ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನೋಟುಗಳ ಮುದ್ರಣಕ್ಕೆ ಇನ್ನೂ 6 ತಿಂಗಳು ಬೇಕಾ?

ನಿಷೇಧಿಸಿರುವ ಹಳೆ ನೋಟುಗಳ ಬದಲಾಗಿ ಹೊಸ ನೋಟುಗಳನ್ನು ದೇಶದಾದ್ಯಂತ ಚಾಲಾವಣೆಗೆ ತರಲು ಇನ್ನೂ 6 ತಿಂಗಳು ಸಮಯ ಬೇಕಾಗುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

By Prithviraj
|
Google Oneindia Kannada News

ನವದೆಹಲಿ, ನವೆಂಬರ್, 18: ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಆ ಸ್ಥಾನದಲ್ಲಿ ಹೊಸನೋಟುಗಳನ್ನು ದೇಶದಾದ್ಯಂತ ಚಲಾವಣೆಗೆ ತರಲು 6 ತಿಂಗಳು ಸಮಯ ಬೇಕಾಗುತ್ತದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಮುಖ್ಯವಾಗಿ ರೂ.500 ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲು ಇನ್ನೂ 6 ತಿಂಗಳ ಕಾಲವಾಕಾಶ ಬೇಕಾಗುತ್ತದೆ ಎಂಬುದು ಅಂಕಿ ಅಂಶಗಳ ಮೂಲಕ ಲೆಕ್ಕಾಹಾಕಲಾಗಿದೆ.[ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ]

ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆ ನಿರ್ವಹಿಸುತ್ತಿರುವ ನಾಸಿಕ್ ಮತ್ತು ದೇವಾಸ್ ಮುದ್ರಣ ಕೇಂದ್ರಗಳು ದೇಶದ ಒಟ್ಟು ಕರೆನ್ಸಿಯಲ್ಲಿ ಶೇ40ರಷ್ಟು ಕರೆನ್ಸಿಯನ್ನು ಮುದ್ರಿಸುವ ಸಾಮರ್ಥ್ಯ ಹೊಂದಿವೆ.

ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ವಹಿಸುತ್ತಿರುವ ಸಾಲ್ಬೋನಿ, ಮೈಸೂರು ಮುದ್ರಣ ಕೇಂದ್ರಗಳು ದೇಶದ ಒಟ್ಟು ಕರೆನ್ಸಿಯ ಶೇ. 60ರಷ್ಟು ನೋಟುಗಳನ್ನು ಮುದ್ರಣ ಮಾಡುತ್ತಿವೆ.

ಈ ಎರಡು ಮುದ್ರಣ ಕೇಂದ್ರಗಳು ವರ್ಷವಿಡೀ ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ಒಟ್ಟು 1,600ಕೋಟಿ ರೂ. ಹಣವನ್ನು ಮುದ್ರಿಸುವ ಸಾಮರ್ಥ್ಯ ಹೊಂದಿವೆ.

3 ಪಾಳಿಯಲ್ಲಿ ಕೆಲಸ ಮಾಡಿದರೆ ನಾಲ್ಕು ಸಾವಿರ ಕೋಟಿ ಕರೆನ್ಸಿ

3 ಪಾಳಿಯಲ್ಲಿ ಕೆಲಸ ಮಾಡಿದರೆ ನಾಲ್ಕು ಸಾವಿರ ಕೋಟಿ ಕರೆನ್ಸಿ

ಮೇಲಿನ ಎಲ್ಲಾ ಮುದ್ರಣಾಲಯಗಳಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ಒಂದು ವರ್ಷದಲ್ಲಿ 2,660 ಕೋಟಿ ಕರೆನ್ಸಿ ನೋಟುಗಳನ್ನು ಮುದ್ರಿಸಬಹುದು. ಇನ್ನು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ ನಾಲ್ಕು ಸಾವಿರ ಕೋಟಿ ಕರೆನ್ಸಿ ನೋಟುಗಳನ್ನು ಮುದ್ರಣ ಮಾಡಬಹುದು.

ಅಂಕಿ ಅಂಶಗಳ ಪ್ರಕಾರ ನಿಷೇಧವಾಗಿರುವ ರೂ.500 ಹಾಗು ರೂ. 1,000 ಮುಖಬೆಲೆಯ ನೋಟಗಳು ಚಾಲನೆಯಲ್ಲಿದ್ದಾಗ ದೇಶದ ಒಟ್ಟು ಕರೆನ್ಸಿ ಮೌಲ್ಯ ರೂ.17.54 ಲಕ್ಷ ಕೋಟಿಯಷ್ಟಿತ್ತು.

