ಪೆಟ್ರೋಲ್ ದರ ಇಳಿಕೆ, ಡೀಸೆಲ್ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಇಳಿಸಿವೆ.
ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಪೆಟ್ರೋಲ್ ಬೆಲೆಯನ್ನು 3.05 ಪೈಸೆ ಇಳಿಕೆ ಮಾಡಲಾಗಿದೆ. ಇದಕ್ಕೆ ಸ್ಥಳೀಯ ತೆರಿಗೆಗಳೂ ಸೇರಿ ಅಂದಾಜು ಪೆಟ್ರೋಲ್ ಬೆಲೆ ಲೀ.ಗೆ ಸುಮಾರು 3.50 ರೂ.ಇಳಿಕೆಯಾಗಿದೆ.
ಆದರೆ, ಡೀಸೆಲ್ ಬೆಲೆಯನ್ನು ಲೀ.50 ಪೈಸೆ ಹೆಚ್ಚಿಸುವ ಮೂಲಕ ಜನರಿಗೆ ಮತ್ತೊಂದು ರೀತಿಯಲ್ಲಿ ಹೊರೆ ಉಂಟುಮಾಡಿದೆ. ಕಳೆದ 5 ತಿಂಗಳಿಂದ ಅಂದರೆ, ಮೇ 1ರ ಬಳಿಕ ಪೆಟ್ರೋಲ್ ಸುಮಾರು 14 ರೂ. ಏರಿಕೆಯಾಗಿತ್ತು. (ಹಬ್ಬಕ್ಕೆ ಮುಂಚೆ ಈ ಬಾರಿ ಪೆಟ್ರೋಲ್ ಬೆಲೆ ಕಡಿಮೆ?)
ಕೆಲವು ದಿನಗಳ ಹಿಂದೆ ಪೆಟ್ರೋಲ್ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದರು. ಅದರಂತೆ ಬೆಲೆ ಇಳಿಕೆ ಮಾಡಲಾಗಿದೆ. 5 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಲಾಗಿದೆ.
ಪೆಟ್ರೋಲ್, ಡೀಸೆಲ್ ಉಳಿಸಲು ಕೇಂದ್ರ ಸರ್ಕಾರ ತೈಲ ಉಳಿಸಿ ಆಂದೋಲನವನ್ನು 6 ವಾರಗಳ ಕಾಲ ಹಮ್ಮಿಕೊಂಡಿದೆ. ಈ ಸಮಯದಲ್ಲೇ ಪೆಟ್ರೋಲ್ ಬೆಲೆ ಇಳಿಕೆಯಾಗಿದೆ. (ಇಂಧನ ಮಿತವ್ಯಯಕ್ಕಾಗಿ ಮೊಯ್ಲಿ ಐಡಿಯಾ)












Click it and Unblock the Notifications