Get Updates
Get notified of breaking news, exclusive insights, and must-see stories!

ಕೊರೊನಾ ಅವಧಿಯಲ್ಲಿ ಸರ್ಕಾರದ ಸಾಧನೆ ಪಟ್ಟಿ: ರಾಹುಲ್ ಏಟು, ಬಿಜೆಪಿ ತಿರುಗೇಟು

ದೆಹಲಿ, ಜುಲೈ 21: ಕಳೆದ ಆರು ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಕೊರೊನಾ ವೈರಸ್ ವಿರುದ್ಧ ಹೋರಾಡಿದ್ದಕ್ಕಿಂತ ಇತರೆ ಅಧಿಕಾರಕ್ಕಾಗಿ ಕೆಲಸ ಮಾಡಿದ್ದೆ ಹೆಚ್ಚು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿರುವ ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರದ ಆರು ಸಾಧನೆ ಪಟ್ಟಿ ಮಾಡಿ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಸೇರಿದಂತೆ ಫೆಬ್ರವರಿ ತಿಂಗಳಿಂದ ಜುಲೈವರೆಗೂ ಸರ್ಕಾರ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿಯ ಆರೋಪದ ಪಟ್ಟಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದು, ಕಳೆದ ಆರು ತಿಂಗಳಲ್ಲಿ ರಾಹುಲ್ ಗಾಂಧಿ ಸಾಧನೆ ಏನು ಎಂದು ಹೇಳಿದ್ದಾರೆ. ಮುಂದೆ ಓದಿ....

ರಾಹುಲ್ ಗಾಂಧಿ ಪಟ್ಟಿಯಲ್ಲಿ ಸರ್ಕಾರದ ಸಾಧನೆ

ರಾಹುಲ್ ಗಾಂಧಿ ಪಟ್ಟಿಯಲ್ಲಿ ಸರ್ಕಾರದ ಸಾಧನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಳೆದ ಆರು ತಿಂಗಳಲ್ಲಿ ಸರ್ಕಾರದ ಸಾಧನೆ ಎಂದು ಆರು ಘಟನೆಗಳನ್ನು ಪಟ್ಟಿ ಮಾಡಿದ್ದಾರೆ.

- ಫೆಬ್ರವರಿಯಲ್ಲಿ 'ಹಲೋ ಟ್ರಂಪ್' ಕಾರ್ಯಕ್ರಮ

- ಮಾರ್ಚ್‌ನಲ್ಲಿ ಮಧ್ಯ ಪ್ರದೇಶ ಸರ್ಕಾರ ಕೆಡವಿದ್ದು

- ಏಪ್ರಿಲ್ ತಿಂಗಳಲ್ಲಿ ದೀಪಗಳನ್ನು ಹಚ್ಚುವ ಅಭಿಯಾನ

- ಮೇ ತಿಂಗಳಲ್ಲಿ ಸರ್ಕಾರದ 6ನೇ ವರ್ಷದ ಸಂಭ್ರಮ

- ಜೂನ್‌ ತಿಂಗಳಲ್ಲಿ ಬಿಹಾರದಲ್ಲಿ ರಾಜಕೀಯ ಮೆರವಣಿಗೆ

- ಜುಲೈ ತಿಂಗಳಲ್ಲಿ ರಾಜಸ್ಥಾನದ ಸರ್ಕಾರ ಉರುಳಿಸುವ ಯತ್ನ

ಆದ್ದರಿಂದಲೇ ಕೊರೊನಾ ಕದನದಲ್ಲಿ ದೇಶವು 'ಸ್ವಾವಲಂಬಿಯಾಗಿದೆ' ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದಾರೆ.

