ಆಗಸ್ಟ್ 27ಕ್ಕೆ ಪತಂಜಲಿ 'ಕಿಂಭೋ' ಮೆಸೇಜಿಂಗ್ ಆಪ್ ಬಿಡುಗಡೆ
ನವದೆಹಲಿ, ಆಗಸ್ಟ್ 15: ಯೋಗ ಗುರು ಬಾಬಾ ರಾಮದೇವ್ ಮಾಲೀಕತ್ವದ ಮೆಸೇಜಿಂಗ್ ಆಪ್ 'ಕಿಂಭೋ' ಹೊಸ ರೂಪದೊಂದಿಗೆ ಆಗಸ್ಟ್ 27ರಂದು ಬಿಡುಗಡೆಯಾಗುತ್ತಿದೆ.
ಆಪ್‌ನಲ್ಲಿದ್ದ ಎಲ್ಲ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಟ್ವಿಟ್ಟರ್ ಖಾತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿರುವ ಪತಂಜಲಿ ಯೋಗಪೀಠ ಹರಿದ್ವಾರದ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಈ ಮಾಹಿತಿ ನೀಡಿದ್ದಾರೆ.

ಹೊಸ ಮತ್ತು ಅತ್ಯಾಧುನಿಕ ವಿಶೇಷಗಳೊಂದಿಗೆ ಕಿಂಭೋ ಆಪ್ ಸಿದ್ಧವಾಗಿದೆ. ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಎಲ್ಲ ಸುಧಾರಣೆಗಳನ್ನು ಇದು ಒಳಗೊಂಡಿದ್ದು, ಆಗಸ್ಟ್ 27ರಂದು ಆಪ್ ಲಾಂಚ್ ಆಗಲಿದೆ ಎಂದು ಅವರು ತಿಳಿಸಿದರು.
ಕಿಂಭೋ ಆಪ್‌ನ ಮೊದಲ ಅಧಿಕೃತ ಪ್ರಕಟಣೆಯನ್ನು ಮೇ ತಿಂಗಳಿನಲ್ಲಿ ಮಾಡಲಾಗಿತ್ತು. ಈಗ ಮಾರುಕಟ್ಟೆಯಲ್ಲಿರುವ ಎಲ್ಲ ಮೆಸೇಜಿಂಗ್ ಆಪ್‌ಗಳಿಗೆ ಪ್ರಮುಖ ಸ್ಪರ್ಧಿಯಾಗುವುದಾಗಿ ಕಂಪೆನಿ ಹೇಳಿಕೊಂಡಿತ್ತು.
ಆದರೆ, ಆಪ್ ಬಿಡುಗಡೆಯಾದ ಮರುದಿನವೇ ಭದ್ರತೆ ಹಾಗೂ ಖಾಸಗಿತನದ ಸಮಸ್ಯೆಯ ಕಾರಣಗಳಿಂದ ಅದನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಐಓಎಸ್‌ನಿಂದ ತೆಗೆದುಹಾಕಲಾಗಿತ್ತು.
ಈ ಆಪ್ ಬಿಡುಗಡೆಯಾದ ಬೆನ್ನಲ್ಲೇ ಇದೇ ರೀತಿಯ ಅನೇಕ ಆಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದ್ದವು. ಆದರೆ, ಈ ಯಾವ ಆಪ್ ಕೂಡ ಕಂಪೆನಿಗೆ ಸಂಬಂಧಿಸಿದ್ದಲ್ಲ ಎಂದು ಪತಂಜಲಿ ವಕ್ತಾರ ಎಸ್.ಕೆ. ತಿಜರಿವಾಲಾ ಸ್ಪಷ್ಟಪಡಿಸಿದ್ದರು.
ಈ ಹಿಂದೆ ಬಿಡುಗಡೆಯಾಗಿದ್ದ ಕಿಂಭೋ ಆಪ್ ವಾಟ್ಸಾಪ್ ಅನ್ನೇ ನಕಲು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.












Click it and Unblock the Notifications