500, 1000 ರೂ. ಗಳ ಒಟ್ಟು ಕರೆನ್ಸಿ ಮೌಲ್ಯದ ಪಾಲು ಶೇ.84

500, 1000 ರೂ. ಗಳ ಒಟ್ಟು ಕರೆನ್ಸಿ ಮೌಲ್ಯದ ಪಾಲು ಶೇ.84

ಇದರಲ್ಲಿ ಶೇ.45 ರಷ್ಟು ನೋಟುಗಳು 500ರೂ. ಮುಖಬೆಲೆಯ ನೋಟುಗಳಾಗಿದ್ದು, ಇದರ ಒಟ್ಟು ಮೌಲ್ಯ ರೂ. 7.89 ಲಕ್ಷ ಕೋಟಿ ಆಗಿತ್ತು. ಇನ್ನು ಶೇ. 30ರಷ್ಟು 1,000 ರೂ. ಮುಖಬೆಲೆಯ ನೋಟುಗಳಿದ್ದು, ಇದರ ಒಟ್ಟು ಮೌಲ್ಯ 6.84 ಲಕ್ಷ ಕೋಟಿ ಆಗಿತ್ತು. ಒಟ್ಟು ಕರೆನ್ಸಿಯಲ್ಲಿ 500 ಹಾಗು ಸಾವಿರ ರೂ. ಮುಖಬೆಲೆಯ ನೋಟುಗಳ ಮೌಲ್ಯ ಶೇ.84ರಷ್ಟಿತ್ತು.

ಉಳಿದ ಶೇ.16 ರಷ್ಟು ಮೌಲದ್ಯ ಕರೆನ್ಸಿ ರೂ. 5 ರಿಂದ 100ರ ವರೆಗಿನ ಮುಖಬೆಲೆಯ ನೋಟುಗಳ ಮೂಲಕ ಚಲಾವಣೆಯಲ್ಲಿತ್ತು. ವಿವರಿಸಿ ಹೇಳುವುದಾದರೆ. ರೂ.500ನೋಟುಗಳು 1,578 ಕೋಟಿಯಷ್ಟು ಮತ್ತು ರೂ.1,000 ಮುಖಬೆಲೆಯ ನೋಟುಗಳು 684 ಲಕ್ಷ ಕೋಟಿಯಷ್ಟು ಚಲಾವಣೆಯಲ್ಲಿದ್ದವು.

342 ಲಕ್ಷ ಕೋಟಿ 2 ಸಾವಿರ ಮುಖಬೆಲೆಯ ನೋಟುಗಳು

342 ಲಕ್ಷ ಕೋಟಿ 2 ಸಾವಿರ ಮುಖಬೆಲೆಯ ನೋಟುಗಳು

ಪ್ರಸ್ತುತ ಕೇಂದ್ರ ಸರ್ಕಾರವು ರೂ.684 ಲಕ್ಷ ಕೋಟಿ ರೂ. 1,000 ಮುಖಬೆಲೆಯ ಸ್ಥಾನದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿರುವುದರಿಂದ ಆ ಮೌಲ್ಯಕ್ಕೆ ತಕ್ಕಂತೆ 342 ಲಕ್ಷ ಕೋಟಿ ನೋಟುಗಳನ್ನು ಮುದ್ರಿಸಿದರೆ ಸಾಕು.

ಕೇಂದ್ರ ಸರ್ಕಾರವೇ ತಿಳಿಸಿರುವಂತೆ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಕಾರ್ಯ ಸೆಪ್ಟೆಂಬರ್ ನಲ್ಲೇ ಆರಂಭಿಸಿರುವುದರಿಂದ ಅಗತ್ಯ ನೋಟುಗಳನ್ನು ಮುದ್ರಿಸಿರಬಹುದು ಎಂದು ಭಾವಿಸಬಹುದು.

1.578 ಲಕ್ಷ ಕೋಟಿ ರೂ. 500 ಮುಖಬೆಲೆಯ ನೋಟುಗಳು

1.578 ಲಕ್ಷ ಕೋಟಿ ರೂ. 500 ಮುಖಬೆಲೆಯ ನೋಟುಗಳು

ನವೆಂಬರ್ 10ರಿಂದ ರೂ. 500 ಮುಖಬೆಲೆಯ ನೋಟುಗಳ ಮುದ್ರಣ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಲಾಗಿದೆ.

ಇದರಂತೆ ದೇಶದಲ್ಲಿರುವ ಮುದ್ರಣಾಲಯಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೂ ಸಹ 1,578 ಲಕ್ಷ ಕೋಟಿ ನೋಟುಗಳನ್ನು ಮುದ್ರಿಸಲು 5.9 ತಿಂಗಳು ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಅಂದರೆ ಹೊಸ ನೋಟುಗಳು ಸಂಪೂರ್ಣವಾಗಿ ದೇಶದಾದ್ಯಂತ ಚಲಾವಣೆಗೆ ಬರಬೇಕಾದರೆ ಮೇ ತಿಂಗಳ ವರೆಗೂ ಕಾಯಲೇಬೇಕು ಎಂದು ಅಂದಾಜಿಸಲಾಗುತ್ತಿದೆ.

English summary
Prime Minister Narendra Modi's administration may need until May 2017 to replenish the stock of now worthless bills, according to Saumitra Chaudhuri, an economist who advised Modi's predecessor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X