಕ್ರೇನ್ ದೇಶದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಷ್ಯಾ ಗಡಿಯಲ್ಲಿ ಇರುವ ಬೆಲಾರಸ್ ಪ್ರಾಂತ್ಯ ತಲುಪಿದ್ದು, ಗಡಿ ಭಾಗದಲ್ಲೇ ರಷ್ಯಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ.
ಖಾಸಗಿ ಜೆಟ್‌ಗಳು ಸೇರಿದಂತೆ ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಐರೋಪ್ಯ ಒಕ್ಕೂಟ ಭಾನುವಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರ 36 ರಾಷ್ಟ್ರಗಳ ವಿಮಾನ ಪ್ರವೇಶವನ್ನು ನಿರ್ಬಂಧಿಸಿದೆ.












Click it and Unblock the Notifications