'ಭವಿಷ್ಯ' ಹೇಳುವ ಹಸುವಿನ ವಿಡಿಯೋ ಹಂಚಿದ ರಾಬರ್ಟ್ ವಾದ್ರಾ

ನವದೆಹಲಿ, ಜುಲೈ 28: ಭವಿಷ್ಯ ಹೇಳುವ ಹಸುವಿನ ಚಿತ್ರ, ವಿಡಿಯೋವೊಂದನ್ನು ಉದ್ಯಮಿ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಭಾನುವಾರದಂದು ಹಂಚಿಕೊಂಡಿದ್ದಾರೆ.

ರಸ್ತೆಯಲ್ಲಿ ಹೋಗುವಾಗ 'ಭವಿಷ್ಯ' ತಿಳಿಸುವ ಹಸುವೊಂದನ್ನು ಕಂಡಿದ್ದಾಗಿ ವಾದ್ರಾ ಹೇಳಿಕೊಂಡಿದ್ದಾರೆ.

"ರಸ್ತೆಗಿಳಿದರೆ ಕಲಿಯಲು ಸಾಕಷ್ಟು ವಿಷಯಗಳು ನಿಮ್ಮ ಕಣ್ಮುಂದೆ ಸಿಗುತ್ತವೆ, ಜನರಿಗೆ ನೆರವಾಗುವುದು, ಅವರ ನಿಷ್ಕಲ್ಮಶ ನಗು, ಧನ್ಯವಾದ ರೂಪದಲ್ಲಿ ಸಿಗುವ ರೋಜಾ ಹೂವು..ನಿಮ್ಮ ಭವಿಷ್ಯವನ್ನು ತಿಳಿಸುವ ಹಸು ಕೂಡಾ ನೋಡಬಹುದು, ನಿಮ್ಮ ಮನದ ಇಂಗಿತ ಅರಿತು, ನೀವು ಅಂದುಕೊಂಡಿದ್ದು ಆಗುವುದೋ ಇಲ್ಲವೋ ಎಂಬುದನ್ನು ತಲೆ ಅಲ್ಲಾಡಿಸುವುದರ ಮೂಲಕ ಹಸುಗಳು ತಿಳಿಸುತ್ತವೆ" ಎಂದು ವಾದ್ರಾ ತಮ್ಮ ಸಾಮಾಜಿಕ ಜಾಲ ತಾಣ ಖಾತೆಗಳಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

Robert Vadra posts video of cow that can predict future

ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ವಾದ್ರಾ ಅವರು ವಿದೇಶ ಪ್ರಯಾಣ ಮಾಡಲು ಅನುಮತಿ ಪಡೆದುಕೊಂಡಿದ್ದಾರೆ. ಮನಿಲಾಂಡ್ರಿಂಗ್ ಕೇಸಿನ ಆರೋಪಿಯಾಗಿರುವ ರಾಬರ್ಟ್ ಅವರಿಗೆ 6 ವಾರಗಳ ಕಾಲ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಲು ಜೂನ್ 03ರಂದು ದೆಹಲಿ ಕೋರ್ಟ್ ಅನುಮತಿ ನೀಡಿದೆ.

ಹಸುವಿನ ಬಗ್ಗೆ ಈ ನಡುವೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಇತ್ತೀಚಿಗೆ ನೀಡಿದ ಹೇಳಿಕೆ ಸಾಕಷ್ಟು ಟ್ರಾಲ್ ಗಳಿಗೆ ಆಹಾರ ಒದಗಿಸಿತ್ತು. "ಹಸುಗಳು ಮಾತ್ರ ಉಸಿರು ಹೊರಬಿಟ್ಟಾಗ ಆಮ್ಲಜನಕ ಬರುತ್ತದೆ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+