ದೇಶದ ಭದ್ರತೆ ಜೊತೆ ರಾಜಿಯಾಗಿದ್ದಾರೆ ಮೋದಿ: ಶೌರಿ, ಸಿನ್ಹಾ
ನವದೆಹಲಿ, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆ ಜೊತೆ ರಾಜಿಯಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಮುಖಮಡರಾದ ಅರುಣ್ ಶೌರಿ, ಯಶವಂತ ಸಿನ್ಹಾ ಮತ್ತು ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. 'ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದ ಎಲ್ಲಾ ಅವ್ಯವಹಾರಗಳಿಗೂ ಪ್ರಧಾನಿ ಮೋದಿಯವರೇ ಹೊಣೆ. ಅವರು ಎಲ್ಲಾ ಶಿಷ್ಟಾಚಾರಗಳನ್ನೂ ಉಲ್ಲಂಘಿಸಿ, ರಾಷ್ಟ್ರೀಯ ಭದ್ರತೆಯನ್ನು ರಾಜಿಮಾಡಿಕೊಂಡಿದ್ದಾರೆ' ಎಂದು ಅವರು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವನ್ನು ಕಾಪಾಡಲು ಕೇಂದ್ರ ಸರ್ಕಾರ ಸುಳ್ಳಿನ ಬಲೆ ಹೆಣೆದಿದೆ. ಅಷ್ಟೇ ಅಲ್ಲ, ರಫೇಲ್ ಡೀಲ್ ಅನ್ನು ಸಮರ್ಥಿಸಿಕೊಳ್ಳುವಂತೆ ಭಾರತೀಯ ವಾಯುಸೇನೆಯ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗುತ್ತಿದೆ ಎಂದು ಅವರು ಹೇಳಿದರು.

'ಏರ್ ಕ್ರಾಫ್ಟ್ ಉತ್ಪಾದನೆಗೆ ಯಾವುದೇ ಅನುಭವವಿಲ್ಲದ ರಿಲಯನ್ಸ್ ಡಿಫೆನ್ಸ್ ಲಿ. ಅನ್ನು ಆರಿಸಿಕೊಂಡು ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್ ಎಎಲ್)' ಅನ್ನು ಕಡೆಗಣಿಸಿದ್ದು ಏಕೆ ಎಂದು ಆವರು ಪ್ರಶ್ನಿಸಿದ್ದಾರೆ.
ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಪಕ್ಷಗಳು ಮತ್ತು ಬಿಜೆಪಿ ವಿರೋಧಿಗಳು ದೂರಿದ್ದು, ಎನ್ ಡಿಎ ಸರ್ಕಾರಕ್ಕೆ ಇದೊಂದು ದೊಡ್ಡ ತಲೆನೋವಾಗಿದೆ.












Click it and Unblock the Notifications