ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿ ಕಾಡುತ್ತಿದೆ: ರಾಹುಲ್
ನವದೆಹಲಿ, ಸೆಪ್ಟೆಂಬರ್ 26: ಭಾರತದಲ್ಲಿ ಡಾ. ಮನಮೋಹನ್ ಸಿಂಗ್ ಅವರಂತಹ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು 88ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶುಭಹಾರೈಸಿದ ರಾಹುಲ್ ಗಾಂಧಿ, ಈ ಅನಿಸಿಕೆ ಹಂಚಿಕೊಂಡಿದ್ದಾರೆ. ಡಾ.ಸಿಂಗ್ ಅವರು ಯುಪಿಎ ಆಡಳಿತದ ಎರಡು ಅವಧಿ (2004-2014)ಗೆ ಪ್ರಧಾನಿಯಾಗಿ ಕೆಲಸ ಮಾಡಿದ್ದರು.
ಅವರ ಸಭ್ಯತೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಯ ಭಾವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ನಮ್ಮ ದೇಶದ ಕುರಿತ ಡಾ.ಸಿಂಗ್ ಅವರ ದೃಷ್ಟಿಕೋನದಲ್ಲಿ ರಾಜೀ ವಿಚಾರವೇ ಇಲ್ಲ. ಏಳು ಮತ್ತು ಬೀಳುಗಳ ನಡುವೆ ಭಾರತವನ್ನು ಮುನ್ನಡೆಸಿದ ಈ ಶ್ರೇಷ್ಠ ಪುತ್ರನಿಗೆ ದೇಶ ಎಂದಿಗೂ ಋಣಿಯಾಗಿರುತ್ತದೆ.
India feels the absence of a PM with the depth of Dr Manmohan Singh. His honesty, decency and dedication are a source of inspiration for us all.
— Rahul Gandhi (@RahulGandhi) September 26, 2020
Wishing him a very happy birthday and a lovely year ahead.#HappyBirthdayDrMMSingh
ಇದೇ ರೀತಿ ಕಾಂಗ್ರೆಸ್ ಪಕ್ಷದ ಟ್ವಿಟರ್ ಹ್ಯಾಂಡಲ್ನಲ್ಲಿ 2.47 ನಿಮಿಷದ ವಿಡಿಯೋವನ್ನೂ ಅಪ್ಲೋಡ್ ಮಾಡಲಾಗಿದ್ದು, ಡಾ.ಸಿಂಗ್ ಅವರ ಜೀವನ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
Recommended Video
ಮೂರು ಸಾಲಿನ ವಿವರಣೆಯೂ ಜತೆಗಿದೆ. ಅದು ಹೀಗಿದೆ- ಉನ್ನತಿಯೆಡಗಿನ ಅವರ ಪ್ರಯಾಣದಲ್ಲಿ ಕೋಟ್ಯಂತರ ಜನರನ್ನೂ ಅವರು ಜತೆಗೆ ಕೊಂಡೊಯ್ದರು. ಜಗತ್ತಿನ ಅತ್ಯಂತ ಸಮರ್ಥ ನಾಯಕರಲ್ಲಿ ಮನಮೋಹನ್ ಜಿ ಕೂಡ ಒಬ್ಬರು ಎಂದಿದ್ದಾರೆ.












Click it and Unblock the Notifications