ಮೋದಿಯ ತೆಗಳಿ ನಿತಿನ್ ಗಡ್ಕರಿಯ ಹೊಗಳಿದ ರಾಹುಲ್: ಹೊಸ ತಂತ್ರ?

Recommended Video

      ಮೋದಿಯ ತೆಗಳಿ ನಿತಿನ್ ಗಡ್ಕರಿಯ ಹೊಗಳಿದ ರಾಹುಲ್: ಹೊಸ ತಂತ್ರ? | Oneindia Kannada

      ನವದೆಹಲಿ, ಫೆಬ್ರವರಿ 05: ಮೋದಿಯನ್ನು, ಬಿಜೆಪಿಯನ್ನು ಅದರ ಸಚಿವರನ್ನು ಅಡಿಗಡಿಗೆ ಟೀಕಿಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಏಕಾ-ಏಕಿ ಬಿಜೆಪಿಯ ಮುಖಂಡರೊಬ್ಬರನ್ನು ಹೊಗಳಿದ್ದಾರೆ.

      'ಯಾರು ತಮ್ಮ ಮನೆಯನ್ನು ನೋಡಿಕೊಳ್ಳಲಾರರೊ, ಅವರು ದೇಶವನ್ನು ನೋಡಿಕೊಳ್ಳಲಾರರು' ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ.

      'ಗಡ್ಕರಿ ಅವರೇ ಅಭಿನಂದನೆಗಳು, ಬಿಜೆಪಿಯಲ್ಲಿ ತಾಕತ್ತಿರುವ ಏಕೈಕ ವ್ಯಕ್ತಿ ಎಂದರೆ ಅದು ನೀವೊಬ್ಬರೆ ಎಂದು' ರಾಹುಲ್ ಗಾಂಧಿ ಅವರು ಗಡ್ಕರಿ ಅವರನ್ನು ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ. ಆದರೆ ಹೊಗಳುವ ಜೊತೆಗೆ ಕಾಲನ್ನೂ ಎಳೆದಿದ್ದಾರೆ.

      Rahul Gandhi praised BJP minister Nitin Gadkari in twitter

      ಮೋದಿ ವಿರುದ್ಧ ಪರೋಕ್ಷವಾಗಿ ನೀಡಿರುವ ಹೇಳಿಕೆಯ ಸುದ್ದಿಯನ್ನು ಹಂಚಿಕೊಂಡಿರುವ ಅವರು, ರಫೆಲ್‌, ಅಂಬಾನಿ, ರೈತರ ಸಮಸ್ಯೆ, ಕೇಂದ್ರ ಸಂಸ್ಥೆಗಳ ಸ್ವಾತಂತ್ರದ ಹರಣದ ಬಗ್ಗೆಯೂ ಮಾತನಾಡಿ ಎಂದು ಸವಾಲು ಎಸೆದಿದ್ದಾರೆ. ಮತ್ತೊಂದು ಟ್ವೀಟ್‌ ಮಾಡಿ, ಅಯ್ಯೋ ಪ್ರಮುಖ ವಿಷಯ ಮರೆತೆ ಉದ್ಯೋಗದ ಬಗ್ಗೆಯೂ ಮಾತನಾಡಿ ಎಂದು ರಾಹುಲ್ ನಿತಿನ್ ಅವರನ್ನು ಕೇಳಿದ್ದಾರೆ.

      ನಿತಿನ್ ಗಡ್ಕರಿ ಅವರು ಮೋದಿ ಅವರಿಗೆ ಪರ್ಯಾಯವಾಗಿ ಪ್ರಧಾನಿ ಹುದ್ದೆಗೆ ತಯಾರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ತಕ್ಕಂತೆ ಗಡ್ಕರಿ ಅವರು ಸಹ ಮೋದಿ ವಿರುದ್ಧವಾಗಿ ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಿತಿನ್ ಅವರನ್ನು ಹೊಗಳಿ ಬಿಜೆಪಿಯಲ್ಲಿ ಆಗುತ್ತಿರುವ ಎರಡು ಗುಂಪುಗಳ ನಡುವಿನ ಕಂದರವನ್ನು ಹೆಚ್ಚು ಮಾಡುವ ತಂತ್ರವನ್ನು ರಾಹುಲ್ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

      ನಿತಿನ್ ಅವರು ಮೊನ್ನೆಯಷ್ಟೆ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ, 'ಯಾರು ತನ್ನ ಕುಟುಂಬವನ್ನು ನೋಡಿಕೊಳ್ಳಲಾರರೊ ಅವರು ದೇಶವನ್ನು ನೋಡಿಕೊಳ್ಳಲಾರರು ಎಂದಿದ್ದರು. ಅದಕ್ಕೆ ಮುನ್ನಾ ಈಡೇರಿಸಲಾಗದ ಕನಸನ್ನು ತೋರಿಸಬೇಡಿ ಎಂದಿದ್ದರು. ಮತ್ತೊಂದು ಕಾರ್ಯಕ್ರಮವೊಂದರಲ್ಲಿ ನೆಹರು ಅವರನ್ನು ಹೊಗಳಿದ್ದರು. ಇದು ಮೋದಿ ವಿರೋಧವಾಗಿ ನೀಡುತ್ತಿರುವ ಹೇಳಿಕೆಗಳು ಎಂದೇ ವಿಶ್ಲೇಷಿಸಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+