ಶಾ ಸಮ್ಮುಖ 100ಕ್ಕೂ ಹೆಚ್ಚು ಸಿಇಓಗಳು ಬಿಜೆಪಿ ತೆಕ್ಕೆಗೆ
ನವದೆಹಲಿ, ಫೆ. 2: ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಭಾರತದಲ್ಲಿ ಉದ್ಯಮಿಗಳಿಗೆ ಕಂಪನಿಗಳಿಗೆ ರತ್ನಗಂಬಳಿ ಹಾಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್ ಕಂಪನಿಗಳಿಗೆ ಅಪ್ಯಾಯಮಾನವಾಗಿದ್ದಾರೆ. ಎಷ್ಟೆಂದರೆ, 100ಕ್ಕೂ ಹೆಚ್ಚು ಕಂಪನಿಗಳ ಸಿಇಒ ಗಳು ಬಿಜೆಪಿ ಸೇರಿದ್ದಾರೆ!
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಯುವಮೋರ್ಚಾ ಅಧ್ಯಕ್ಷ ಅನುರಾಗ್ ಠಾಕೂರ್ ಎದುರು ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆಯನ್ನು ಅಮಿತ್ ಶಾ ಹೀಗೆ ವರ್ಣಿಸಿದ್ದಾರೆ. "ವಿವಿಧ ಕಂಪನಿಗಳ ಸಿಇಒಗಳು ಸೇರಿರುವುದು ಬಿಜೆಪಿ ಪಕ್ಷವನ್ನಲ್ಲ, ಬದಲಿಗೆ ಕುಟುಂಬವನ್ನು!". [ಬಿಜೆಪಿ ಸದಸ್ಯರಾಗಲು ಇಲ್ಲಿ ಕ್ಲಿಕ್ಕಿಸಿ]

ಇದೇ ಸಂದರ್ಭದಲ್ಲಿ ಜಿಎಸ್‌ಟಿ ಜಾರಿ ಕುರಿತು ಅಮಿತ್ ಶಾ ಮುನ್ಸೂಚನೆ ನೀಡಿದರು. "ಉದ್ಯಮಿಗಳು ಆಶಿಸುತ್ತಿರುವ ಜಿಎಸ್‌ಟಿ ತೆರಿಗೆ ಪದ್ಧತಿಯು 2016ರ ಏಪ್ರಿಲ್‌ನಿಂದ ಆರಂಭವಾಗುವ ನಿರೀಕ್ಷೆಯಿದೆ. ಮೇಕ್ ಇನ್ ಇಂಡಿಯಾ, ಭೂ ಸ್ವಾಧೀನ ಕಾಯ್ದೆ, ಗಣಿ ಕಾಯ್ದೆಗಳನ್ನು ದೇಶದಲ್ಲಿ ಜಾರಿಗೊಳಿಸುವ ಮೂಲಕ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದರಿಂದ ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂಬ ವಿಶ್ವಾಸವಿದೆ" ಎಂದರು. [ಸುಂದರಿ ಶಾಜಿಯಾಗೆ ಮತ ಹಾಕ್ತಾರಂತೆ ಕಾಟ್ಜು]
"ಉದ್ಯಮಿಗಳು ಈ ಹೊಸ ಕಾನೂನುಗಳ ಲಾಭ ಪಡೆಯಬೇಕು. ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಬೇಕು" ಎಂದರು. "ಹಲವು ಕಂಪನಿಗಳ ಮುಖ್ಯಸ್ಥರು ಬಿಜೆಪಿ ಸೇರಿದ್ದಾರೆ. ಆದ್ದರಿಂದ ಈ ಕಂಪನಿಗಳ ಉದ್ಯೋಗಿಗಳು ಕೂಡ ಬಿಜೆಪಿ ಬೆಂಬಲಿಸುವ ನಿರೀಕ್ಷೆ ಇದೆ" ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಮೋದಿ ನಾಯಕತ್ವಕ್ಕೆ ಜೈಪ್ರದಾ]












Click it and Unblock the Notifications