• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸದಿದ್ದರೆ ವಿತರಕರಿಗೆ ನಷ್ಟ

|
Google Oneindia Kannada News

ನವದೆಹಲಿ, ನವೆಂಬರ್ 10: ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳು ಕಂಡು ಬಂದಿವೆ. ಈ ಹಿನ್ನೆಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್, ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸುವಂತೆ ಮನವಿ ಮಾಡಿಕೊಂಡಿದೆ.

ವ್ಯಾಟ್ ಕಡಿತವು ಮಾರಾಟವನ್ನು ಹೆಚ್ಚಿಸುತ್ತದೆ ಮತ್ತು ಸಂಭಾವ್ಯ ಆರ್ಥಿಕ ಬಿಕ್ಕಟ್ಟನ್ನು ತಡೆಯಬಹುದು ಎಂದು ವಿತರಕರು ಹೇಳಿದ್ದಾರೆ. ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಉತ್ತರ ಪ್ರದೇಶಕ್ಕಿಂತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 9 ರೂ. ಮತ್ತು ಡೀಸೆಲ್ ಬೆಲೆ 2 ರೂ.ಗಳಷ್ಟು ಹೆಚ್ಚಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸುಂಕ ಇಳಿಕೆ ಪರಿಣಾಮ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆಸುಂಕ ಇಳಿಕೆ ಪರಿಣಾಮ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿಯಲ್ಲಿ ಹೆಚ್ಚಿನ ವ್ಯಾಟ್ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ದೆಹಲಿಯ ಪೆಟ್ರೋಲ್ ಪಂಪ್‌ಗಳ ಮಾರಾಟ ಮತ್ತು ರಾಜ್ಯಕ್ಕೆ ಆದಾಯದ ದುಸ್ತರವಾಗಲಿದ್ದು, ನಷ್ಟವಾಗುತ್ತದೆ "ಎಂದು ದೆಹಲಿ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅನುರಾಗ್ ನಾರಾಯಣ್ ಪತ್ರದಲ್ಲಿ ತಿಳಿಸಿದ್ದಾರೆ. "ಚುನಾವಣೆ ಸಮಯದಲ್ಲಿ ಸಹಾಯ ಮಾಡುವ ವ್ಯಾಟ್ ಅನ್ನು ಕಡಿಮೆ ಮಾಡಲು ನಾವು ದೆಹಲಿ ಸರ್ಕಾರವನ್ನು ವಿನಂತಿಸುತ್ತೇವೆ. ಆಗ ನಮ್ಮ ಮಾರಾಟ ಬೇರೆ ರಾಜ್ಯಗಳಿಗೆ ಹೋಗುವುದಿಲ್ಲ; ಇಲ್ಲಿ ಮಾರಾಟವು ಶೇ.50ರಷ್ಟು ಕಡಿಮೆಯಾಗಿದೆ," ಎಂದು ನರೇನ್ ಪತ್ರದಲ್ಲಿ ಬರೆದಿದ್ದಾರೆ.

ನವದೆಹಲಿಯಲ್ಲಿ ವ್ಯಾಟ್ ಏರಿಳಿತದ ಮಾಹಿತಿ:

ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯ ವ್ಯಾಟ್ ದರ ಯಾವ ರೀತಿ ವ್ಯತ್ಯಾಸವಾಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 2014ರಲ್ಲಿ ಶೇ.20ರಷ್ಟಿದ್ದ ಪೆಟ್ರೋಲ್ ಮೇಲಿನ ವ್ಯಾಟ್ 2020ರ ವೇಳೆಗೆ ಶೇ.30ರಷ್ಟಾಗಿದೆ. ಇದೇ ಅವಧಿಯಲ್ಲಿ ಡೀಸೆಲ್ ಮೇಲೆ ಶೇ.12.50ರಷ್ಟಿದ್ದ ಮೌಲ್ಯವರ್ಧಿತ ತೆರಿಗೆಯನ್ನು ಶೇ.16.75ಕ್ಕೆ ಏರಿಸಲಾಗಿದೆ ಎಂದು ವಿತರಕರ ಸಂಘದ ಪತ್ರದಲ್ಲಿ ಉಲ್ಲೇಖಿಸಿದೆ.

