• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

370ನೇ ವಿಧಿ: ಮೌನ ಮುರಿದ ರಾಹುಲ್ ಗಾಂಧಿಯಿಂದ ಕೇಂದ್ರಕ್ಕೆ ತಪರಾಕಿ

|
   370ನೇ ವಿಧಿ: ಮೌನ ಮುರಿದ ರಾಹುಲ್ ಗಾಂಧಿಯಿಂದ ಕೇಂದ್ರಕ್ಕೆ ತಪರಾಕಿ Rahul gandhi | Oneindia Kannada

   ನವದೆಹಲಿ, ಆಗಸ್ಟ್ 06: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಮೌನ ಮುರಿದಿದ್ದಾರೆ.

   "ಈ ದೇಶ ಜನರಿಂದ ನಿರ್ಮಾಣವಾಗಿದ್ದು, ತುಂಡು ಭೂಮಿಯಿಂದಲ್ಲ" ಎಂದು ಕೇಂದ್ರದ ನಡೆಯ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

   ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು? ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು?

   "ಜಮ್ಮು ಕಾಶ್ಮೀರವನ್ನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಹರಿದುಹಾಕುವುದರಿಂದ, ಚುನಾಯಿತ ಪ್ರತಿನಿಧಿಗಳನ್ನು ಜೈಲಿಗೆ ತಳ್ಳಿ ಸಂವಿಧಾನವನ್ನು ಉಲ್ಲಂಘಿಸುವುದರಿಂದ ನಮ್ಮ ರಾಷ್ಟ್ರದ ಸಮಗ್ರತೆ ಹೆಚ್ಚುವುದಿಲ್ಲ. ನಮ್ಮ ದೇಶ ನಿರ್ಮಾಣವಾಗಿರುವುದು ಜನರಿಂದ, ತುಂಡು ಭೂಮಿಯಿಂದಲ್ಲ. ಶಾಸಕಾಂಗ ಅಧಿಕಾರವನ್ನು ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಬಹುದೊಡ್ಡ ಅಪಾಯವೆನ್ನಿಸಲಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

   ಸೋಮವಾರ ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಮದ್ರ ಸರ್ಕಾರದ ಮಹತ್ವದ ನಿರ್ಧಾರದ ಬಗ್ಗೆ ಹಲವು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಈ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೆ ರಾಹುಲ್ ಗಾಂಧಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

   ಕಾಶ್ಮೀರ ಫಸ್ಟ್, ಆರ್ಥಿಕತೆ ಲಾಸ್ಟ್: ಬಹುಸಂಖ್ಯಾತರ ಭಾವನೆಗಳೇ ಆಳುವವರ ಬಂಡವಾಳ!ಕಾಶ್ಮೀರ ಫಸ್ಟ್, ಆರ್ಥಿಕತೆ ಲಾಸ್ಟ್: ಬಹುಸಂಖ್ಯಾತರ ಭಾವನೆಗಳೇ ಆಳುವವರ ಬಂಡವಾಳ!

   ಈ ಕುರಿತು ರಾಹುಲ್ ಗಾಂಧಿ ಅವರ ಮೌನವನ್ನು ಮಾಧ್ಯಮಗಳು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದವು. ಆದರೆ ಕೊನೆಗೂ ರಾಹುಲ್ ಗಾಂಧಿ ಮೌನ ಮುರಿದಿದ್ದು, ಕೇಂದ್ರ ಸರ್ಕಾರದ ನಡೆಗೆ ತಮ್ಮ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

   English summary
   Congress Leader Rahul Gandhi's Reaction On Scrapping Article 370 In JK
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X