ರಾಜಸ್ಥಾನದ ಬಿಕ್ಕಟ್ಟಿನ ಬಗ್ಗೆ ರಾಹುಲ್ ಪ್ರತಿಕ್ರಿಯೆ

ರಾಜಸ್ಥಾನದ ಬಿಕ್ಕಟ್ಟಿನ ಬಗ್ಗೆ ರಾಹುಲ್ ಪ್ರತಿಕ್ರಿಯೆ

ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ರಾಹುಲ್ ಆಪ್ತ ಸಚಿನ್ ಪೈಲೆಟ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಸರ್ಕಾರವೂ ಸಚಿನ್ ಪೈಲೆಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದೆ. ಜುಲೈ 10ರಿಂದ ನಡೆಯುತ್ತಿರುವ ಈ ಬೆಳವಣಿಗೆಯ ಬಗ್ಗೆ ಇದೇ ಮೊದಲ ಸಲ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗೆ ಬಿಜೆಪಿ ತಿರುಗೇಟು

ರಾಹುಲ್ ಗೆ ಬಿಜೆಪಿ ತಿರುಗೇಟು

ಸರ್ಕಾರದ ಆರು ತಿಂಗಳ ಸಾಧನೆ ಪಟ್ಟಿರುವ ಮಾಡಿರುವ ರಾಹುಲ್ ಗಾಂಧಿಗೆ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ. ''ರಾಹುಲ್ ಗಾಂಧಿ ಪ್ರತಿದಿನ ಟ್ವೀಟ್ ಮಾಡ್ತಾರೆ. ಕಾಂಗ್ರೆಸ್ ಪಕ್ಷವೂ ಟೀಟ್ ಪಾರ್ಟಿ ಆಗಿದೆ. ಕಾಂಗ್ರೆಸ್ ವರ್ಕೌಟ್ ಆಗಲ್ಲ ಎಂದು ಒಂದರ ಹಿಂದೆ ಮತ್ತೊಂದು ರಾಜ್ಯಗಳು ಸಾಬೀತು ಮಾಡುತ್ತಿದೆ. ನಿರಾಶಾದಾಯಕ ಪಕ್ಷವೂ ಕೇಂದ್ರ ಸರ್ಕಾರದ ವಿರುದ್ಧ ಎಲ್ಲ ಸಂದರ್ಭದಲ್ಲೂ ದಾಳಿ ನಡೆಸುತ್ತಿದ್ದಾರೆ. ಆದರೆ ಯಾವುದೇ ಫಲ ಕೊಡುತ್ತಿಲ್ಲ'' ಎಂದಿದ್ದಾರೆ.

ಆರು ತಿಂಗಳಲ್ಲಿ ರಾಹುಲ್ ಗಾಂಧಿ ಸಾಧನೆಯ ಪಟ್ಟಿ

ಆರು ತಿಂಗಳಲ್ಲಿ ರಾಹುಲ್ ಗಾಂಧಿ ಸಾಧನೆಯ ಪಟ್ಟಿ

ಸರ್ಕಾರ ಸಾಧನೆ ಪಟ್ಟಿ ಮಾಡಿರುವ ರಾಹುಲ್ ಗಾಂಧಿ ಅವರ ಸಾಧನೆ ಆರು ತಿಂಗಳಲ್ಲಿ ಹೇಗಿದೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

- ಫೆಬ್ರವರಿಯಲ್ಲಿ ಶಾಹೀನ್ ಬಾಗ್ ಗಲಭೆಗಳು

- ಮಾರ್ಚ್‌ನಲ್ಲಿ ಸಿಂಧಿಯಾ ಜೊತೆಗೆ ಮಧ್ಯಪ್ರದೇಶ ಸರ್ಕಾರವನ್ನು ಕಳೆದುಕೊಂಡಿದೆ

- ಏಪ್ರಿಲ್‌ನಲ್ಲಿ ಕಾರ್ಮಿಕರನ್ನು ಪ್ರಚೋದನೆ ನೀಡಿದ್ದು

- ಮೇ ತಿಂಗಳಲ್ಲಿ ಐತಿಹಾಸಿಕ ಮತದಾನದ ಸೋಲಿನ 6ನೇ ವಾರ್ಷಿಕೋತ್ಸವ

- ಜೂನ್‌ನಲ್ಲಿ ಚೀನಾ ಪರ ವಾದ

- ಜುಲೈನಲ್ಲಿ ರಾಜಸ್ಥಾನದಲ್ಲಿ ಪಕ್ಷ ನಾಶವಾಯಿತು ಎಂದು ತಿರುಗೇಟು ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+