ಪಾಕಿಸ್ತಾನದ ಬೆಂಬಲಕ್ಕೆ ನಿಂತಿವೇ ವಿಪಕ್ಷಗಳು? ಬಿಜೆಪಿ ಲೇವಡಿ
ನವದೆಹಲಿ, ಫೆಬ್ರವರಿ 28: ವಿಪಕ್ಷಗಳು ಭಾರತೀಯ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡುತ್ತಿರುವ ಹೇಳಿಕೆಗಳು ಯಾರಿಗೆ ಸಂತಸ ನೀಡುತ್ತಿದೆ? ಭಾರತಕ್ಕಂತೂ ಅಲ್ಲವೇ ಅಲ್ಲ, ಪಾಕಿಸ್ತಾನಕ್ಕೆ, ಅದರ ಮಾಧ್ಯಮಕ್ಕೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಏರ್ಪಡುವ ಸ್ಥಿತಿ ನಿರ್ಮಾಣವಾಗಿರುವ ಕಾರಣ ಬುಧವಾರ 21 ಪಕ್ಷದ ಮುಖಂಡರು ಸಂಸತ್ತಿನಲ್ಲಿ ಸಭೆ ನಡೆಸಿದರು.
ಸಭೆಯ ಬಳಿಕೆ ಮಾತನಾಡಿದ ವಿಪಕ್ಷಗಳ ನಾಯಕರು, ಭಾರತ-ಪಾಕ್ ನಡುವಿನ ಸಂದಿಗ್ಧ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದಿದ್ದವು. 'ನಮ್ಮ ಯೋಧರ ಬಲಿದಾನವನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ' ಎಂದಿದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ವಿಪಕ್ಷಗಳ ಹೇಳಿಕೆಗೆ ಆಧಾರವಿಲ್ಲ. ಅವರ ಹೇಳಿಕೆಯಿಂದ ಸಂತಸವಾಗಿದ್ದು, ಪಾಕಿಸ್ತಾನಕ್ಕೆ ಮತ್ತು ಅದರ ಮಾಧ್ಯಮಕ್ಕೆ" ಎಂದಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿ, "ಇಂಥ ವಿಷಯಗಳಲ್ಲಿ ಸೂಕ್ಷ್ಮವಾಗಿ ವರ್ತಿಸುವುದನ್ನು ಕಲಿಯಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲ ಎಮಬುದನ್ನು ತೋರಿಸುವ ರೀತಿಯಲ್ಲಿ ಹೇಳಿಕೆ ನೀಡಬಾರದು" ಎಂದಿದ್ದಾರೆ.












Click it and Unblock the Notifications