ದೆಹಲಿ ಇಂಧನ ದರ ಮತ್ತು ವ್ಯಾಟ್ ಕುರಿತು ಪ್ರಮುಖ ಅಂಶಗಳು:
* ನವದೆಹಲಿಯಲ್ಲಿ 2014 ರಿಂದ ಇಂಧನದ ಮೇಲಿನ ವ್ಯಾಟ್ ಅನ್ನು ಆರು ಬಾರಿ ಹೆಚ್ಚಿಸಲಾಗಿದೆ
* ದೆಹಲಿ ಸರ್ಕಾರವು ಜುಲೈ 31, 2020 ರಂದು ಎರಡೂ ಇಂಧನ ಉತ್ಪನ್ನಗಳ ಮೇಲಿನ ವ್ಯಾಟ್ ಅನ್ನು ಕೊನೆಯದಾಗಿ ಹೆಚ್ಚಿಸಿತು
* ಪೆಟ್ರೋಲ್ ಮಾರಾಟವು 2014 ರಲ್ಲಿ ಮಾಸಿಕ ಸರಾಸರಿ 11 ಕೋಟಿ ಲೀಟರ್‌ನಿಂದ 2021 ರಲ್ಲಿ 8 ಕೋಟಿ ಲೀಟರ್‌ಗೆ ಇಳಿದಿದೆ ಎಂದು ನರೇನ್ ಉಲ್ಲೇಖಿಸಿದ್ದಾರೆ
* 2014 ರಲ್ಲಿ ಡೀಸೆಲ್ ಮಾರಾಟವು 13 ಕೋಟಿಯಿಂದ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದ್ದು, ಪ್ರಸ್ತುತ ಕೇವಲ 5 ಕೋಟಿ ಲೀಟರ್‌ಗೆ ತಲುಪಿದೆ
* ವಿತರಕರ ಸಂಘದ ಪ್ರಕಾರ, ದೆಹಲಿಯ ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಉತ್ತರ ಪ್ರದೇಶದ ಮಾರಾಟದ ಸರಾಸರಿ ಬೆಳವಣಿಗೆಯು "ಎರಡರಷ್ಟು ಶೇಕಡಾವಾರು ಅಂಕಿ-ಅಂಶಗಳನ್ನು" ಹೊಂದಿದೆ
* ದೆಹಲಿಯಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಬೆಲೆ 104.10 ರೂ. ಆಗಿದ್ದರೆ ನೋಯ್ಡಾದಲ್ಲಿ ಅದು 95.49 ರೂ, ಗುರ್ಗಾಂವ್‌ನಲ್ಲಿ 95.88 ರೂ, ಮತ್ತು ಗಾಜಿಯಾಬಾದ್‌ನಲ್ಲಿ 95.24 ರೂಪಾಯಿ ಇದೆ
* ಉತ್ತರ ಪ್ರದೇಶ ಮತ್ತು ಹರಿಯಾಣ ಎರಡೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಳೆದ ವಾರ ಲೀಟರ್‌ಗೆ 12 ರೂಪಾಯಿಯಿದ್ದು, ಇಂಧನ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
* ನರೇನ್ ಮತ್ತು ಇತರ ವಿತರಕರು ಮಾರಾಟ ಮತ್ತು ಆದಾಯವನ್ನು ಹೆಚ್ಚಿಸಲು ಮತ್ತು ಇಂಧನಗಳ ಕಳ್ಳಸಾಗಣೆಯನ್ನು ತಡೆಯಲು ಉತ್ತರ ಪ್ರದೇಶ ಮತ್ತು ಹರಿಯಾಣಕ್ಕಿಂತ ಹೆಚ್ಚು ವ್ಯಾಟ್ ಅನ್ನು ಕಡಿಮೆ ಮಾಡಲು ದೆಹಲಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ

English summary
Petrol, Diesel Prices in Delhi to Go Down?; Dealers Asking to Cut VAT on Fuels Citing Revenue Loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X